ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಅಂತಿಮ

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ವಿಧಾನಸಭೆ ಉಪ ಚುನಾ­ವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದು, ಶಿಕಾರಿಪುರದಿಂದ ನಿರೀಕ್ಷೆ­ಯಂತೆ ಬಿಜೆಪಿ ಮುಖಂಡ ಬಿ.ಎಸ್‌.­ಯಡಿಯೂರಪ್ಪ ಅವರ ಪುತ್ರ ಬಿ. ವೈ. ರಾಘವೇಂದ್ರ ಕಣಕ್ಕಿಳಿಯ­ಲಿದ್ದಾರೆ.

ಚಿಕ್ಕೋಡಿ– ಸದಲಗಾದಿಂದ ವಿಧಾನ­ಪರಿಷತ್‌ ಸದಸ್ಯ ಮಹಾಂತೇಶ ಕವಟ­ಗಿ­ಮಠ ಹಾಗೂ ಬಳ್ಳಾರಿ (ಪರಿಶಿಷ್ಟ ಪಂಗಡ– ಮೀಸಲು) ಯಿಂದ ಸಂಸದ ಶ್ರೀರಾಮುಲು ಅವರ ಆಪ್ತ ಓಬಳೇಶ್‌ ಅವರನ್ನು ಟಿಕೆಟ್‌ ನೀಡಲಾಗಿದೆ
.
ರಾಘವೇಂದ್ರ ಅವರು 2009ರ ಲೋಕ­ಸಭಾ ಚುನಾವಣೆ­ಯಲ್ಲಿ ಶಿವ­ಮೊ­­ಗ್ಗದಲ್ಲಿ ಬಂಗಾರಪ್ಪ ಅವರನ್ನು ಸೋಲಿಸಿ ಆಯ್ಕೆಯಾಗಿ­ದ್ದರು.
ಚಿಕ್ಕೋಡಿ– ಸದಲಗಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಮಹಾಂತೇಶ ಕವಟಗಿ­ಮಠ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ.  ಕಾಂಗ್ರೆ­ಸ್‌ನ  ಪ್ರಕಾಶ ಹುಕ್ಕೇರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹುಕ್ಕೇರಿ ಅವರೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಚುನಾ­ಯಿತರಾಗಿದ್ದಾರೆ.

ಬಳ್ಳಾರಿ ಮೀಸಲು ಕ್ಷೇತ್ರ ಪ್ರತಿನಿಧಿಸಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಲೊೋಕ­­ಸಭೆ ಪ್ರವೇಶಿಸಿದ್ದರಿಂದ ಉಪ ಚುನಾ­ವಣೆ ನಡೆಯುತ್ತಿದೆ. ಶ್ರೀರಾ­ಮುಲು ಅವರಿಗೆ ಆತ್ಮೀಯರಾದ ಓಬ­ಳೇಶ್‌ ಅವರಿಗೆ ಬಿಜೆಪಿ ಟಿಕೆಟ್‌ ದೊರೆ­ತಿದೆ.

ಜಿಲ್ಲಾ ಪಂಚಾ­ಯತಿ ನೌಕರ­ರಾ­ಗಿದ್ದ ಅವರು ಸ್ವಯಂ ನಿವೃತ್ತಿ ಪಡೆದಿ­ದ್ದಾರೆ. ಆಗಸ್ಟ್‌ 21ರಂದು ಉಪ ಚುನಾ­ವಣೆ ನಡೆಯ­ಲಿದ್ದು, ನಾಮಪತ್ರ ಸಲ್ಲಿಸಲು ಆಗಸ್ಟ್‌ 2 ಕೊನೆಯ ದಿನ.

ಕಾಂಗ್ರೆಸ್‌ ಪಟ್ಟಿ ದೆಹಲಿಗೆ
ಬೆಂಗಳೂರು:
ಚಿಕ್ಕೋಡಿ– ಸದಲಗಾ ಕ್ಷೇತ್ರದಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಅವರ ಪುತ್ರ ಗಣೇಶ್ ಹುಕ್ಕೇರಿ, ಬಳ್ಳಾರಿಯಲ್ಲಿ ಮೊಳಕಾಲ್ಮೂರಿನ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ ಮತ್ತು ಶಿಕಾರಿಪುರದಲ್ಲಿ 2013ರ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಶಾಂತವೀರಪ್ಪಗೌಡ ಅವರಿಗೆ ಟಿಕೆಟ್ ನೀಡುವಂತೆ ಪ್ರದೇಶ ಕಾಂಗ್ರೆಸ್ ಸಮಿತಿ ಶಿಫಾರಸು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬುಧವಾರ ಮೂರೂ ಕ್ಷೇತ್ರಗಳ ಸ್ಥಳೀಯ ಮುಖಂಡರ ಜೊತೆ ಚರ್ಚೆ ನಡೆಸಿದ್ದರು. ಚಿಕ್ಕೋಡಿ ಕ್ಷೇತ್ರಕ್ಕೆ ಗಣೇಶ ಹುಕ್ಕೇರಿ ಹೆಸರು ಅಂತಿಮ­ಗೊಳಿ­ಸ­ಲಾಗಿತ್ತು. ಶಿಕಾರಿಪುರಕ್ಕೆ ಶಾಂತವೀರಪ್ಪಗೌಡ ಮತ್ತು ನಗರದ ಮಹದೇವಪ್ಪ ಹೆಸರು ಚರ್ಚೆ­ಯಲ್ಲಿತ್ತು. ಬಳ್ಳಾರಿಗೆ 19 ಆಕಾಂಕ್ಷಿಗಳಿದ್ದ ಕಾರಣ ಪಟ್ಟಿ ಅಂತಿ­ಮ­ಗೊಂ­ಡಿರಲಿಲ್ಲ. ಗುರು­ವಾರ ಬೆಳಿಗ್ಗೆ ಮೂರೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ­ಯನ್ನು ಅಂತಿಮ­ಗೊಳಿಸಿ ಎಐಸಿಸಿಗೆ ಶಿಫಾರಸು ಮಾಡಲಾಗಿದೆ. ಎಐಸಿಸಿ ಅನು­ಮೋ­ದನೆ ದೊರೆತ ಬಳಿಕ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಜೆಡಿಎಸ್‌ ಸ್ಪರ್ಧೆ ಇಲ್ಲ
ಬೆಂಗಳೂರು:
ಈ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರಲು  ಮತ್ತು ತಟಸ್ಥವಾಗಿರಲು ಜೆಡಿಎಸ್‌ ನಿರ್ಧರಿಸಿದೆ.

ಗುರುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ‘ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತು ಬಿಜೆಪಿ ಕೇಂದ್ರ­ದಲ್ಲಿ ಅಧಿಕಾರದಲ್ಲಿವೆ. ಈ ಎರಡೂ ಪಕ್ಷಗಳಿಗೆ ಹಣದ ಕೊರತೆ ಇಲ್ಲ. ಆದರೆ ನಮ್ಮ ಸ್ಥಿತಿ ಹಾಗಲ್ಲ. ಆದ್ದರಿಂದ ಉಪ ಚುನಾವಣೆಯಲ್ಲಿ ಸ್ಪರ್ಧೆ ಇಲ್ಲ’ ಎಂದರು.

ಎಚ್‌ಡಿಕೆ ಭಿನ್ನಮತ: ಆದರೆ ಈ ಸಂದರ್ಭದಲ್ಲಿ ಹಾಜರಿದ್ದ ಪಕ್ಷದ ಮುಖಂಡ ಎಚ್‌.ಡಿ. ಕುಮಾರಸ್ವಾಮಿ, ‘ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ಪಕ್ಷದ ಕಾರ್ಯ­ಕರ್ತರು ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಚರ್ಚೆ ನಡೆಸಿ ತೀರ್ಮಾನಿಸಲಾಗುವುದು’ ಎಂದರು.
‘ಪಕ್ಷ ಬಲವರ್ಧನೆ’: ‘ನಾನು ಇನ್ನು ಮುಂದೆ ಹೆಚ್ಚಿನ ಸಮಯವನ್ನು ರಾಜ್ಯದಲ್ಲೇ ಕಳೆಯುತ್ತೇನೆ.  ಕಾರ್ಯಕರ್ತರ ಸಮಾವೇಶವನ್ನು ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು’ ಎಂದು ದೇವೇಗೌಡ ಹೇಳಿದರು.

ತಿದ್ದುಪಡಿ
ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯ­ರ್ಥಿ­ಗಳ ಆಯ್ಕೆಗೆ ಸಂಬಂಧಿಸಿದಂತೆ ಗುರುವಾರದ ಸಂಚಿ­ಕೆ­ಯಲ್ಲಿ ಪ್ರಕಟವಾದ ವರದಿಯಲ್ಲಿ ಚಿಕ್ಕೋಡಿ– ಸದಲಗಾ ಕ್ಷೇತ್ರದ ಹೆಸರು ತಪ್ಪಾಗಿ ಹುಕ್ಕೇರಿ ಎಂದು ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT