ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ ಫಲಿತಾಂಶ ಇಂದು

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ 10 ರಾಜ್ಯಗಳಲ್ಲಿ ತೆರ­ವಾ­ಗಿದ್ದ 3 ಲೋಕಸಭಾ ಮತ್ತು 33 ವಿಧಾನಸಭಾ ಕ್ಷೇತ್ರ­ಗಳಿಗೆ 13ರಂದು ನಡೆದಿದ್ದ ಉಪ­ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. 

ಗುಜರಾತ್‌ನ ವಡೋದರಾ, ಉತ್ತರ­ಪ್ರದೇಶದ ಮೈನ್‌­ಪುರಿ ಮತ್ತು ತೆಲಂಗಾಣದ ಮೆದಕ್ ಲೋಕಸಭಾ ಕ್ಷೇತ್ರ­ಗಳಿಗೆ ಚುನಾವಣೆ ನಡೆದಿತ್ತು. ಉತ್ತರ ಪ್ರದೇಶದ 11, ಗುಜರಾತಿನ 9, ರಾಜಸ್ತಾನದ 4, ಪಶ್ಚಿಮ ಬಂಗಾಳದ 2, ಈಶಾನ್ಯ ರಾಜ್ಯಗಳ 5, ಛತ್ತೀಸಗಡ, ಆಂಧ್ರಪ್ರದೇಶದ ತಲಾ 1 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.

ಗುಜರಾತ್‌ನ ವಡೋದರಾ ಮತ್ತು ಉತ್ತರಪ್ರದೇಶದ ವಾರಾ­ಣಸಿ ಕ್ಷೇತ್ರ­ಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ವಾರಾಣಸಿ ಕ್ಷೇತ್ರವನ್ನು ಉಳಿಸಿ­ಕೊಂಡು ವಡೋದರಾ ಕ್ಷೇತ್ರವನ್ನು ತೆರವು­ಗೊಳಿಸಿದ್ದರು.

ತೆಲಂಗಾಣದ ಮೆದಕ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ­ಯಾಗಿದ್ದ ಕೆ.ಚಂದ್ರಶೇಖರ್ ರಾವ್, ತೆಲಂಗಾಣದ ಮುಖ್ಯ­­ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಸಂಸತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ತೆರವು ಮಾಡಿದ್ದ ಮೈನ್‌ಪುರಿ ಲೋಕ­ಸಭಾ ಕ್ಷೇತ್ರಕ್ಕೆ ಮುಲಾಯಂ ಸಿಂಗ್ ಅಣ್ಣನ ಮೊಮ್ಮಗ ತೇಜ್ ಪ್ರತಾಪ್ ಸಿಂಗ್ ಯಾದವ್ ಸ್ಪರ್ಧಿಸಿ­ದ್ದಾರೆ.

ಹೀಗಾಗಿ ಈ ಕ್ಷೇತ್ರ ಎಸ್‌ಪಿಗೆ ಪ್ರತಿಷ್ಠೆಯ ವಿಷಯ­ವಾಗಿದೆ. ಕಳೆದ ಲೋಕಸಭಾ ಚುನಾವಣೆ­ಯಲ್ಲಿ ಉತ್ತರ ಪ್ರದೇಶ­­ದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು. ಈಗ ವಿಧಾನಸಭಾ ಉಪಚುನಾವಣೆಯಲ್ಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಮುಂದಿನ ತಿಂಗಳು ನಡೆಯಲಿರುವ ಹರಿಯಾಣ ಮತ್ತು ಮಹಾರಾಷ್ಟ್ರ­ಗಳ ವಿಧಾನಸಭಾ ಚುನಾವಣೆಯ ಮೇಲೆ ಈ ಫಲಿತಾಂಶ ಪ್ರಭಾವ ಬೀರಲಿದೆ ಎಂದು ತಜ್ಞರು ಅಭಿಪ್ರಾಯ­ಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT