ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನಿಕೃಷ್ಣನ್‌ ಪುದೂರ್‌

ನಿಧನ ವಾರ್ತೆ
Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗುರುವಾಯೂರು(ಪಿಟಿಐ): ಇಲ್ಲಿನ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನದ ಸುತ್ತ­ಮುತ್ತಲಿನ ಬದುಕನ್ನು ತಮ್ಮ ಕಾದಂಬರಿ ಹಾಗೂ ಕತೆಗಳಲ್ಲಿ ಹಿಡಿದಿಟ್ಟ ಹಿರಿಯ ಮಲೆ­ಯಾಳಂ ಕಾದಂಬರಿ­ಕಾರ, ಲೇಖಕ ಉನ್ನಿ­ಕೃಷ್ಣನ್‌ ಪುದೂರ್್‌(81) ಬುಧವಾರ ನಿಧನರಾದರು.

ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿರುವ ಉನ್ನಿಕೃಷ್ಣನ್ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಗಾಗಿ ಚಾವಕ್ಕಾಡ್‍‌ನ ಖಾಸಗಿ ಆಸ್ಪತ್ರೆ­ಯಲ್ಲಿಚಿಕಿತ್ಸೆ ಪಡೆಯುತ್ತಿದ್ದರು.

ಇವರು ತನ್ನ ಪ್ರಸಿದ್ಧ ಕಾದಂಬರಿ­ಗಳಾದ ‘ಬಲಿಕಲ್ಲ್’ ಹಾಗೂ ‘ಅನಪ್ಪಗ’­ದಲ್ಲಿ ಗುರುವಾಯೂರು ದೇವಾಲಯದಲ್ಲಿ ಪರಿಚಾರಕ ವೃತ್ತಿ ನಡೆಸುವ ಆನೆ ಮಾವುತರು ಮತ್ತಿತರ ಕಾರ್ಮಿಕರ ಸಂಕಟಗಳನ್ನು ಅನಾವರಣಗೊಳಿಸದ್ದಾರೆ. ಉನ್ನಿಕೃಷ್ಣನ್ ಅವರು ಗುರುವಾಯೂರು ಶ್ರೀಕೃಷ್ಣ ದೇವಾಲಯ­ದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿ­ಸಿದ್ದ­ಲ್ಲದೇ ದೇವಾ­ಲಯದ ಕೆಲಸಗಾರರ  ಸಂಘ­ಟನೆ ಕಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT