ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳುವಾರನ ಕಪ್‌ ಕ್ರಿಕೆಟ್‌ಗೆ ಚಾಲನೆ

ಹತ್ತು ಕುಟುಂಬ, ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವಿನ ಕ್ರೀಡಾ ಹಬ್ಬಕ್ಕೆ ಆರಂಭ
Last Updated 27 ಏಪ್ರಿಲ್ 2015, 9:04 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಗೌಡ ಯುವ ವೇದಿಕೆಯ ಸಹಯೋಗದಲ್ಲಿ ಉಳುವಾರನ ಕುಟುಂಬಸ್ಥರು ಆಯೋಜಿ ಸಿರುವ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಕುಟುಂಬಗಳ ನಡುವಿನ ‘ಉಳು ವಾರನ ಕಪ್‌ ಕ್ರಿಕೆಟ್‌ ಹಬ್ಬ’ಕ್ಕೆ ಭಾನುವಾರ ಇಲ್ಲಿನ
ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ದಲ್ಲಿ ಚಾಲನೆ ದೊರೆಯಿತು.

16ನೇ ವರ್ಷದ ಕ್ರಿಕೆಟ್‌ ಪಂದ್ಯಾ ವಳಿಯ ನಿಮಿತ್ತ 16 ಗುಂಡುಗಳನ್ನು ಗಾಳಿಯಲ್ಲಿ ಹಾರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ಉಳುವಾರನ ಕುಟುಂಬದ ಹಿರಿಯರಾದ ಉಳುವಾರನ ಬಿ. ಕುಶಾಲಪ್ಪ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಕ್ರಿಕೆಟ್‌ ಉತ್ಸವದ ಅಧ್ಯಕ್ಷರಾದ ಉಳುವಾರನ ರಮೇಶ್‌, ‘ಪರಸ್ಪರ ಸಂಬಂಧಗಳು ದೂರವಾಗುತ್ತಿರುವ ಈ ದಿನಗಳಲ್ಲಿ ಕ್ರೀಡೆ ಗಳಿಂದ ಸಂಬಂಧಗಳನ್ನು ಬೆಸೆಯುವ ಕೆಲಸವಾಗುತ್ತಿದೆ ಎಂದು ಹೇಳಿದರು.

ಉಳುವಾರನ ಕೆ.ತೀರ್ಥಕುಮಾರ್‌ ಮಾತನಾಡಿ, ಗೌಡ ಸಮುದಾಯ ಬಾಂಧವರು ಎಂದಿಗೂ ತಮ್ಮತನವನ್ನು ಮರೆಯಬಾರದು. ಗುರು ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಸಲಹೆ ನೀಡಿದರು.

ವಕೀಲರಾದ ಉಳುವಾರನ ಅಮೃತ ಕುಮಾರಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಮಂದ್ರೀರ ಮೋಹನ್‌ ದಾಸ್‌, ಕೊಡ ಪಾಲು ಗಣಪತಿ, ಪ್ರಮುಖರಾದ ಉಳುವಾರನ ಎಸ್‌. ಪಳಂಗಪ್ಪ, ಉಳುವಾರನ ಸುಬ್ಬಯ್ಯ, ಉಳುವಾರನ ಪಿ. ಪೊನ್ನಪ್ಪ, ವೇಣುಗೋಪಾಲ್‌, ಬಾಳಾಡಿ ಮಾಚಯ್ಯ, ಪರಿಚನ ಸತೀಶ್‌ ತಿಮ್ಮಯ್ಯ ಉಪಸ್ಥಿತರಿದ್ದರು.

ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್‌ ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಆಕರ್ಷಕ ಮೆರವಣಿಗೆ: ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್‌ ಗುಡ್ಡೆಮನೆ ಅಪ್ಪಯ್ಯಗೌಡ ಹಾಗೂ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ, ಜನರಲ್‌ ತಿಮ್ಮಯ್ಯ, ಮೇಜರ್‌ ಮಂಗೇರಿರ ಮುತ್ತಣ್ಣ, ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಲಾಯಿತು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಗೌಡಬಾಂಧವರು ಸಾಂಪ್ರದಾಯಿಕ ಉಡುಪಿನಲ್ಲಿ ಆಕರ್ಷಕ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT