ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಂಟಿ: 2,900 ನೌಕರರ ಭವಿಷ್ಯ ಅತಂತ್ರ

Last Updated 2 ಸೆಪ್ಟೆಂಬರ್ 2015, 14:35 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್‌ಎಸ್‌):  ‘ದೇಶದ ಸಮಯಪಾಲಕ’ ಎಂದೇ ಒಂದು ಕಾಲದಲ್ಲಿ ಹೆಸರಾಗಿದ್ದ ‘ಎಚ್‌ಎಂಟಿ’  ಸಮೂಹ (ಹಿಂದೂಸ್ತಾನ್‌ ಮಷಿನ್‌ ಟೂಲ್ಸ್‌’ )ತನ್ನ ಅಂಗ ಸಂಸ್ಥೆಗಳಾದ ಟ್ವಿನ್‌ ವಾಚಸ್‌ ಮತ್ತು ಎಚ್‌ಎಂಟಿ ಬೇರಿಂಗ್ಸ್‌ನಿಂದ ಒಟ್ಟು 2,900 ಸಿಬ್ಬಂದಿಯನ್ನು ‘ವಿಆರ್‌ಎಸ್‌’  ನೀಡಿ ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದೆ.

ಟ್ವಿನ್‌ ವಾಚಸ್‌ನಿಂದ 1,091 ಮತ್ತು ಬೇರಿಂಗ್ಸ್‌ನಿಂದ 1809 ಸಿಬ್ಬಂದಿ  ಕೆಲಸ ಕಳೆದುಕೊಳ್ಳಲಿದ್ದಾರೆ. ಸದ್ಯ ಈ ಎರಡೂ ಘಟಕಗಳಲ್ಲಿ ಒಟ್ಟು 4,500 ನೌಕರರಿದ್ದಾರೆ.

ಸಮೂಹದ ಮೂರು ಕಂಪೆನಿಗಳನ್ನು ಮುಚ್ಚಿದ ಬಳಿಕ ಉಳಿದ ಎರಡು ಕಂಪೆನಿಗಳಲ್ಲಿ 1,600 ಸಿಬ್ಬಂದಿ ಮಾತ್ರವೇ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬರಲಾಗಿದೆ. ಸಿಬ್ಬಂದಿಗಳಿಗೆ ಶೀಘ್ರವೇ ಆಕರ್ಷಕವಾದ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್‌) ನೀಡಲಾಗುವುದು ಎಂದು ಎಚ್‌ಎಂಟಿ ಸಮೂಹದ ಅಧ್ಯಕ್ಷ ಎಸ್‌.ಗಿರೀಶ್‌ ಸುದ್ದಿಗಾರರಿಗೆ ಬುಧವಾರ ತಿಳಿಸಿದ್ದಾರೆ.

ಎಚ್‌ಎಂಟಿ ಸಮೂಹದ ಮೂರು ಕಂಪೆನಿಗಳನ್ನು ಮುಚ್ಚುವ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್‌ನಲ್ಲಿ ನಿರ್ಧಾರ ತೆಗೆದುಕೊಂಡಿತು. ಜತೆಗೆ ಉಳಿದ ಎರಡು  ಕಂಪೆನಿಗಳನ್ನು ವಿಲೀನಗೊಳಿಸುವ ಮೂಲಕ ಅಲ್ಲಿರುವ ಸಿಬ್ಬಂದಿಗೆ ಪ್ರತಿಯೊಬ್ಬರಿಗೂ ₨25 ರಿಂದ ₨55 ಲಕ್ಷದವರೆಗೂ ವಿಆರ್‌ಎಸ್‌ ನೀಡಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT