ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಬಿ ಷೋ: ದೀಪಿಕಾ ನಿರಾಳ

Last Updated 7 ಮಾರ್ಚ್ 2015, 10:01 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ವಿವಾದಿತ ‘ಎಐಬಿ ರೋಸ್ಟ್‌’ ಕಾಮಿಡಿ ಷೋದಲ್ಲಿ ಭಾಗವಹಿಸಿದ್ದಕ್ಕೆ ಸಂಬಂಧಿಸಿ ನಗರ ಪೊಲೀಸರು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರನ್ನು ಬಂಧಿಸು­ವುದಾಗಲೀ ಅಥವಾ ಅವರ ವಿರುದ್ಧ ಬಲವಂತವಾಗಿ ಕ್ರಮ ಜರು­ಗಿಸುವುದಾಗಲೀ ಮಾಡಕೂಡದು ಎಂದು ಬಾಂಬೆ ಹೈಕೋರ್ಟ್‌ ಮಧ್ಯಾಂತರ ಆದೇಶ ನೀಡಿದೆ.

ಈ ಸಂಬಂಧ ತಮ್ಮ ಹಾಗೂ ಇನ್ನಿತರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಮಾಡಬೇಕು ಎಂದು ಕೋರಿ ದೀಪಿಕಾ  ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ದೀಪಿಕಾ ಅವರ ಅರ್ಜಿ ಮಾರ್ಚ್‌ ೧೬ರಂದು ವಿಚಾರಣೆಗೆ ಬರು­ತ್ತದೆ. ಅಲ್ಲಿಯವರೆಗೆ ಅವರನ್ನು ಬಂಧಿ­ಸಬಾ­ರದು ಎಂದು ನ್ಯಾಯ­ಮೂರ್ತಿಗಳಾದ ರಂಜಿತ್‌ ಮೋರೆ ಹಾಗೂ ಅನುಜಾ ಪ್ರಭುದೇಸಾಯಿ ಅವರಿದ್ದ ಪೀಠ ಹೇಳಿದೆ.

ಕಳೆದ ವರ್ಷ ಮುಂಬೈನಲ್ಲಿ ನಡೆದ ಈ ಷೋದಲ್ಲಿ ಅವಾಚ್ಯ ಪದಗಳನ್ನು ಬಳಸಿ ಮಾತನಾಡಿದ ಆರೋಪ  ಚಿತ್ರ ನಿರ್ದೇಶಕ ಕರಣ್‌ ಜೋಹರ್‌, ನಟರಾದ ಅರ್ಜುನ್‌ ಕಪೂರ್‌, ರಣವೀರ್‌ ಸಿಂಗ್‌ ಹಾಗೂ ಇನ್ನಿತರರ ಮೇಲೆ ಇದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪುಣೆ ಹಾಗೂ ಮುಂಬೈನ ತಾಡ್‌ದೇವ್‌ ಠಾಣೆ­ಯಲ್ಲಿ ದಾಖಲಾಗಿರುವ  ಎಫ್‌ಐಆರ್‌­ಗಳನ್ನು ರದ್ದು ಮಾಡಬೇಕು ಎಂದು ಕೋರಿ ದೀಪಿಕಾ 2 ಅರ್ಜಿಗಳನ್ನು ಸಲ್ಲಿಸಿದ್ದರು. ಸಾಮಾಜಿಕ ಕಾರ್ಯಕರ್ತ ಸಂತೋಷ್‌ ದೌಂಡ್ಕರ್‌ ಕೊಟ್ಟ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT