ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಪ್ರಮಾಣ ಇಳಿಕೆ

Last Updated 1 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ಒಂದು ದಶಕದಲ್ಲಿ ದೇಶದಲ್ಲಿ ಹೊಸದಾಗಿ ಎಚ್‌ಐವಿ ಸೋಂಕಿಗೆ ತುತ್ತಾಗುವವರ ಪ್ರಮಾಣ ಶೇ 57ಕ್ಕೆ ತಗ್ಗಿದ್ದು, ಸಾವನ್ನಪ್ಪುವವರ ಸಂಖ್ಯೆ ಶೇ 25ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಖಾತೆ ಸಚಿವ ಜೆ.ಪಿ. ನಡ್ಡಾ ಹೇಳಿದರು.

‘ವಿಶ್ವ ಏಡ್ಸ್‌ ದಿನ’ದ ಅಂಗ­ವಾಗಿ ಸೋಮವಾರ ನಡೆದ ಕಾರ್ಯಕ್ರಮ­ದಲ್ಲಿ, ‘ಎಚ್‌ಐವಿ ಸೋಂಕು ತಡೆಗಟ್ಟಲು ಸರ್ಕಾರ­ದೊಂದಿಗೆ ಜನರು ಹಾಗೂ  ಸ್ವಯಂ ಸೇವಾ ಸಂಸ್ಥೆಗಳೂ ಕೈ ಜೋಡಿಸಬೇಕು’ ಎಂದರು.

ಈ ಸೋಂಕು ತಡೆಗಾಗಿ ಆರೋಗ್ಯ ಸಚಿವಾಲಯವು ಸಮನ್ವಯಕ್ಕಾಗಿ ಇತರ 11 ಸಚಿವಾಲಯಗಳ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಸದ್ಯದಲ್ಲೇ ಇನ್ನೂ ಐದು ಸಚಿವಾಲಯಗಳು ಸಹಿ ಹಾಕಲಿವೆ’ ಎಂದು ಅವರು ತಿಳಿಸಿದರು.

ಎಚ್‌ಐವಿ ಸೋಂಕಿತರಿಗಾಗಿ ಡಿಜಿಟಲ್ ಸಂಪನ್ಮೂಲ ಕೇಂದ್ರ ಮತ್ತು   ಪೂರೈಕೆ ನಿರ್ವಹಣಾ ವ್ಯವಸ್ಥೆಯ ‘1097’ ಸಹಾಯವಾಣಿಗೆ ಇದೇ ವೇಳೆ ನಡ್ಡಾ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT