ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಗೆ ಬೆಂಬಲವಿಲ್ಲ, ಚುನಾವಣೆಗೆ ಸಿದ್ಧ: ಕಾಂಗ್ರೆಸ್‌

Last Updated 18 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಲೋಕಸಭಾ ಚುನಾವಣೆ­ಯಲ್ಲಿ ಕಳಪೆ ಸಾಧನೆ ತೋರಿ­ದ ಹಿನ್ನೆ­ಲೆ­ಯಲ್ಲಿ ದೆಹಲಿ ವಿಧಾನ­ಸಭೆಯ ಕೆಲವು ಎಎಪಿ ಶಾಸಕರ ಬಯ­ಕೆಯಂತೆ, ಮತ್ತೆ ಸರ್ಕಾರ ರಚಿ­ಸಲು ಆ ಪಕ್ಷವನ್ನು ಬೆಂಬ­ಲಿ­ಸುವ ಬದ­ಲಿಗೆ ಹೊಸ­­ದಾಗಿ ಚುನಾ­ವಣೆ ಎದುರಿಸಲು ಕಾಂಗ್ರೆಸ್‌ ಇಚ್ಛಿಸಿದೆ.

ಈ ಸಂಬಂಧ ಭಾನುವಾರ ಇಲ್ಲಿ ಸುದ್ದಿ­ಗಾರರ ಜೊತೆ ಮಾತನಾಡಿದ ದೆಹಲಿ ಪ್ರದೇಶ ಕಾಂಗ್ರೆಸ್‌ ಘಟಕದ ಮುಖ್ಯ ವಕ್ತಾರ ಮುಕೇಶ್‌ ಶರ್ಮ, ವಿಧಾನಸಭೆ ವಿಸರ್ಜನೆಗೆ ಕೋರಿ ಮತ್ತು ಹೊಸ­ದಾಗಿ ಚುನಾವಣೆಗೆ ಆಗ್ರಹಿಐಸಿ ಎಎಪಿ ಸುಪ್ರೀಂ­ಕೋರ್ಟ್‌ ಮೊರೆ ಹೋಗಿ­ರುವುದರಿಂದ ದೆಹಲಿಯಲ್ಲಿ ಮತ್ತೆ ಸರ್ಕಾರ ರಚಿಸುವ ಬಗ್ಗೆ ಮಾತನಾಡಲು ಆ ಪಕ್ಷಕ್ಕೆ ಯಾವ ನೈತಿಕತೆಯೂ ಇಲ್ಲ ಎಂದು ಟೀಕಿಸಿದರು.

ಎಎಪಿ ಸರ್ಕಾ­ರಕ್ಕೆ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್‌  ವಾಪಸ್‌ ಪಡೆದಿಲ್ಲ. ಅದರ ನಾಯಕ ಕೇಜ್ರಿವಾಲ್‌ ಅವರೇ  ಲೋಕ­ಸಭಾ ಚುನಾವಣೆ ಮೇಲೆ ಕಣ್ಣಿಟ್ಟು, ಸರ್ಕಾರ ತ್ಯಜಿಸುವ ಮೂಲಕ ದೆಹಲಿ ಜನರನ್ನು ನಡುನೀರಿನಲ್ಲಿ ಕೈಬಿಟ್ಟರು. ಈಗ ಲೋಕಸಭಾ ಚುನಾವಣೆಯಲ್ಲಿ ಎಎಪಿ ಯಶಸ್ವಿಯಾಗದ ಕಾರಣ ಮತ್ತೆ ಸರ್ಕಾರ ರಚಿಸುವ ಮಾತನಾಡುತ್ತಿ­ದೆ ಎಂದು ಶರ್ಮ ಆರೋಪಿಸಿದರು.

‘ಕಾಂಗ್ರೆಸ್‌ ಜತೆ ಸೇರಿ ಸರ್ಕಾರ ರಚಿಸುವುದಿಲ್ಲ’: ಕಾಂಗ್ರೆಸ್‌ ಬೆಂಬಲದೊಂದಿಗೆ ಮತ್ತೆ ದೆಹ­ಲಿ­ಯಲ್ಲಿ ಸರ್ಕಾರ ರಚಿಸುವ ಯಾವುದೇ ಉದ್ದೇಶ ತನಗಿಲ್ಲ ಎಂದು ಎಎಪಿ ಭಾನು­ವಾರ ಇಲ್ಲಿ ಸ್ಪಷ್ಟಪಡಿಸಿದೆ.

ಕೆಲವು ಎಎಪಿ ಶಾಸಕರ ಗುಂಪೊಂದು ಕಾಂಗ್ರೆಸ್‌ ನೆರವಿನಿಂದ ಪುನಃ ದೆಹಲಿ­ಯಲ್ಲಿ ಸರ್ಕಾರ ರಚಿಸ­ಬೇಕೆಂದು ಬಯ­ಸಿದೆ ಎಂಬ ವದಂತಿಗೆ ಪಕ್ಷದ ಹಿರಿಯ ನಾಯಕ ಮನೀಶ್‌ ಸಿಸೋಡಿಯ ಪ್ರತಿಕ್ರಿಯಿಸಿದರು.

ಒಟ್ಟು ೭೦ ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ೩೧, ಎಎಪಿ ೨೭ ಹಾಗೂ ಕಾಂಗ್ರೆಸ್‌ ೮ ಶಾಸಕರನ್ನು ಹೊಂದಿವೆ. ಆದರೆ ಮೂವರು ಬಿಜೆಪಿ ಶಾಸಕರು ಈಗ ಸಂಸದರಾಗಿ ಆಯ್ಕೆ­ಯಾಗಿ­ದ್ದಾರೆ.

ಸರ್ಕಾರ ರಚ­ನೆಗೆ ಶಾಸಕರ ಒತ್ತಾಯ
ಲೋಕಪಾಲ ಮಸೂದೆ ಅಂಗೀಕಾರಕ್ಕೆ ವಿಫಲವಾದ ಹಿನ್ನೆಲೆಯಲ್ಲಿ ಎಎಪಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರಾಜೀನಾಮೆ ಸಲ್ಲಿಸಿದ ಕಾರಣ ದೆಹಲಿ­ಯಲ್ಲಿ ಫೆ.೧೪ರಿಂದ ರಾಷ್ಟ್ರಪತಿ ಆಡಳಿತ ವಿಧಿಸಲಾಗಿದೆ. ಇತ್ತೀಚಿನ ಲೋಕಸಭಾ ಚುನಾವಣೆ­ಯಲ್ಲಿ ದೆಹಲಿಯ ಎಲ್ಲ ಏಳು ಕ್ಷೇತ್ರ­ಗಳಲ್ಲೂ ಕಾಂಗ್ರೆಸ್‌ ನೆಲಕಚ್ಚಿದ್ದು, ಎಎಪಿ ಎರಡನೇ ಸ್ಥಾನದಲ್ಲಿದೆ.

ಮೊದಲ ಸ್ಥಾನ ಪಡೆದಿರುವ ಬಿಜೆಪಿಯಂತೆಯೇ ಎಎಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಹ ದೆಹಲಿ ವಿಧಾನಸಭೆಗೆ ಹೊಸದಾಗಿ ಚುನಾ­ವಣೆ ನಡೆಯಬೇಕೆಂದು ಆಗ್ರಹಿಸುತ್ತಿವೆ.ಈ ಮಧ್ಯೆ, ಎಎಪಿಯ ಕೆಲವು ಶಾಸಕರು ಬಿಜೆಪಿ ಅಥವಾ ಕಾಂಗ್ರೆಸ್‌ ಜೊತೆ ಸೇರಿ ಸರ್ಕಾರ ರಚಿಸಬೇಕೆಂದು ಪಕ್ಷದ ನಾಯ­ಕರನ್ನು ಶನಿವಾರ ಒತ್ತಾಯಿಸಿ­ದ್ದಾರೆ. ಬಿಜೆಪಿ-–ಮೋದಿ ಅಲೆ ಇರುವ ಈ ಸಂದ­ರ್ಭದಲ್ಲಿ ಚುನಾವಣೆಗೆ ಹೋದರೆ ತಮಗೆ ಸಂಕಷ್ಟ ಕಾದಿದೆ. ಹಾಗಾಗಿ ಮತ್ತೆ ಸರ್ಕಾರ ರಚ­ನೆಗೆ ಮುಂದಾಗ­ಬೇ­ಕೆಂದು ಅವರು ಹೇಳಿ­ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT