ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರಿದುರಿದು ಬೀಳುವುದೇಕೆ?

ಅಕ್ಷರ ಗಾತ್ರ

ಈಗೀಗ  ಅತ್ಯಾಚಾರ ಸುದ್ದಿಗಳು ದಿನನಿತ್ಯದ ಘಟನೆಗಳಾಗಿದ್ದು, ಅವನ್ನೇ ಓದಿ, ಕೇಳಿ, ನೋಡಿ ನಮ್ಮ ಮನಸ್ಸು ಜಡ್ಡುಗಟ್ಟುತ್ತಿದೆ. ಇದಕ್ಕೆ ಕಾರಣಗಳು ಸಂಕೀರ್ಣ. ಜನರಲ್ಲಿ ಧಾರ್ಮಿಕ ಮನೋಭಾವ ಕ್ಷೀಣಿಸಿರುವುದು, ನೈತಿಕ ತಳಹದಿ­ಯಿಲ್ಲದ ಬ್ರಿಟಿಷ್‌ ಶಿಕ್ಷಣ ಪದ್ಧತಿ,  ಭ್ರಷ್ಟಾಚಾರ, ಅದಕ್ಷತೆ, ಯುವಕ– ಯುವತಿಯರ ಸ್ವೇಚ್ಛಾ ಪ್ರವೃತ್ತಿ, ಪಾಶ್ಚಾತ್ಯೀಕರಣ, ಅಶ್ಲೀಲತೆ,  ಕ್ರೌರ್ಯ ವೈಭವೀಕರಿಸುವ ಸಾಹಿತ್ಯ, ಸಂಗೀತ, ಸಿನಿಮಾ, ಹುಡುಗಿಯರ ಪ್ರಚೋದನಕಾರಿ ಉಡುಗೆ ಮತ್ತು ಹಾವಭಾವ ಕಾರಣವಾಗಿವೆ. ಇವು­ಗಳಲ್ಲಿ ಕೊನೆಯಲ್ಲಿ ಸೂಚಿಸಿದ್ದು ಒಂದು ಪ್ರಮುಖ ಕಾರಣ.

ಈ ವಿಷಯ ಎತ್ತಿದ ಕೂಡಲೇ  ಸ್ವಯಂ­ಘೋಷಿತ ಸ್ತ್ರೀ ವಾದಿಗಳು, ಪ್ರಗತಿ­ಪರರು, ಬುದ್ಧಿ­ಜೀವಿಗಳು, ಕೆಲವು ಪತ್ರಕರ್ತರು, ಹಲವು ಉದ್ಧಟ ಯುವಜನರು ಉರಿದುರಿದು ಬೀಳು­ತ್ತಾರೆ. ಯುವತಿಯರ ಡ್ರೆಸ್‌, ನಡವಳಿಕೆ ಹಾಗೂ ಅತ್ಯಾಚಾರಕ್ಕೆ  ಏನೂ ಸಂಬಂಧವೇ ಇಲ್ಲವೇ?

‘ವಸ್ತ್ರ ಸಂಹಿತೆ’ ಎಂದ ಕೂಡಲೇ ಸಿದ್ಧ­ವಾಗುವ ಪ್ರತಿಕ್ರಿಯೆ: ‘ಹಾಲುಗಲ್ಲದ ಹಸು­ಗೂಸು, ವೃದ್ಧೆ, ಹಳ್ಳಿ ಹುಡುಗಿ... ಇವ­ರೇನು ಪ್ರಚೋ­ದಿಸಿದರು ಮಾರಾಯ್ರೆ?’. ಸಮಸ್ಯೆ ಆಳಕ್ಕೆ ಹೋಗಿ ಮಾರಾಯ್ರೆ! ಪ್ರಚೋದಿಸುವ ಮೇಲ್ವರ್ಗ, ದುರುಳರಿಗೆ ಸಿಗುವುದು ಕಷ್ಟ. ಅಸಹಾ­­ಯಕರು ಬಲಿಪಶುಗಳಾಗುತ್ತಾರೆ; ಬಲಿಷ್ಠ ಜಿಂಕೆಗಳನ್ನು ನೋಡಿ ಬಾಯಿ­ ಚಪ್ಪ­ರಿ­ಸುವ ಹುಲಿ, ಸಿಂಹಗಳು, ಸುಲಭದಲ್ಲಿ ಸಿಗುವ ಮರಿ ಜಿಂಕೆ, ರೋಗಿ, ಗರ್ಭಿಣಿ, ಕುಂಟಿ ಇತ್ಯಾದಿ ಜಿಂಕೆ­ಗಳನ್ನು ಬೆನ್ನಟ್ಟಿ ಹಿಡಿಯುತ್ತವೆ. ಪ್ರಚೋ­ದಿಸು­ವವರು ಬಚಾವ್, ಮುಗ್ಧರು ಬಲಿ ಆಗುತ್ತಿದ್ದಾರೆ. ಗರ್ಜಿ­ಸುವ ಸ್ತ್ರೀವಾದಿಗಳೇ, ಆಳವಾಗಿ ವಿಚಾರಿಸಿ ನೋಡಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT