ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಕನಿಷ್ಠ ಕೂಲಿಗೆ ಒತ್ತಾಯ

Last Updated 30 ಜುಲೈ 2014, 10:37 IST
ಅಕ್ಷರ ಗಾತ್ರ

ಗಂಗಾವತಿ: ಕೇಂದ್ರ ಸರ್ಕಾರದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸುಪ್ರೀಂಕೋರ್ಟ್‌  ಆದೇಶಿಸಿರುವಂತೆ ಕನಿಷ್ಠ ಕೂಲಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ  ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕ  ಪ್ರಾಂತ ರೈತ ಸಂಘ, ಕರ್ನಾಟಕ  ಪ್ರಾಂತ  ಕೃಷಿಕೂಲಿಕಾರರ ಸಂಘದ ಗಂಗಾವತಿ ತಾಲ್ಲೂಕು ಘಟಕದ ಕಚೇರಿಯಿಂದ ಆರಂಭವಾದ ಮೆರವಣಿಗೆ ತಾಲ್ಲೂಕು ಪಂಚಾಯಿತಿಗೆ ತೆರಳಿ ಮನವಿ ಸಲ್ಲಿಸಿತು.

ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಮಾತನಾಡಿ, ನರೇಗಾದಲ್ಲಿ ಕನಿಷ್ಠ ಕೂಲಿ ಪಾವತಿಸಬೇಕೆಂದು  ನ್ಯಾಯಾಲಯ ಆದೇಶ ನೀಡಿದೆ. ಆದರೆ ಜಾರಿಯಾಗಿಲ್ಲ ಎಂದರು.

ಪ್ರಾಂತ ರೈತ ಸಂಘದ ಅಧ್ಯಕ್ಷ ಎ. ಬಸವರಾಜ, ಕಾರ್ಯದರ್ಶಿ ಯಮನೂರಪ್ಪ, ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ಕಾರ್ಯದರ್ಶಿ ಹುಸೇನಪ್ಪ, ಕೂಲಿಕಾರರಾದ ಮಾರೆಮ್ಮ, ಕನಕಮ್ಮ, ಶ್ರೀನಿವಾಸ, ಹನುಮೇಶ, ಲಕ್ಷ್ಮಮ್ಮ, ಶೇಖಮ್ಮ, ಹನುಮಮ್ಮ, ಈಶಮ್ಮ, ಮಾರೆಮ್ಮ, ಹುಲಿಗೆಮ್ಮ, ಚಂದ್ರಪ್ಪ ಇತರರಿದ್ದರು.

ದಲಿತ ಹೋರಾಟ ಸಮಿತಿಗೆ ಆಯ್ಕೆ
ಕೊಪ್ಪಳ: ಡಾ.ಬಿ.ಆರ್‌.ಅಂಬೇಡ್ಕರ್‌ ದಲಿತ ಹೋರಾಟ ರಾಜ್ಯ ಸಮಿತಿಯ ಕೊಪ್ಪಳ ತಾಲ್ಲೂಕು ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ವಿವರ: ನಾಗರಾಜ ಛಲವಾದಿ (ಜಿಲ್ಲಾ ಗೌರವಾಧ್ಯಕ್ಷ), ರಂಗನಾಥ ಚನ್ನದಾಸರ (ಅಧ್ಯಕ್ಷ), ಬಸವರಾಜ ವಾಲ್ಮೀಕಿ (ಉಪಾಧ್ಯಕ್ಷ), ಬುಡಾನಸಾಬ (ಪ್ರಧಾನ ಕಾರ್ಯದರ್ಶಿ), ಮೌಲಾ ಹುಸೇನ (ಜಂಟಿ ಕಾರ್ಯದರ್ಶಿ), ಹನುಮಂತಪ್ಪ ವಾಲ್ಮೀಕಿ (ಸಂಘಟನಾ ಕಾರ್ಯದರ್ಶಿ), ಸಂಗಪ್ಪ ಕೊಪ್ಪಳ (ಖಜಾಂಚಿ).

ಆಯ್ಕೆ ಸಭೆಯಲ್ಲಿ ರಾಜ್ಯ ಸಮಿತಿ ಮುಖಂಡ ಹುಲಗಪ್ಪ ಮಾಗಿ, ಮಂಜುನಾಥ ದೊಡ್ಡಮನಿ, ಹೊನ್ನೂರಪ್ಪ ಢಣಾಪುರ, ಅಣ್ಣಪ್ಪ, ಪಂಪಣ್ಣ, ಪಾರ್ವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT