ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆಗೆ ಸಜ್ಜು

Last Updated 8 ಫೆಬ್ರುವರಿ 2016, 20:23 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಸಾಮಾನ್ಯ ಚುನಾವಣೆಗೆ ಹೋಲಿಸಿದರೆ ಈ ಸಲದ ಉಪಚುನಾ ವಣೆಯಲ್ಲಿ ಸುಮಾರು 12 ಸಾವಿರ ಮತದಾರರು ಹೆಚ್ಚಾಗಿದ್ದು, ಮತದಾನಕ್ಕೆ 237 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಜಿ. ಕುಮಾರ್‌ ನಾಯಕ್‌ ತಿಳಿಸಿದರು.

ಸೋಮವಾರ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

‘ಬೆಂಗಳೂರು ನಗರದ ತುಂಬಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರತಿ ಯೊಂದು ಚಟುವಟಿಕೆಯನ್ನು ಸೂಕ್ಷ್ಮ ವಾಗಿ ಗಮನಿಸಲಾಗುತ್ತಿದೆ. ಬ್ಯಾಂಕ್‌ ನಿಂದ ಅಧಿಕ ಮೊತ್ತ ‘ಡ್ರಾ’ ಮಾಡುವ ಪ್ರಕರಣಗಳು ಹಾಗೂ ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗುವ ಬರ್ತ್‌ಡೇ ಪಾರ್ಟಿಗಳ ಮೇಲೂ ನಿಗಾ ಇಡಲಾಗಿದೆ’ ಎಂದು ವಿವರಿಸಿದರು.

‘ಮದ್ಯ ಮಾರಾಟದ ಲೆಕ್ಕವನ್ನು ಪ್ರತಿದಿನ ಪಡೆಯಲಾಗುತ್ತಿದೆ. ಅಸಹಜ ಮಾರಾಟ ಪ್ರಕರಣಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು. ‘ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ಇದು ವರೆಗೆ ಎಷ್ಟು ಪ್ರಕರಣಗಳು ದಾಖ ಲಾಗಿವೆ’ ಎಂಬ ಪ್ರಶ್ನೆಗೆ, ‘ಒಂದೂ ಇಲ್ಲ’ ಎಂದು ಆಯುಕ್ತರು ಉತ್ತರಿಸಿದರು.

‘ಹಾಗಾದರೆ ಅಕ್ರಮಗಳು ನಡೆದೇ ಇಲ್ಲವೆ’ ಎಂದು ಪತ್ರಕರ್ತರು ಪಟ್ಟು ಬಿಡದೆ ಕೇಳಿದಾಗ, ‘ನಮ್ಮ ಗಮನಕ್ಕೆ ಬಂದಿಲ್ಲ. ದೂರು ಬಂದರೆ ಆ ಕ್ಷಣವೇ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿ ದರು. ‘ಮಾಧ್ಯಮಗಳಲ್ಲಿ ವರದಿ ರೂಪದಲ್ಲಿ ಬರುವ ಜಾಹೀರಾತುಗಳ ಪರಿಶೀಲನೆ ತಂಡ ರಚಿಸಲಾಗಿದೆ. ಆ ಜಾಹೀರಾತಿನ ದರವನ್ನು ಅಭ್ಯರ್ಥಿಗಳ ಖರ್ಚಿನ ವಿವರಕ್ಕೆ ಸೇರಿಸಲಾಗುತ್ತದೆ’ ಎಂದು ತಿಳಿಸಿದರು.

‘ದಿನದ 24 ಗಂಟೆಯೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ಅಕ್ರಮಗಳಿಗೆ ಆಸ್ಪದ ನೀಡುವುದಿಲ್ಲ’ ಎಂದು ಹೇಳಿದರು.

‘ವಿಡಿಯೊ ಚಿತ್ರೀಕರಣ ತಂಡ ಗಳನ್ನೂ ರಚಿಸಲಾಗಿದ್ದು, ಕ್ಷೇತ್ರದ ಎಲ್ಲೆಡೆ ನಡೆದಿರುವ ಚುನಾವಣಾ ಪ್ರಕ್ರಿಯೆಗಳ ಚಿತ್ರೀಕರಣ ಮಾಡಲಾಗುತ್ತಿದೆ. ಕ್ಷೇತ್ರದ ರಾಜಕೀಯ ಬೆಳವಣಿಗೆ ಗಳನ್ನು ಗಮನದಲ್ಲಿ ಇಟ್ಟುಕೊಂಡು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ) ಸುಬೋಧ್‌ ಯಾದವ್‌ ಅವರನ್ನು ಹೆಚ್ಚು ವರಿ ಚುನಾವಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ’ ಎಂದು ವಿವರಿಸಿದರು.

‘ಚುನಾವಣೆಗೆ ನಿಯೋಜನೆ ಮಾಡಲಾದ ಸಿಬ್ಬಂದಿಗೆ ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದೆ. 20 ಅಭ್ಯರ್ಥಿಗಳು ಕಣದಲ್ಲಿ ಇರುವುದರಿಂದ ಒಂದೊಂದು ಮತಗಟ್ಟೆಗೆ ಎರಡು ಇವಿಎಂಗಳ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳ ಪಟ್ಟಿ ಮುಗಿದ ಬಳಿಕ 21ನೇ ಕ್ರಮಾಂಕದಲ್ಲಿ ನೋಟಾ (ಮೇಲಿನ ಯಾರಿಗೂ ಇಲ್ಲ) ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಫೆ. 11ರಂದು ಸಂಜೆ 5ಕ್ಕೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದಲ್ಲಿ ಪರ್ಯಾ ಯವಾಗಿ ಯಾವುದಾದರೂ ಅಧಿಕೃತ ದಾಖಲೆ ತೋರಿಸಿ ಮತದಾನ ಮಾಡಬಹುದು’ ಎಂದು ತಿಳಿಸಿದರು.

‘ಪೊಲೀಸ್‌ ಆಯುಕ್ತರು ಬಂದೋ ಬಸ್ತ್‌ಗೆ ಅಗತ್ಯವಾದ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ. ಪ್ಯಾರಾ ಮಿಲಿಟರಿ ಪಡೆಯನ್ನೂ ಹೆಚ್ಚುವರಿಯಾಗಿ ಕರೆಯಿಸಿ ಕೊಳ್ಳಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT