ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕ ಉಂಡ ಬಾಳೆಲೆಯೇ?

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ, ಕಾಲೇಜು ಶಿಕ್ಷಣ ಇಲಾಖೆ ಅಧೀನದಲ್ಲಿ­ರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾಯಂ ಸಹಾಯಕ ಪ್ರಾಧ್ಯಾಪಕರ ಕೊರತೆ ಹಿನ್ನೆಲೆಯಲ್ಲಿ ‘ಅರೆಕಾಲಿಕ’,  ‘ಅತಿಥಿ’ ಇತ್ಯಾದಿ ವಿಶೇಷ ಪದ ಬಳಕೆ ಮಾಡಿ ಉಪನ್ಯಾಸಕರ ಸೇವೆಯನ್ನು ಕನಿಷ್ಠ ವೆಚ್ಚದಲ್ಲಿ ಪಡೆಯಲಾಗುತ್ತಿದೆ.

ಅತಿಥಿ ಉಪ­ನ್ಯಾಸಕರಾದ ನಾವು ಕಳೆದ ೧೦–೧೫ ವರ್ಷ­ಗ­ಳಿಂದ ಕಾಲೇಜುಗಳಲ್ಲಿ ಸೇವೆ ಸಲ್ಲಿಸು­ತ್ತಿ­ದ್ದೇವೆ. ಸದ್ಯ ಈಗ ಸರ್ಕಾರ ೧೨೯೮ ಕಾಯಂ ಸಹಾಯಕ ಪ್ರಾಧ್ಯಾಪಕರನ್ನು ನೇಮಕಾತಿ ಮಾಡಿಕೊಳ್ಳಲು ಹೊರಟಿದೆ. ಕಳೆದ ಹತ್ತಾರು ವರ್ಷಗಳಿಂದ ಬೋಧಕರಾಗಿ ಸೇವೆ ಸಲ್ಲಿಸಿ ಸರ್ಕಾರದ ಆರ್ಥಿಕ ಮಿತವ್ಯಯಕ್ಕೆ ಕಾರಣ­ವಾಗಿ­ರುವ ನಮ್ಮನ್ನೇ ಅರ್ಹತೆ ಹಾಗೂ ಸೇವಾ ಹಿರಿತನಗಳನ್ನು ಆಧರಿಸಿ ಪರಿಗಣಿಸ­ಬೇಕು.

ಒಂದು ಅಂದಾಜಿನ ಪ್ರಕಾರ ಸರ್ಕಾರಕ್ಕೆ ವರ್ಷ­ವೊಂದಕ್ಕೆ ಈ ಸೇವೆಯಿಂದ ₨ ೧೪೦ ಕೋಟಿ  ಉಳಿತಾಯ, ೧೦ ವರ್ಷಗಳಲ್ಲಿ
₨ ೧,೪೦೦ ಕೋಟಿಗಳಿಗಿಂತಲೂ ಹೆಚ್ಚು ಮಿಗತೆ ಆಗಿರುತ್ತದೆ. ಇದುವರೆವಿಗೂ ಬೇಕಾದ ಅತಿಥಿ ಉಪನ್ಯಾಸಕರು ಕಾಯಂ ಸಂದರ್ಭದಲ್ಲಿ ಬೇಡ­ವಾದರೆ? ಈಗ ಅವರನ್ನು ಹೊರಹಾಕುವುದು ನ್ಯಾಯವೇ? ಉಂಡ ಮೇಲೆ ಬಾಳೆ ಎಲೆಯ ಸಹವಾಸ ಬೇಡ ಎಂತಲೇ? ಈ ರೀತಿಯ ಸೇವೆಯನ್ನು ಪರಿಗಣಿಸಿ ಕಾಯಂ ಮಾಡಿದ ಹಿಂದಿನ ಅನೇಕ ಉದಾಹರಣೆಗಳು ಇವೆ. ಸರ್ಕಾರ ಈಗಲೂ ಈ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಬೇಕು.

–ಎಂ.ಟಿ. ಮಲ್ಲಿಕಾರ್ಜುನಯ್ಯ, ಶಿರಾ ಪಿ.ಸಿ. ಲೋಕೇಶ್, ಗುಬ್ಬಿ ಡಾ.ಶಿವಣ್ಣ, ತಿಮ್ಮಲಾಪುರ, ಲೋಕೇಶ್ ಕುಣಿಗಲ್, ಡಾ.ಸವಿತಾ, ಕೊರಟಗೆರೆ ಕೃಷ್ಣಮೂರ್ತಿ, ಹುಳಿಯಾರು, ನರಸಿಂಹರಾಜು ಪಾವಗಡ, ಡಾ.ವೆಂಕಟೇಶ್, ತಿಪಟೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT