ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ಹುದ್ದೆ: ಸಚಿವರಿಗೆ ಮನವಿ

Last Updated 26 ಮೇ 2015, 7:09 IST
ಅಕ್ಷರ ಗಾತ್ರ

ಧಾರವಾಡ: ‘ಪದವಿಪೂರ್ವ ಕಾಲೇಜು­ಗಳ ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಆದರೆ, ಅರ್ಜಿ ಹಾಕಲು ಈ ಬಾರಿ ಬಿ.ಎಡ್‌ನ್ನು ಕಡ್ಡಾಯಗೊಳಿಸಿರುವುದು ಬಹುಪಾಲು ಆಕಾಂಕ್ಷಿಗಳಿಗೆ ನಿರಾಸೆಯನ್ನುಂಟು ಮಾಡಿದೆ’ ಎಂದು ಎಐಡಿವೈಓ ಸಂಘ­ಟನೆ ರಾಜ್ಯ ಉಪಾಧ್ಯಕ್ಷ ಎನ್‌.ರವಿ ಅವರನ್ನೊಳಗೊಂಡ ನಿಯೋಗವೊಂದು ಸೋಮವಾರ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಮನವಿ ಸಲ್ಲಿಸಿತು.

‘ಮೂರು ವರ್ಷಗಳ ನಂತರ ನಡೆಯುತ್ತಿರುವ ಬಹು ನಿರೀಕ್ಷಿತ 1,130 ಪದವಿಪೂರ್ವ ಕಾಲೇಜುಗಳ ಉಪ­ನ್ಯಾಸ­ಕರ ಹುದ್ದೆಗಳ ನೇಮಕಾತಿಗೆ ಅರ್ಜಿ ಹಾಕಲು ಬಿ.ಎಡ್‌ ಕಡ್ಡಾಯಗೊಳಿಸಿ­ರು­ವುದರಿಂದ ಬಹುಪಾಲು ಆಕಾಂಕ್ಷಿಗಳನ್ನು ಸ್ಪರ್ಧೆಯಿಂದ ಹೊರಗಿಟ್ಟಂತಾಗಿದೆ.

ಅಲ್ಲದೆ, ಬಿ.ಕಾಂ ಮತ್ತು ಎಂ.ಕಾಂ ಮುಗಿ­ಸಿರುವವರು ಬಿ.ಎಡ್ ಪದವಿಯನ್ನು ಪಡೆಯುವುದಾದರೂ ಹೇಗೆ ಎನ್ನುವು­ದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಇದರ ಜೊತೆಗೆ ಪರೀಕ್ಷಾ ಶುಲ್ಕವನ್ನು ₨ 2,500ಕ್ಕೆ ಹೆಚ್ಚಳ ಮಾಡಿರುವುದು ಬಡ, ನಿರುದ್ಯೋಗಿ ಅರ್ಜಿದಾರರಿಗೆ ತೀವ್ರ ಹೊರೆಯಾಗಿದೆ.

ಇದಲ್ಲದೇ, ಈ ಹಿಂದೆ ಶೇ. ೫೦ರಷ್ಟು ಅಂಕಗಳನ್ನು ಪಡೆದರೆ ಅರ್ಜಿ ಹಾಕಲು ಅರ್ಹತೆ ದೊರೆಯುತ್ತಿದ್ದುದನ್ನು, ಈ ಬಾರಿ ಶೇ. ೫೫ಕ್ಕೆ ಏರಿಸಿರುವ ಹಿಂದಿನ ಉದ್ದೇಶವೂ ಸ್ಪಷ್ಟವಾಗಿಲ್ಲ. ಅರ್ಜಿ ಶುಲ್ಕವನ್ನು ಎಲ್ಲರ ಕೈಗೆಟುಕುವ ಮಟ್ಟಕ್ಕೆ ಇಳಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ನಿರುದ್ಯೋಗಿ ಉದ್ಯೋಗಾಕಾಂಕ್ಷಿಗಳ ಹಿತದೃಷ್ಟಿಯಿಂದ ನಿಯಮಗಳನ್ನು ಪರಿಶೀ­ಲಿ­ಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT