ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ ನಿತೀಶ್‌ಗೆ ಹಿನ್ನಡೆ

Last Updated 16 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಎಂಟು ರಾಜ್ಯಗಳ 12 ಕ್ಷೇತ್ರಗಳಿಗೆ  ನಡೆದಿದ್ದ ಉಪಚುನಾವಣೆಯಲ್ಲಿ  ಏಳು ಸ್ಥಾನಗಳನ್ನು ಪಡೆದಿರುವ ಬಿಜೆಪಿ ಬಲವರ್ಧನೆ ಮಾಡಿಕೊಂಡಿದೆ.

ಬಿಹಾರದ ಹರ್ಲಖಿ ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್ಎಲ್‌ಎಸ್‌ಪಿ) ಅಭ್ಯರ್ಥಿ ಸುಧಾಂಶು ಕುಶ್ವಾಹ್ ಜಯ ಗಳಿಸಿದ್ದಾರೆ. ಇದು ಕಾಂಗ್ರೆಸ್, ಜೆಡಿಯು, ಅರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರದ ಆಡಳಿತ ವಿರೋಧಿ ಅಲೆ ತೋರಿಸುತ್ತದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ  (ಎಸ್‌ಪಿ) ಮುಜಫ್ಫರ್‌ನಗರ ಮತ್ತು ದಿಯೊಬಂದ್‌ನಲ್ಲಿ ಬಿಜೆಪಿಯೆದುರು ಸೋತಿದೆ. ಇಲ್ಲಿ ಬಿಕಾಪುರ ಕ್ಷೇತ್ರವನ್ನಷ್ಟೇ ಎಸ್‌ಪಿ ಉಳಿಸಿಕೊಂಡಿದೆ. ಈ ಮೂಲಕ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರಿಗೆ ತೀವ್ರ ಮುಖಭಂಗವಾಗಿದೆ.  ಮುಜಫ್ಫರ್‌ ನಗರದಲ್ಲಿ ಬಿಜೆಪಿ ಗೆದ್ದಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ, ಮಹಾ ರಾಷ್ಟ್ರದಲ್ಲಿ ಶಿವಸೇನೆ,  ಪಂಜಾಬ್‌ನಲ್ಲಿ ಅಕಾಲಿದಳ, ತೆಲಂಗಾಣದಲ್ಲಿ ಟಿಆರ್‌ ಎಸ್ ಹಾಗೂ ತ್ರಿಪುರಾದಲ್ಲಿ ಸಿಪಿಎಂ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ಆಡಳಿತಾರೂಢ ಪಕ್ಷಗಳು ವಿಜಯೋತ್ಸಾಹದಲ್ಲಿವೆ. ಆದರೆ ಕರ್ನಾಟಕ, ಬಿಹಾರ ಮತ್ತು  ಉತ್ತರಪ್ರದೇಶದಲ್ಲಿ ಆಡಳಿತ ಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ.

ಹೈದರಾಬಾದ್ ವರದಿ: ಅಡಳಿತಾರೂಢ ಟಿಆರ್ಎಸ್‌ ತನ್ನ ಗೆಲುವಿನ ಓಟವನ್ನು ಮುಂದುವರಿಸಿದ್ದು, ನಾರಾಯಣಖೇಡ್‌ ಕ್ಷೇತ್ರದಲ್ಲಿ ಎಂ.ಭೂಪಾಲ್‌ ರೆಡ್ಡಿ ಭಾರಿ ಬಹುಮತಗಳೊಂದಿಗೆ ಗೆದ್ದಿದ್ದಾರೆ.

ಪಾಲ್‌ಘರ್‌ ಶಿವಸೇನಾ ತೆಕ್ಕೆಗೆ– (ಪಾಲ್‌ಘರ್‌, ಮುಂಬೈ ವರದಿ):  ಕೇಂದ್ರ ಮತ್ತು ಮಹಾರಾಷ್ಟದಲ್ಲಿ ಬಿಜೆ ಪಿಯ ಮೈತ್ರಿ ಪಕ್ಷವಾಗಿರುವ ಶಿವಸೇನಾ, ಪಾಲ್‌ಘರ್‌–ಎಸ್‌ಟಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಶಿವಸೇನಾದ  ಅಮಿತ್‌ ಘೋಡಾ ಅವರು ಹಿರಿಯ ಕಾಂಗ್ರೆಸಿಗ ಹಾಗೂ ಮಾಜಿ ಸಚಿವ ರಾಜೇಂದ್ರ ಗವಿತ್‌ ಅವರನ್ನು ಸೋಲಿಸಿದ್ದಾರೆ. ಮಧ್ಯಪ್ರದೇಶದ ಮೈಹಾರ್‌ ಕ್ಷೇತ್ರದಲ್ಲಿ  ಆಡಳಿತಾರೂಢ ಬಿಜೆಪಿಯ ನಾರಾಯಣ ತ್ರಿಪಾಠಿ  ಗೆದ್ದಿದ್ದಾರೆ.

ಮುಂದಿನ ವರ್ಷ ಪೂರ್ಣ ಪ್ರಮಾಣ ದಲ್ಲಿ ಚುನಾವಣೆ ಎದುರಿಸಲಿರುವ ಪಂಜಾಬ್‌ನಲ್ಲಿ ಆಡಳಿತಾರೂಢ ಅಕಾಲಿದಳ ಗೆದ್ದಿದೆ.
ತ್ರಿಪುರಾದ ಗೋಮತಿ ಜಿಲ್ಲೆಯ ಗೋಮತಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಆಡಳಿತಾರೂಢ ಸಿಪಿ ಎಂ ತನ್ನಬಲವನ್ನು      ಹೆಚ್ಚಿಸಿಕೊಂಡಿದೆ.

ರಾಜಕೀಯಕ್ಕೆ ಮನ್ನಣೆ: ಮೋದಿ (ನವದೆಹಲಿ ವರದಿ):  ವಿವಿಧ ರಾಜ್ಯಗಳ ವಿಧಾನಸಭೆ ಉಪ ಚುನಾವಣೆಗಳಲ್ಲಿ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಗೆಲುವಿಗೆ ಪ್ರಧಾನಿ ಸಂತಸ ವ್ಯಕ್ತಪಡಿ ಸಿದ್ದಾರೆ. ಅಭಿವೃದ್ಧಿ ರಾಜಕೀಯಕ್ಕೆ ಜನರ ಬೆಂಬಲವನ್ನು  ಇದು ತೋರಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ದೇಶದಾದ್ಯಂತ ಜನರು ಅಭಿವೃದ್ಧಿ ಬಯಸಿದ್ದಾರೆ ಎಂಬುದಕ್ಕೆ ನಿದರ್ಶನ ಎಂದು ಮೋದಿ ಹೇಳಿದ್ದಾರೆ.
ವೋಟ್‌ಬ್ಯಾಂಕ್ ರಾಜಕೀಯಕ್ಕೆ ಪ್ರತ್ಯುತ್ತರ: ಹನ್ನೆರಡರ ಪೈಕಿ ಏಳು ಸ್ಥಾನಗಳಲ್ಲಿ ಬಿಜೆಪಿ ಜಯಿಸಿದ್ದು, ವೋಟ್ ಬ್ಯಾಂಕ್ ನಂಬಿದ್ದ ಕಾಂಗ್ರೆಸ್, ಸಮಾಜ ವಾದಿ ಪಕ್ಷಗಳಿಗೆ ಜನರು ಆಘಾತ ನೀಡಿದ್ದಾರೆ  ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT