ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಜಿ ವರದಿ ವಿವರಣೆಗೆ ಸೂಚನೆ

ಯಡಿಯೂರಪ್ಪ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ
Last Updated 1 ಸೆಪ್ಟೆಂಬರ್ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ರಮ ಡಿನೋಟಿಫಿ ಕೇಷನ್‌  ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂಸದ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳಲ್ಲಿ  ಮಹಾಲೇಖಪಾಲರ ವರದಿಯ ಕಾನೂನು ಬಾಧ್ಯತೆ ಏನಿದೆ ಎಂಬುದರ ಬಗ್ಗೆ ತಿಳಿಸಿ’ ಎಂದು ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ಸಂಬಂಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐ ಆರ್‌ ರದ್ದುಪಡಿಸುವಂತೆ ಕೋರಿ ಯಡಿ ಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು  ನ್ಯಾಯಮೂರ್ತಿ ರತ್ನಕಲಾ ಅವರಿದ್ದ ಏಕಸದಸ್ಯ ಪೀಠವು ಮಂಗಳವಾರ ವಿಚಾರಣೆ ನಡೆಸಿತು. ಇದೇ ವೇಳೆ ಅರ್ಜಿದಾರರ ಪರ ವಕೀಲರು, ‘ಇನ್ನು ಮುಂದೆ ಮತ್ತಾ ವುದೇ ಪ್ರಕರಣಗಳಲ್ಲಿ ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸದಂತೆ ನಿರ್ದೇಶಿಸಬೇಕು’ ಎಂದು ಕೋರಿದರು. ಇದಕ್ಕೆ ಲೋಕಾಯುಕ್ತ ಪರ ವಕೀಲ ವೆಂಕಟೇಶ್‌ ಪಿ.ದಳವಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬಂಧಿಸಬೇಡಿ: ಮುಂದಿನ ವಿಚಾರಣೆ ವೇಳೆಯ ತನಕ ಯಡಿಯೂರಪ್ಪ ಅವ ರನ್ನು ಬಂಧಿಸಬಾರದು ಎಂದು ಪೀಠವು ತಾಕೀತು ಮಾಡಿತು. ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಆಗಿದ್ದ ಸಮ ಯದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಲಗೆ ವಡೇರಹಳ್ಳಿ, ಬಿಳೇಕಹಳ್ಳಿ ಹಾಗೂ ಜೆ.ಬಿ.ಕಾವಲ್‌ ಪ್ರದೇಶದಲ್ಲಿ ಅಕ್ರಮ ಡಿ ನೋಟಿಫಿ ಕೇಷನ್‌ ಮಾಡಿದ್ದಾರೆ ಎಂದು ಆರೋ ಪಿಸಿ ಜಯಕುಮಾರ್‌ ಹಿರಮೇಠ ಲೋಕಾ ಯುಕ್ತದಲ್ಲಿ ಸಲ್ಲಿಸಿದ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ.

ಅಪಾರ್ಟ್‌ಮೆಂಟ್‌ ಮಾರಾಟಕ್ಕೆ ತಡೆ: ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ನಿರ್ಮಾಣ ಹಂತದಲ್ಲಿರುವ ಡಿಎಲ್ಎಫ್‌ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡದಂತೆ ಹೈಕೋರ್ಟ್‌ ಆದೇಶಿಸಿದೆ. ಈ ಸಂಬಂಧ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಮಂಗ ಳವಾರ, ಡಿಎಲ್‌ಎಫ್‌ ರಿಯಲ್‌ ಎಸ್ಟೇಟ್‌ ಬಿಲ್ಡರ್ಸ್‌, ಹೀರಾನಂದಾನಿ ಹಾಗೂ ಅನ್ನಾಬೆಲ್‌ ಬಿಲ್ಡರ್ಸ್‌ ಮತ್ತು ಡೆವಲ ಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಗೆ ಆದೇಶಿಸಿದೆ.

ಪ್ರತಿವಾದಿಗಳಾದ ಬಿಡಿಎ, ಬಿಬಿ ಎಂಪಿ, ಬಿಎಂಟಿಎಫ್‌, ಸಿಬಿಐ, ಐಎಎಸ್‌ ಅಧಿಕಾರಿಗಳಾದ ಭರತ್‌ಲಾಲ್‌ ಮೀನಾ ಹಾಗೂ ಪ್ರದೀಪ್‌ ಸಿಂಗ್‌ ಖರೋಲಾ ಅವರಿಗೆ ನೋಟಿಸ್‌ ಜಾರಿ ಮಾಡಲು ಪೀಠವು ಆದೇಶಿಸಿದೆ. ಮುಂದಿನ ಆದೇಶದವರೆಗೂ ಕಟ್ಟಡದ ಯಥಾಸ್ಥಿತಿ ಕಾಯ್ದುಕೊಳ್ಳು ವಂತೆಯೂ ಪೀಠವು ಡಿಎಲ್‌ಎಫ್‌ಗೆ ಸೂಚಿಸಿದೆ. 30 ಅಂತಸ್ತಿನ  ಈ ಅಪಾರ್ಟ್‌ ಮೆಂಟ್‌ಗಳನ್ನು ನಿಯಮ ಮೀರಿ ಕಟ್ಟಲಾ ಗಿದೆ. ಇದನ್ನು ಸಿಬಿಐ ತನಿಖೆಗೆ ವಹಿಸ ಬೇಕು ಎಂದು ಕೋರಿ ಅನಿಲ್‌ ಅಗರ್‌ ವಾಲ್‌ ಎಂಬು ವವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT