ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶಪೂರ್ವಕವಾಗಿ ಅಪಪ್ರಚಾರ: ಇರಾನಿ

ಶಾಲೆಗಳಿಗೆ ಕ್ರಿಸ್‌ಮಸ್‌ ರಜೆ ರದ್ದು ವಿವಾದ
Last Updated 15 ಡಿಸೆಂಬರ್ 2014, 19:53 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಉತ್ತಮ ಆಡ­ಳಿತ ದಿನ’ ಆಚರಣೆಗಾಗಿ ಈ  25ರಂದು ಕ್ರಿಸ್‌­ಮಸ್ ಹಬ್ಬದ ಸಂದರ್ಭದಲ್ಲಿ ಶಾಲೆಗಳು ತೆರೆದಿ­ರು­ತ್ತವೆ ಎಂಬ ‘ಮಾಧ್ಯಮ­ ವರದಿ­ಗಳು ಆಧಾರ­ರಹಿತ ಮತ್ತು ತಪ್ಪು ಮಾಹಿತಿಯಿಂದ ಕೂಡಿವೆ’ ಎಂದು ಕೇಂದ್ರ ಮಾನವ ಸಂಪನ್ಮೂಲ­ಗಳ ಅಭಿ­ವೃದ್ಧಿ ಸಚಿವೆ ಸ್ಮೃತಿ ಇರಾನಿ ಸೋಮ­ವಾರ ಇಲ್ಲಿ ಟೀಕಿಸಿದರು.

‘ವಿವಾದ ಹುಟ್ಟುಹಾಕುವ ಉದ್ದೇಶ­ದಿಂದಲೇ ಇಂತಹ ತಪ್ಪು ಮಾಹಿತಿಗಳನ್ನು ಒಳಗೊಂಡ ವರದಿಗಳನ್ನು ಪ್ರಕಟಿಸುತ್ತಿ­ರು­ವುದು ದುರದೃಷ್ಟಕರ’ ಎಂದು ಅವರು ಅಸಮಾಧಾನ ತೋರಿದರು.

ಕ್ರಿಸ್‌ಮಸ್ ಆಚರಣೆಗಾಗಿ ಶಾಲಾ ಕಾಲೇಜುಗಳಿಗೆ ರಜೆ ಇರುತ್ತದೆ. ಅಂದು  ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿ­ಕೊಂಡಿಲ್ಲ. ಈ ಬಗ್ಗೆ ತಮ್ಮ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಲಿದೆ ಎಂದು ಅವರು ಸಂಸತ್ ಭವನದ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.
‘ನಾನು ಸದಾ ಸಮಜಾಯಿಸಿ ನೀಡು­ತ್ತಿರಬೇಕು ಎನ್ನುವುದೇ ಇದರ ಉದ್ದೇಶ­ವಾಗಿರಬೇಕು’ ಎಂದೂ ಹೇಳಿದರು.
*ಸಂಸತ್‌ನಲ್ಲಿ ಭಾರಿ ಕೋಲಾಹಲ, ಸರ್ಕಾರ ನಿರಾಕರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT