ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತೀಕರಣಕ್ಕೆ ಹೈಕೋರ್ಟ್ ಸಲಹೆ

ವಿಧಿ ವಿಜ್ಞಾನ ಪ್ರಯೋಗಾಲಯ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ವಿಧಿ ವಿಜ್ಞಾನ ಪ್ರಯೋ ಗಾಲಯಗಳನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಗಳ ಮಟ್ಟಕ್ಕೆ ಉನ್ನತೀಕರಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಶುಕ್ರವಾರ ಕ್ರಿಮಿನಲ್ ಪ್ರಕರಣ ವೊಂದರ ವಿಚಾರಣೆ ವೇಳೆ ಸರ್ಕಾರಿ ವಿಶೇಷ ವಕೀಲರು ‘ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಆದ್ದರಿಂದ ಇನ್ನಷ್ಟು ಕಾಲಾವಕಾಶ ನೀಡಿ’ ಎಂದು ನ್ಯಾಯಪೀಠಕ್ಕೆ ಅರುಹಿದರು.
ನ್ಯಾಯಮೂರ್ತಿ ಎ.ಎನ್.ವೇಣು ಗೋಪಾಲ ಅವರಿದ್ದ ಪೀಠವು ಈ ಮನವಿಗೆ ಪ್ರತಿಕ್ರಿಯಿಸಿ, ‘ರಾಜ್ಯವು ಇಂತಹ ವರದಿಗಳಿಗಾಗಿ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಗಳನ್ನೇ ನೆಚ್ಚಿ ಕೊಂಡು ಕೂರುವ ಬದಲಿಗೆ ಸ್ಥಳೀಯ ಪ್ರಯೋಗಾಲಯ­ಗಳನ್ನು  ಮೇಲ್ದರ್ಜೆಗೆ ಏರಿಸುವತ್ತ ಗಂಭೀರ ಗಮನ ಹರಿಸ ಬೇಕು’ ಎಂದು ಸಲಹೆ ನೀಡಿತು.

‘ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಜಿಲ್ಲೆಗೊಂದು ಇಂತಹ ಪ್ರಯೋಗಾ ಲಯ ಸ್ಥಾಪನೆ ಮಾಡಬಹುದು. ಇದ ರಿಂದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವೇಗ ಪಡೆಯುತ್ತದೆ. ಈ ನಿಟ್ಟಿನಲ್ಲಿ ಮುಂದಿನ ವಿಚಾರಣೆ ವೇಳೆಗೆ ಸರ್ಕಾರ ಸ್ಪಂದಿಸಿರುತ್ತದೆ ಎಂದು ಭಾವಿಸುತ್ತೇನೆ ಎಂಬುದಾಗಿ ಪೀಠವು ಹೇಳಿತು.

ಪಬ್ಲಿಕ್ ಪ್ರಾಸಿಕ್ಯೂಟರ್ ಕೊರತೆ: ‘ಜಿಲ್ಲಾ ಕೇಂದ್ರಗಳಲ್ಲಿ ಈಗ ಪಬ್ಲಿಕ್ ಪ್ರಾಸಿಕ್ಯೂಟರ್ ಕೊರತೆಯೂ ಕಕ್ಷಿದಾರ ರನ್ನು ಬಾಧಿಸುತ್ತಿದೆ’ ಎಂದು ಪೀಠವು ಇದೇ ವೇಳೆ ಸರ್ಕಾರಿ ವಕೀಲರ ಗಮನ ಸೆಳೆಯಿತು. ‘ಈ ಮೊದಲು ಪಬ್ಲಿಕ್ ಪ್ರಾಸಿ ಕ್ಯೂಟರ್‌ ನೇಮಕ ಕಾನೂನು ಇಲಾಖೆ ಯಿಂದಲೇ ನಡೆಯುತ್ತಿತ್ತು. ಆದರೆ ಈಗ ಇದನ್ನು ಗೃಹ ಇಲಾಖೆ ವ್ಯಾಪ್ತಿಗೆ ವರ್ಗಾಯಿಸಲಾಗಿದೆ.

ಬಹ ಳಷ್ಟು ಕಡೆ 3–4 ಜನರ ಕೆಲಸವನ್ನು ಒಬ್ಬರೇ ಪಬ್ಲಿಕ್ ಪ್ರಾಸಿಕ್ಯೂಟರ್ ನಿರ್ವಹಿಸುತ್ತಿ ರುವುದು ಗಮನಕ್ಕೆ ಬಂದಿದೆ. ಇದು ವ್ಯವಸ್ಥೆ ನ್ಯಾಯಾಂಗದ ಪ್ರಕ್ರಿಯೆಗೆ ಸೂಕ್ತ ವಾಗಿ ಸ್ಪಂದಿಸುತ್ತಿಲ್ಲ ಎಂಬುದರ ಪ್ರತೀಕ’ ಎಂದು ಪೀಠವು ಅಸಮಾಧಾನ ವ್ಯಕ್ತ ಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT