ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌ ನೇಮಕಾತಿ ತಡೆಯಾಜ್ಞೆ ವಿಸ್ತರಣೆ

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಎಂಜಿನಿಯರುಗಳ ನೇಮ­ಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ ಆಗಸ್ಟ್‌­28ರಂದು  ಹೊರಡಿಸಿದ್ದ ಅಧಿಸೂಚನೆಗೆ ಈ ಹಿಂದೆ ನೀಡಿದ್ದ ಮಧ್ಯಾಂತರ ತಡೆಯಾಜ್ಞೆಯನ್ನು  ಸುಪ್ರೀಂಕೋರ್ಟ್ ಡಿಸೆಂಬರ್‌ 10ರವರೆಗೆ ವಿಸ್ತರಿಸಿದೆ.

ಹೊಸ ಮೀಸಲಾತಿ ನೀತಿಯಿಂದ  ಕೆಲಸದ ಕಳೆದು ಕೊಳ್ಳುವ ಭೀತಿ ಎದುರಿಸುತ್ತಿ­ರುವ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ಎಂಜಿನಿಯರು­ಗಳು ಕೆಪಿಎಸ್‌ಸಿ ಅಧಿಸೂಚನೆ ವಿರುದ್ಧ ತಡೆ­ಯಾಜ್ಞೆ ಕೋರಿ  ಸುಪ್ರೀಂ­ಕೋರ್ಟ್‌­ ಮೊರೆ ಹೋಗಿದ್ದರು.  ವಿವರಣೆ ನೀಡಲು ಕಾಲಾವ­ಕಾಶ ಕೋರಿ ಕರ್ನಾಟಕ ಸರ್ಕಾರ ಮತ್ತು ಕೆಪಿಎಸ್‌ಸಿ ಪರ ವಕೀಲರು ಮಾಡಿದ ಮನವಿಯನ್ನು ನ್ಯಾಯಪೀಠ ಪುರಸ್ಕರಿಸಿತು. 

ಎಂಜಿನಿಯರುಗಳ  ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸದಂತೆ ಈ ಹಿಂದೆ ತಾನು ನೀಡಿದ್ದ  ತಡೆಯಾಜ್ಞೆ ಡಿಸೆಂಬರ್ 10ವರೆಗೂ ಮುಂದುವರೆ­ಯ­ಲಿದೆ. ಅದೇ ದಿನ ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದೆ.

ಒಂದು ವೇಳೆ ಹೊಸದಾಗಿ ನೇಮಕಾತಿ ನಡೆದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ 1993­–­94ರಲ್ಲಿ ಸರ್ಕಾರ ಗುತ್ತಿಗೆ ಆಧಾರ­ದಲ್ಲಿ ನೇಮಿಸಿಕೊಂಡಿದ್ದ 417 ಸಹಾ­ಯಕ ಹಾಗೂ ಕಿರಿಯ ಎಂಜಿನಿಯರು­ಗಳು ಕೆಲಸ ಕಳೆದು­ಕೊಳ್ಳುವ ಭೀತಿ  ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT