ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಟಿಎ ಟೆನಿಸ್‌: ಪ್ರಶಸ್ತಿಗಾಗಿ ಕವನ್‌–ನಿತಿನ್‌ ಪೈಪೋಟಿ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಕವನ್‌ ಎಸ್‌. ಕುಮಾರ್‌ ಮತ್ತು ನಿತಿನ್‌ ನಾಗರಾಜು ರೆಡ್ಡಿ ಅವರು  ಎಸ್‌ಎಟಿ ಮತ್ತು ಎಐಟಿಎ ಆಶ್ರಯದ 16 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ ಸೀರಿಸ್‌ ಟೆನಿಸ್‌ ಟೂರ್ನಿಯಲ್ಲಿ ಬಾಲಕರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಬಾಲಕಿಯರ ವಿಭಾಗದ ಫೈನಲ್‌ ನಲ್ಲಿ ರಾಜ್ಯದ ಪ್ರತಿಭಾ ಪ್ರಸಾದ್‌ ನಾರಾ ಯಣ ಮತ್ತು ಚಂದ್ರಿಕಾ ಜೋಶಿ ಅವರು ಮುಖಾಮುಖಿಯಾಗಲಿದ್ದಾರೆ.
ಗುರುವಾರ ನಡೆದ ಬಾಲಕರ ವಿಭಾ ಗದ ಸೆಮಿಫೈನಲ್‌ನಲ್ಲಿ ಕವನ್‌ ಎಸ್‌. ಕುಮಾರ್‌ ಅವರು 7–6, 6–3ರ ನೇರ ಸೆಟ್‌ಗಳಿಂದ ತಮಿಳುನಾಡಿನ ರಾಜೇಶ್‌ ಕಣ್ಣನ್‌  ಎದುರು ಗೆದ್ದರು.

ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ರಾಜ್ಯದ ನಿತಿನ್‌ ಎನ್‌. ರೆಡ್ಡಿ 6–3, 3–6, 6–3ರಲ್ಲಿ ತಮಿಳುನಾಡಿನ ಸುಭಾಷ್‌ ಪರಮಶಿವಂ ಅವರನ್ನು ಸೋಲಿಸಿದರು.

ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಸುಭಾಷ್‌ ಪರಮಶಿವಂ 7–6, 6–3ರ ನೇರ ಸೆಟ್‌ಗಳಿಂದ ಆಂಧ್ರಪ್ರದೇಶದ ಕೆ. ಆಶಿಶ್‌ ಆನಂದ್‌ ಎದುರೂ, ರಾಜೇಶ್‌ ಕಣ್ಣನ್‌ 7–6, 6–4ರಲ್ಲಿ ಅರ್ಣವ್‌ ಪತಾಂಜೆ  ಮೇಲೂ, ನಿತಿನ್‌ ಎನ್‌. ರೆಡ್ಡಿ 6–7, 6–4, 10–8ರಲ್ಲಿ ಎನ್‌. ರಿಶಬ್‌ ವಿರುದ್ಧವೂ, ಕವನ್‌ ಎಸ್‌. ಕುಮಾರ್‌ 7–6, 6–3ರಲ್ಲಿ ಕೆ. ಸಂದೇಶ್‌ ಎದುರೂ ಗೆಲುವು ಕಂಡಿದ್ದರು.

ಫೈನಲ್‌ಗೆ ಪ್ರತಿಭಾ:  ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ರಾಜ್ಯದ ಪ್ರತಿಭಾ ಪ್ರಸಾದ್‌ ನಾರಾಯಣ ಅವರು ಫೈನಲ್‌ ಪ್ರವೇಶಿಸಿದರು.
ಸಿಂಗಲ್ಸ್‌ ಸೆಮಿಫೈನಲ್‌ ಪೈಪೋಟಿ ಯಲ್ಲಿ ಪ್ರತಿಭಾ 6–4, 6–3ರಲ್ಲಿ   ಖುಷಿ ಸಂತೋಷ್‌ ಅವರನ್ನು ಸೋಲಿಸಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಚಂದ್ರಿಕಾ ಜೋಶಿ 6–3, 7–6ರ ನೇರ ಸೆಟ್‌ಗಳಿಂದ ರೇಷ್ಮಾ ಮರುರಿ ಎದುರು ಗೆಲುವು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT