ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಸ್‌ಜಿ: ₨22ಕೋಟಿ ವಹಿವಾಟು ಗುರಿ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸದ್ಯ ವಾರ್ಷಿಕ ₨16 ಕೋಟಿ ವಹಿವಾಟು ನಡೆಸುತ್ತಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ₨22 ಕೋಟಿಗೆ ಹೆಚ್ಚಿಸಿಕೊಳ್ಳುವ ವಿಶ್ವಾಸವನ್ನು ಕೋಲ್ಕತ್ತ ಮೂಲದ ತೊಗಲು ಕೈಚೀಲಗಳ ತಯಾರಿಕೆ ಮತ್ತು ರಫ್ತು ಕಂಪೆನಿ ಎಎಸ್‌ಜಿ ಲೆದರ್ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಕೊಂಪನೆರೊ ಬ್ರ್ಯಾಂಡ್ ಪರಿಚಯಿಸಿದ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಲೊಕ್ ಸೇನ್‌ಗುಪ್ತಾ, ಈ ಬ್ರ್ಯಾಂಡ್‌ ಯೂರೋಪ್‌ ಮಾರುಕಟ್ಟೆಯಲ್ಲಿ ಯಶಸ್ಸು ಕಂಡಿದೆ. ರಫ್ತು ವಹಿವಾಟಿಗೇ ಗಮನ ಕೇಂದ್ರೀಕರಿಸಿದ್ದ ಕಂಪೆನಿ, ಈಗ ಬೆಂಗಳೂರಿನ ಫೀನಿಕ್ಸ್‌ ಮಾಲ್‌ನಲ್ಲಿ  ಕೊಂಪನೆರೊ ಬ್ರ್ಯಾಂಡ್ ಮಾರಾಟ ಮಳಿಗೆ ಆರಂಭಿಸಿ ದೇಶದ ರಿಟೇಲ್‌ ಮಾರುಕಟ್ಟೆ ಪ್ರವೇಶಿಸಿದೆ ಎಂದರು.

ತೊಗಲು ಸಂಸ್ಕರಣೆಯಲ್ಲಿ ಕಚ್ಚಾ ಪದಾರ್ಥ ವ್ಯರ್ಥವಾಗುವುದು, ಅಧಿಕ ತ್ಯಾಜ್ಯ ಹೊರಬೀಳುವುದಿದೆ. ಎಜಿಎಸ್‌, ಪೀಸ್‌ ಡೈಯಿಂಗ್‌ ಕ್ರಮ ಅನುಸರಿಸು ತ್ತಿದ್ದು, ರಾಸಾಯನಿಕ ಬಳಕೆಯಷ್ಟೇ ಅಲ್ಲ, ಉತ್ಪಾದನಾ ವೆಚ್ಚವೂ ತಗ್ಗಿದೆ  ಎಂದು ಕಂಪೆನಿಯ
ನಿರ್ದೇಶಕ ಇಂದ್ರಜಿತ್ ಸೇನ್‌ಗುಪ್ತ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT