ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಮಂಗಳಯಾನಕ್ಕೆ ಭಾರತ ಸಜ್ಜು

2018 ವೇಳೆಗೆ ಅಂಗಾರಕನಲ್ಲಿ ಓಡಾಡಲಿದೆ ಇಸ್ರೊದ ರೋವರ್
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್‌ಎಸ್‌): ಪ್ರಥಮ ಪ್ರಯತ್ನದಲ್ಲಿಯೇ ಮಂಗಳ­ಯಾನದ ಯಶಸ್ಸಿನಿಂದ ಬೀಗುತ್ತಿರುವ ಭಾರತ 2018ರ ಹೊತ್ತಿಗೆ ಎರಡನೇ ಮಂಗಳಯಾನ ಕೈಗೊಳ್ಳಲು ಸಜ್ಜಾಗಿದೆ. ಮಂಗಳನ ಅಂಗಳದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳುವ ಉದ್ದೇಶದಿಂದ 2018ರ ವೇಳೆಗೆ ಕೈಗೊಳ್ಳುವ ಎರಡನೇ ಮಂಗಳಯಾನದ ವೇಳೆ ಭಾರತದ ರೋವರ್ ಅಂಗಾರಕನ ಅಂಗಳದಲ್ಲಿ ಓಡಾಡಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಉಪಗ್ರಹ ಕೇಂದ್ರದ ನಿರ್ದೇಶಕ ಎಸ್‌. ಶಿವಕುಮಾರ್  ತಿಳಿಸಿದರು.

ಮಂಗಳನ ಅಂಗಳದಲ್ಲಿ ಹೆಚ್ಚಿನ ಸಂಶೋಧನೆ ಕೈಗೊಳ್ಳಲು ಅಗತ್ಯವಾದ ಅತ್ಯಾಧುನಿಕ ತಂತ್ರಜ್ಞಾನದ ರೋವರ್‌ ಅಭಿವೃದ್ಧಿಪಡಿಸುವ ಕೆಲಸವನ್ನು ಇಸ್ರೊ ಮಾಡಲಿದೆ ಎಂದು ಅವರು ತಿಳಿಸಿದರು. 2016ರ ವೇಳೆಗೆ ಇಸ್ರೊ ‘ಚಂದ್ರಯಾನ –2’ ಯೋಜನೆಯನ್ನು  ಪೂರ್ಣಗೊಳಿಸಿದ  ಬಳಿಕ­ವಷ್ಟೇ  ‘ಮಂಗಳಯಾನ–2’ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಆಗ ದೇಶೀಯ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ರೋವರ್‌­ಗಳನ್ನು ಬಳಸ­ಲಾಗು­ವುದು ಎಂದು ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ಭಾರಿ ತೂಕದ ಉಪಗ್ರಹಗಳನ್ನು ಕೊಂಡೊಯ್ಯಬಲ್ಲ  ಹಾಗೂ ಸ್ವದೇಶಿ ಕ್ರಯೋಜೆನಿಕ್‌ ತಂತ್ರಜ್ಞಾನ ಹೊಂದಿದ  ಜಿಎಸ್‌ಎಲ್‌ವಿ ರಾಕೆಟ್‌ಗಳನ್ನು ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗು­ವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT