ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಂಪುರ್‌–ಕಟ್ರಾ ರೈಲು ಮಾರ್ಗಕ್ಕೆ ಚಾಲನೆ

Last Updated 4 ಜುಲೈ 2014, 13:10 IST
ಅಕ್ಷರ ಗಾತ್ರ

ಕಟ್ರಾ /ಜಮ್ಮು ಮತ್ತು ಕಾಶ್ಮೀರ (ಐಎಎನ್‌ಎಸ್‌): ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ನರೇಂದ್ರ ಮೋದಿ ಅವರು, ಶುಕ್ರವಾರ ಇಲ್ಲಿ ವೈಷ್ಣೋದೇವಿ ಯಾತ್ರಿಕರ ಅನುಕೂಲಕ್ಕಾಗಿ ಉದಂಪುರ್–ಕಟ್ರಾ ರೈಲು ಮಾರ್ಗಕ್ಕೆ ಚಾಲನೆ ನೀಡಿದರು. ‘ಶ್ರೀ ಶಕ್ತಿ ಎಕ್ಸ್‌ಪ್ರಸ್‌’ ಎಂದು ಈ ಮಾರ್ಗಕ್ಕೆ ಹೆಸರಿಡ­ಲಾಗಿದೆ.

‘ಉದಂಪುರ್ ಮತ್ತು ಕಟ್ರಾ ನಡುವೆ (25 ಕಿ.ಮೀ) ರೈಲು ಮಾರ್ಗ ಪ್ರಾರಂಭಿಸಬೇಕು, ಆ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು  ಎನ್ನುವುದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕನ­ಸಾಗಿತ್ತು. ಇದೀಗ ಈ ಕನಸು ನನಸಾಗಿದೆ’ ಎಂದು ಮೋದಿ  ಅವರು ರೈಲು ಮಾರ್ಗ ಉದ್ಘಾಟಿಸಿದ ಬಳಿಕ ಸುದ್ದಿಗಾರರಿಗೆ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರಳಿ ತರಲು ಸರ್ಕಾರ ಪ್ರಯ­ತ್ನಿಸಲಿದೆ. ಇಲ್ಲಿನ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಅಮರನಾಥ ಯಾತ್ರೆ, ಮತ್ತು ರಂಜಾನ್‌ ಪ್ರಾರಂಭ­ವಾಗಿರುವ ಸಂದರ್ಭದಲ್ಲೇ, ಈ ರೈಲು ಮಾರ್ಗಕ್ಕೆ ಚಾಲನೆ ನೀಡುತ್ತಿರುವುದು ಸಂತಸ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಶ್ಮೀರ ಕಣಿವೆಯಲ್ಲಿ ಜಲ ವಿದ್ಯುತ್‌ ಉತ್ಪಾದನೆ ಘಟಕವೊಂದನ್ನೂ ಮೋದಿ ಶುಕ್ರವಾರ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT