ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಪಿ ಮುಖಂಡರಿಗೆ ಭ್ರಷ್ಟಾಚಾರ ತನಿಖೆ ಸಂಕಟ

ಮಹಾರಾಷ್ಟ್ರದ ಸರ್ಕಾರದ ನಿರ್ಧಾರ
Last Updated 12 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಾಗಪುರ (ಪಿಟಿಐ): ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌, ಎನ್‌ಸಿಪಿಯ ಹಿರಿಯ ಮುಖಂಡ­ರಾದ ಸುನಿಲ್‌ ತತ್ಕರೆ ಮತ್ತು ಛಗನ್‌ ಭುಜ­ಬಲ್‌ ಅವರ ವಿರುದ್ಧದ ಭ್ರಷ್ಟಾಚಾರ ಆರೋಪ­ಗಳ ಬಗ್ಗೆ ತನಿಖೆ ನಡೆಸಲು ಮುಖ್ಯ­ಮಂತ್ರಿ ದೇವೇಂದ್ರ ಫಡಣವೀಸ್‌ ಒಪ್ಪಿಗೆ ನೀಡಿದ್ದಾರೆ.

ಅಜಿತ್‌ ಪವಾರ್‌ ಮತ್ತು ತತ್ಕರೆ ಅವರು ಜಲ­­ಸಂಪನ್ಮೂಲ ಸಚಿವರಾಗಿದ್ದಾಗ ಕೈಗೊಳ್ಳ­ಲಾದ ನೀರಾವರಿ ಯೋಜನೆಗಳಲ್ಲಿ ನಡೆ­ದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ರಾಜ್ಯದ ಭ್ರಷ್ಟಾಚಾರ ತಡೆ ಘಟಕಕ್ಕೆ ಸೂಚಿಸಲಾಗಿದೆ.

ಭುಜಬಲ್‌ ಅವರು ಲೋಕೋಪಯೋಗಿ ಸಚಿವರಾಗಿದ್ದ ಅವಧಿಯಲ್ಲಿ ದೆಹಲಿಯಲ್ಲಿ ನಿರ್ಮಿಸಲಾದ ‘ಮಹಾರಾಷ್ಟ್ರ ಸದನ’ ಮತ್ತು ಮುಂಬೈ­ಯಲ್ಲಿ ನಿರ್ಮಿಸಲಾದ ಎರಡು ಕಟ್ಟಡ ಯೋಜನೆಗಳಲ್ಲಿ ಅವ್ಯವ­ಹಾರ ನಡೆ­ದಿದೆ ಎಂಬ ಆರೋಪ ಇದೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ.

ಭ್ರಷ್ಟ ಗುತ್ತಿಗೆದಾರರು ಮತ್ತು ಅಧಿ­ಕಾರಿ­ಗಳು ಈ ಅವ್ಯವಹಾರಗಳಲ್ಲಿ ಭಾಗಿಯಾ­ಗಿ­ದ್ದಾರೆ. ಹಾಗಾಗಿ ಅವರ ವಿರುದ್ಧವೂ ತನಿಖೆ ನಡೆಯಲಿದೆ ಎಂದು ಮಹಾರಾಷ್ಟ್ರ ಅಡ್ವೊ­ಕೇಟ್‌ ಜನರಲ್‌ ಸುನಿಲ್‌ ಮನೋಹರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT