ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಬರ್‌ ಟ್ಯಾಕ್ಸಿ ವಿರುದ್ಧ ಮತ್ತೊಂದು ಪ್ರಕರಣ

Last Updated 30 ಜನವರಿ 2015, 12:34 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ):  ಕಳೆದ ತಿಂಗಳು ನವದೆಹಲಿಯಲ್ಲಿ ಉಬರ್‌ ಟ್ಯಾಕ್ಸಿ ಚಾಲಕನಿಂದ ಅತ್ಯಾಚಾರಕ್ಕೊಳಗಾಗಿದ್ದ ಯುವತಿ, ಅಮೆರಿಕ ಕೋರ್ಟ್‌ನಲ್ಲಿ ಈ ಟ್ಯಾಕ್ಸಿ ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಖಾಸಗಿ ಟ್ಯಾಕ್ಸಿ ಸೇವೆ ಒದಗಿಸುವ ಕಂಪೆನಿಗಳು ಚಾಲಕರ ಪೂರ್ವಾ­ಪರ ವಿಚಾರಿಸಿ, ಪೊಲೀಸ್‌ ಪ್ರಮಾಣ­ಪತ್ರ ಪಡೆದು ಕೆಲಸಕ್ಕೆ ತೆಗೆದುಕೊಳ್ಳಬೇಕಾ­ಗುತ್ತದೆ. ಆದರೆ, ಉಬರ್‌ ಕಂಪೆನಿ ಈ ವಿಚಾರಗಳಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿದೆ. ಕಂಪೆನಿಯ ಕರ್ತವ್ಯಲೋಪ ಮತ್ತು ಬೇಜವಾಬ್ದಾರಿಯಿಂದ  ತಾವು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಬೇಕಾಯಿತು  ಮತ್ತು ತೀವ್ರವಾದ ಅಪಮಾನ ಎದುರಿಸಬೇಕಾಯಿತು’ ಎಂದು ಅವರು  36 ಪುಟಗಳ ದೂರಿನಲ್ಲಿ ತಿಳಿಸಿದ್ದಾರೆ.

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ಮೂಲದ ಆನ್‌ಲೈನ್‌ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಉಬರ್‌  ವಿರುದ್ಧ ಕ್ಯಾಲಿಫೋರ್ನಿಯಾ ಫೆಡರಲ್‌ ಕೋರ್ಟ್‌ನಲ್ಲಿ ಈ ಪ್ರಕರಣ ದಾಖಲಾಗಿದೆ. ದೂರನಲ್ಲಿ  ಎಲ್ಲಿಯೂ  ಯುವತಿ ತಮ್ಮ ಹೆಸರು ದಾಖಲಿಸಿಲ್ಲ. ಈ ಕ್ರೂರ ಘಟನೆಯಿಂದ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಆಗಿರುವ ನಷ್ಟವನ್ನು ಉಬರ್‌ ಕಂಪೆನಿ ಬರಿಸಬೇಕು. ಸೂಕ್ತ ಆರ್ಥಿಕ ಪರಿಹಾರವನ್ನು ಕೊಡಿಸಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT