ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಮೆಹಬೂಬ ಮುಫ್ತಿ ಮುನ್ನಡೆ

Last Updated 25 ಜೂನ್ 2016, 9:39 IST
ಅಕ್ಷರ ಗಾತ್ರ

ಶ್ರೀನಗರ(ಪಿಟಿಐ): ಜಮ್ಮು ಕಾಶ್ಮೀರದ ಅನಂತನಾಗ್‌ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಶನಿವಾರ ಆರಂಭವಾಗಿದ್ದು, ನಾಲ್ಕನೇ ಸುತ್ತಿನಲ್ಲಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ 5,700 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ನಾಲ್ಕನೆ ಸುತ್ತಿಗೆ ಮೆಹಬೂಬ ಅವರು 8,549 ಮತ ಗಳಿಸಿದ್ದು, ಕಾಂಗ್ರೆಸ್‌ನ ಹಿಲಾ ಅಹಮದ್ ಶಹ ಅವರು 2,752 ಮತ ಗಳಿಸಿದ್ದಾರೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಮೆಹಬೂಬ ಅವರು 1,826 ಮತ ಗಳಿಸಿದ್ದು, ಕಾಂಗ್ರೆಸ್‌ನ ಹಿಲಾ ಅಹಮದ್ ಶಹ ಅವರು 516 ಮತ, ನ್ಯಾಷನಲ್‌ ಕಾನ್ಫರೆನ್ಸ್ ಅಭ್ಯರ್ಥಿ 316 ಮತ ಗಳಿಸಿದ್ದರು.

ಪ್ರಸಕ್ತ ವರ್ಷ ಜ. 7ರಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸೈಯದ್ ಅವರು ನಿಧನರಾದ ಬಳಿಕ ಅವರು ಪ್ರತಿನಿಧಿಸಿದ್ದ ಈ ಕ್ಷೇತ ತೆರವಾಗಿತ್ತು.

ಜೂನ್‌ 22ರಂದು ಉಪ ಚುನಾವಣೆಗೆ ಮತದಾನ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT