ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಲೇವಡಿ

‘ಕಾಂಗ್ರೆಸ್‌ ಕಾರ್ಯಕ್ರಮಗಳ ಹೆಸರು ಬದಲಿಸಿರುವ ಬಿಜೆಪಿ’
Last Updated 29 ಮೇ 2015, 11:41 IST
ಅಕ್ಷರ ಗಾತ್ರ

ಕುಂದಾಪುರ: ಹಿಂದೆ ವಿರೋಧ ಪಕ್ಷದಲ್ಲಿ ಇದ್ದ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಬೇಕು ಎನ್ನುವ ಏಕೈಕ ಉದ್ದೇಶಕ್ಕಾಗಿ ಯುಪಿಐ ಸರ್ಕಾರದ ಕಾರ್ಯಕ್ರಮಗಳನ್ನು ವಿರೋಧ ಮಾಡು ತ್ತಿದ್ದರು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಈ ಹಿಂದಿನ ಕಾರ್ಯಕ್ರಗಳನ್ನೆ ಹೆಸರು ಬದಲಾವಣೆ ಮಾಡಿ ನಮ್ಮದು ಎಂದು ಹೆಗಲು ತಟ್ಟಿಕೊಳ್ಳುತ್ತಿದೆ ಎಂದು ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಲೇವಡಿ ಮಾಡಿದ್ದಾರೆ.

ಇಲ್ಲಿಗೆ ಸಮೀಪದ ಹೆಮ್ಮಾಡಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಯುಪಿಐ ಸರ್ಕಾರದ ಉದ್ಯೋಗ ಭರವಸೆ, ಆಧಾರ್ ಕಾರ್ಡ್‌, ಬಳಕೆ ದಾರರ ಖಾತೆಗೆ ನೆರವಾಗಿ ಗ್ಯಾಸ್ ಸಬ್ಸಿಡಿ ನೀಡಿಕೆ ಸೇರಿದಂತೆ ಹಲವು ಕಾರ್ಯ ಕ್ರಮಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿದ್ದಾರೆ.

ಕೇಂದ್ರದಲ್ಲಿ ವಿತ್ತ ಸಚಿವ ರಾಗಿದ್ದ ಬಿ.ಜನಾರ್ದನ್ ಪೂಜಾರಿಯ ವರು ಬ್ಯಾಂಕಿನ ಬಾಗಿಲಿಗೆ ಬಡವರನ್ನು ತರುವ ಪ್ರಯತ್ನವಾಗಿ ಯೋಜಿಸಿದ್ದ ಸಾಲ ಮೇಳದ ಕಾರ್ಯಕ್ರಮವನ್ನೆ ಅಲ್ಪ- ಸ್ವಲ್ಪ ಬದಲಾವಣೆಯೊಂದಿಗೆ ಜನ ಧನ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಯುಪಿಐ ಸರ್ಕಾರದ  ಅಧಿಕಾರದಲ್ಲಿ ಇದ್ದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೇಟ್ರೋಲ್ ಬ್ಯಾರೆಲ್ ಗೆ 150 ಡಾಲರ್ ಇದ್ದಿತ್ತು.

ಇದೀಗ ಬ್ಯಾರೆಲ್‌ಗೆ 50 ಡಾಲರ್ ಇದ್ದರೂ ತೈಲ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ. ಪೆಟ್ರೋಲ್ ಲೀಟರ್‌ಗೆ 20 ರೂಪಾಯಿಗೆ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಲೀಟರ್‌ಗೆ 20 ರೂಪಾಯಿ ಏರಿಕೆ ಮಾಡಲು ಹುನ್ನಾರ ನಡೆಸುತ್ತಿದೆ. ಕೇಂದ್ರ ದಲ್ಲಿ ನಾವು ಅಧಿಕಾರಕ್ಕೆ ಬಂದರೆ ಪ್ರತಿ ಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಭರವಸೆಯ ಮಹಾಪೂರವನ್ನೆ ಹರಿಸಿದ್ದ ಮೋದಿ ಟೀಂ ಇದೀಗ ಮೌನಕ್ಕೆ ಶರಣಾಗಿದೆ ಎಂದರು.


ಬಿಜೆಪಿ ಯವರದು ಕಾಂಗ್ರೆಸ್ ಮುಕ್ತ ಭಾರತದ ಚಿಂತನೆಯಾದರೆ, ಕಾಂಗ್ರೆಸಿಗೆ ಹಸಿವು ಮುಕ್ತ ಭಾರತದ ಚಿಂತನೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಈ ದಿಸೆಯಲ್ಲಿ ಆಲೋಚನೆ ನಡೆಸಿ ದೇಶದಲ್ಲಿ ಮೊದಲ ಬಾರಿಗೆ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಪಡಿತರ ಚೀಟಿಯ ಸಮಸ್ಯೆಯ ಪರಿಹಾರಕ್ಕೆ ಆದ್ಯತೆ ನೀಡಿದೆ ಎಂದು ಹೇಳಿದರು.

ಸರ್ಕಾರದ ಸವಲತ್ತುಗಳು ಸಮಾಜದ ತಳ ಮಟ್ಟದ ವ್ಯಕ್ತಿಗೂ ದೊರಕಬೇಕು ಎಂದಾದರೆ ಗ್ರಾಮ ಪಂಚಾಯಿತಿಯ ಪ್ರತಿನಿಧಿಗಳು ಸಮರ್ಥರಾಗಿರಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಶಿವಮೊಗ್ಗ ಜಿಲ್ಲಾ ಎನ್ಎಸ್‌ಯುಐ ಉಪಾಧ್ಯಕ್ಷ ಸಿದ್ದಾರ್ಥ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT