ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ವಲಯಕ್ಕೆ ಮುನ್ನಡೆ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಹನುಮಂತ ಸಿಂಗ್‌ ಟ್ರೋಫಿ ಗಾಗಿ ನಡೆಯುತ್ತಿರುವ ಅಂತರ ವಲಯ (16 ವರ್ಷದೊಳಗಿನವರ) ಕ್ರಿಕೆಟ್‌ ಟೂರ್ನಿಯ ಎರಡೂ ಲೀಗ್‌ ಪಂದ್ಯಗಳು ಬುಧವಾರ ನಿರೀಕ್ಷೆಯಂತೆ ‘ಡ್ರಾ’ದಲ್ಲಿ ಮುಕ್ತಾಯಗೊಂಡವು. ಪಶ್ಚಿಮ ವಲಯ, ಎದುರಾಳಿ ದಕ್ಷಿಣ ವಲಯ ವಿರುದ್ಧ 91 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದರೆ, ಇನ್ನೊಂದು ಪಂದ್ಯದಲ್ಲಿ ಉತ್ತರ ವಲಯ, ಕೇಂದ್ರ ವಲಯದ ಪ್ರತಿ ರೋಧ ಮೆಟ್ಟಿನಿಂತು 45 ರನ್‌ಗಳ ಇನಿಂಗ್ಸ್‌ ಮುನ್ನಡೆ ಗಿಟ್ಟಿಸಿಕೊಂಡಿತು.

ಜೂನ್‌ 5 ರಿಂದ 7ರವರೆಗೆ ನಡೆಯುವ ಅಂತಿಮ ಹಂತದ ಲೀಗ್‌ ಪಂದ್ಯದಲ್ಲಿ ಉತ್ತರ ವಲಯ ಮತ್ತು ಪಶ್ಚಿಮ ವಲಯ ಎದುರಾಗಲಿದ್ದು, ಇದು ಒಂದು ರೀತಿ ಫೈನಲ್‌ನಂತಾಗಿದೆ. ಇದರಲ್ಲಿ ಗೆದ್ದ ತಂಡ ಚಾಂಪಿಯನ್‌ ಆಗಲಿದೆ. ಇನಿಂಗ್ಸ್‌ ಜಯಕ್ಕಾಗಿ 1 ಬೋನಸ್‌ ಪಾಯಿಂಟ್ಸ್‌ ಸೇರಿ ಉತ್ತರ ವಲಯ 3 ಪಂದ್ಯಗಳಿಂದ ಒಟ್ಟು 12 ಪಾಯಿಂಟ್ಸ್‌ ಕೂಡಿಹಾಕಿದೆ. ಪಶ್ಚಿಮ ವಲಯ ಇಷ್ಟೇ ಪಂದ್ಯಗಳಿಂದ 12 ಪಾಯಿಂಟ್ಸ್‌ ಸಂಗ್ರಹಿಸಿದೆ.

ಪೂರ್ವ ವಲಯ ಮತ್ತು ಕೇಂದ್ರ ವಲಯ ನಡುವಣ ಇನ್ನೊಂದು ಲೀಗ್‌ ಪಂದ್ಯ ಔಪಚಾರಕ್ಕಷ್ಟೇ ನಡೆಯಬೇಕಾಗಿದೆ. ದಕ್ಷಿಣ ವಲಯ 4 ಪಂದ್ಯಗಳಿಂದ 6 ಪಾಯಿಂಟ್‌ ಸಂಗ್ರಹಿಸಿ ಲೀಗ್‌ ವ್ಯವಹಾರ ಮುಗಿಸಿದೆ. ಕೇಂದ್ರ ವಲಯ 3 ಪಂದ್ಯಗಳಿಂದ 5 ಪಾಯಿಂಟ್‌ ಸಂಗ್ರಹಿಸಿದ್ದರೆ, ಪೂರ್ವ ವಲಯ 3 ಪಂದ್ಯಗಳಿಂದ 1 ಪಾಯಿಂಟ್‌ ಶೇಖರಿಸಿ ಕೊನೆಯ ಸ್ಥಾನದಲ್ಲಿದೆ.

ಪೆಸಿಟ್‌ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯದ 397 ರನ್‌ಗಳಿಗೆ ಉತ್ತರವಾಗಿ ಎಚ್ಚರಿಕೆಯ ಆಟ ಮುಂದುವರಿಸಿದ ದಕ್ಷಿಣ ವಲಯ ದಿನವಿಡೀ ಆಡಿದರೂ 3 ಓವರುಗಳಿರುವಂತೆ 306 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತು.

ಸ್ಕೋರುಗಳು (ಪೆಸಿಟ್‌ ಕ್ರೀಡಾಂಗಣ): ಪಶ್ಚಿಮ ವಲಯ: 120.3 ಓವರುಗಳಲ್ಲಿ 397; ದಕ್ಷಿಣ ವಲಯ: 150 ಓವರುಗಳಲ್ಲಿ 306 (ದೇವದತ್ತ ಪಡಿಕಲ್‌ 122, ನಿಖಿನ್‌ ಜೋಸ್‌ 37, ಗೌತಮ್‌ ಸಾಗರ್‌ 36, ಜಗನ್ನಾಥ್‌ ಔಟಾಗದೇ 48; ನಿನಾದ್‌ ರತ್ವಾ 76ಕ್ಕೆ4, ಅಭಿಷೇಕ್‌ 53ಕ್ಕೆ2, ಸಿದ್ಧಾರ್ಥ್‌ 57ಕ್ಕೆ4).

ಜೆಎನ್‌ಎನ್‌ಸಿಇ ಕ್ರೀಡಾಂಗಣ: ಉತ್ತರ ವಲಯ: 7 ವಿಕೆಟ್‌ಗೆ 472 ಡಿಕ್ಲೇರ್‌ ಮತ್ತು 10.3 ಓವರುಗಳಲ್ಲಿ 1 ವಿಕೆಟ್‌ಗೆ 57; ಕೇಂದ್ರ ವಲಯ: 147.4 ಓವರುಗಳಲ್ಲಿ 427 (ರಾಹುಲ್‌ ಚಂದ್ರೋಲ್‌ 104, ಪ್ರಿಯಂ ಗರ್ಗ್‌ 132, ಪೂರ್ನಕ್‌ ತ್ಯಾಗಿ 37, ರಾಹುಲ್‌ ಚಾಹೆರ್‌ 42; ರೇಷಮ್‌ ಶರ್ಮ 92ಕ್ಕೆ6).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT