ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಬಂದ್‌: ಜನ ಜೀವನ ಅಸ್ತವ್ಯಸ್ತ

Last Updated 28 ಜುಲೈ 2016, 9:50 IST
ಅಕ್ಷರ ಗಾತ್ರ
ADVERTISEMENT

ಹುಬ್ಬಳ್ಳಿ/ಬೆಳಗಾವಿ: ಮಹಾದಾಯಿ ನ್ಯಾಯಮಂಡಳಿಯ ಮಧ್ಯಂತರ  ತೀರ್ಪು ವಿರೋಧಿಸಿ ಕನ್ನಡಪರ ಸಂಘಟನೆಗಳು ಮತ್ತು ರೈತ ಸಂಘ ಕರೆ ನೀಡಿದ್ದ ಬಂದ್‌ಗೆ ಉತ್ತರ ಕರ್ನಾಟಕ ಭಾಗದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ  ಜಿಲ್ಲೆಗಳಲ್ಲಿ ಬಂದ್‌  ತೀವ್ರ ಸ್ವರೂಪ ಪಡೆದಿದ್ದು ವಾಹನ ಸಂಚಾರ ಸಂಪೂರ್ಣವಾಘಿ ಸ್ತಬ್ಧಗೊಂಡಿದೆ.  ಶಾಲೆ–ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಅಂಗಡಿ  ಮುಂಗಟ್ಟುಗಳು ಮುಚ್ಚಿದ್ದು ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಗದಗ, ನರಗುಂದದಲ್ಲಿ ರೈತರ ಆಕ್ರೋಶ ಮುಗಿಲು ಮುಟ್ಟಿದೆ.  ಗದುಗಿನಲ್ಲಿ ಗುರುವಾರ ಬೆಳ್ಳಂ ಬೆಳಿಗ್ಗೆಯೇ ಗ್ರೇನ್‌ ತರಕಾರಿ ಮಾರುಕಟ್ಟೆ ಬಂದ್‌ ಮಾಡಿಸಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದರು. ಪ್ರತಿಭಟನಾಕಾರರು ಪೊಲೀಸರ ಎಚ್ಚರಿಕೆಗೆ ಬಗ್ಗದಿದ್ದಾಗ ಗಾಂಧಿ ವೃತ್ತದಲ್ಲಿ ಮತ್ತೊಮ್ಮೆ ಲಾಠಿ ರುಚಿ ತೋರಿಸಿದರು.



ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ  ಮಹಿಳೆಯರು  ಖಾಲಿ ಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.  ಬಾಗಲಕೋಟೆ ಜಿಲ್ಲೆಯ ಬಾದಾಮಿ, ಕುಳಗೇರಿ, ಕೆರೂರು,ಬಲಕುಂದಿ, ಹುನಗುಂದ, ಇಳಕಲ್, ಗುಡೂರು, ಪಟ್ಟದಕಲ್, ಗುಳೇದಗುಡ್ಡ, ಅಮೀನಗಡ ಪಟ್ಟಣಗಳಲ್ಲೂ ಬಂದ್‌ ಯಶಸ್ವಿಯಾಗಿದೆ.


ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದಲ್ಲಿ ಮಹಾದಾಯಿ ಹೋರಾಟ ತೀವ್ರಗೊಂಡಿದ್ದು  ಪ್ರತಿಭಟನಾಕಾರರು ಬಿಸ್ಸೆನ್ನೆಲ್ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ   ಕಚೇರಿಯಲ್ಲಿದ್ದ  10 ಕಂಪ್ಯೂಟರ್ಗಳು ಭಸ್ಮಗೊಂಡಿವೆ. ಬೆಳಿಗ್ಗೆಯಿಂದಲೇ ರೈತ ಹೋರಾಟಗಾರರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯುತ್ತಿತ್ತು.



ಪೋಲಿಸರತ್ತ ಕಲ್ಲು:  ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿದ್ದಾರೆ. ಪಟ್ಟಣದ ಹೊರವಲಯದ ಬಸ್ ಡಿಫೋಗೆ ನುಗ್ಗಿ ಬೆಂಕಿ ಹಚ್ಚಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ. ಅಪಾರ ಸಂಖ್ಯೆಯ ಸಾರ್ವಜನಿಕರು, ಮಹಿಳೆಯರು, ಮಕ್ಕಳು, ಕನ್ನಡಪರ ಸಂಘಟನೆಗಳು, ರೈತ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT