ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಆಂತರಿಕ ಕಲಹ ಮೆತ್ತಗಾದ ಕೇಜ್ರಿವಾಲ್‌

Last Updated 7 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಮ್‌ ಆದ್ಮಿ ಪಕ್ಷದಲ್ಲಿ (ಎಎಪಿ) ಆಂತರಿಕ ಕಚ್ಚಾಟ ಭುಗಿ­ಲೆದ್ದ ಬೆನ್ನಲ್ಲಿಯೇ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಭಿನ್ನಮತೀ­ಯರ ಮನ­ವೊ­ಲಿಕೆಗೆ ಯತ್ನಿಸುತ್ತಿದ್ದಾರೆ.

‘ಯೋಗೇಂದ್ರ ಯಾದವ್‌ ಅವರು ಎತ್ತಿದ ಪ್ರಮುಖ ವಿಷಯಗಳನ್ನು ಇತ್ಯ­ರ್ಥ­­ಪಡಿಸಿ­ಕೊಳ್ಳಬೇಕಿದೆ’ ಎಂದು ಕೇಜ್ರಿವಾಲ್‌ ಅವರು ಶನಿವಾರ ತಮ್ಮ ಮಾತಿನ ವರಸೆ ಬದಲಾಯಿಸಿದ್ದಾರೆ.

‘ದೆಹಲಿಯಲ್ಲಿ ಮುಂಬರುವ ವಿಧಾನ ಸಭೆ ಚುನಾವಣೆಗೆ ಮಾಡಿ­ಕೊಳ್ಳ­­ಬೇಕಾದ ಸಿದ್ಧತೆಯೂ  ಸೇರಿ­ದಂತೆ ಪಕ್ಷದ ಮುಂದಿನ ನಡೆಯನ್ನು ನಿರ್ಧ­ರಿಸಲು ಪ್ರಮುಖ ಮುಖಂಡರು ಶನಿವಾರ ಸಭೆ ಸೇರಿದ್ದರು. ಶಾಜಿಯಾ ಇಲ್ಮಿ ಅವರನ್ನು ಪಕ್ಷಕ್ಕೆ ಮರಳಿ ಕರೆ­ತರಲು ಪ್ರಯತ್ನ ಮಾಡಲಾಗುತ್ತದೆ’ ಎಂದು  ಅವರು ನುಡಿದರು.

‘ಯೋಗೇಂದ್ರ ಯಾದವ್‌ ಕೆಲ­ವೊಂದು ಪ್ರಮುಖ ವಿಷಯಗಳನ್ನು ಎತ್ತಿ­ದ್ದಾರೆ. ನಾವೆಲ್ಲ ಸೇರಿ ಇವುಗಳನ್ನು ಇತ್ಯ­ರ್ಥ­ಪಡಿಸಿಕೊಳ್ಳುತ್ತೇವೆ. ಯೋಗೇಂದ್ರ ನನಗೆ ಪರಮಾಪ್ತರು. ಅವ­­ರೊಂದಿಗೆ ಸುದೀರ್ಘ ಸಮಾ­ಲೋಚನೆ ನಡೆಸಿದೆ’ ಎಂದು ಕೇಜ್ರಿ­ವಾಲ್‌  ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT