ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೂ ಸಮಾನರು

Last Updated 27 ಜನವರಿ 2015, 19:30 IST
ಅಕ್ಷರ ಗಾತ್ರ

ಪಡಿತರ ಅಂಗಡಿಗೆ ಬರುವ ಅಕ್ಕಿ, ಗೋಧಿ, ಸಕ್ಕರೆ ಅಥವಾ ಸೀಮೆ ಎಣ್ಣೆ ಪಡೆಯಲು ಬಡವರು ಉದ್ದ­ನೆಯ ಸಾಲಿನಲ್ಲಿ ನಿಲ್ಲಬೇಕು. ಆ ಪಡಿಪಾಟಲು ಅನು­ಭವಿಸಿದವರಿಗೇ ಗೊತ್ತು. ಮನೆಯಲ್ಲಿ ಅನ್ನ ಬೇಯ­ಬೇಕೆಂದರೆ, ಹೀಗೆ ಅಸಹಾಯಕರಾಗಿ ನಿಲ್ಲುವ ಅನಿ­ವಾರ್ಯ ಅವರದು. ‘ಬಿಡಿ... ಕಡುಬಡವರ ಪಾಲಿಗೆ ಬಂದಿದ್ದು ಅದೇ. ಅವರಿಗೆ ಪಂಚಾಮೃತವೂ ಅದೇ ಅಲ್ಲವೇ? ನಮ್ಮ ಕೋಟ್ಯಧಿಪತಿಗಳು ಹೀಗೆ ನಿಲ್ಲು­ವರಾ?’ ಎಂದು ನಿಟ್ಟುಸಿರು ಬಿಟ್ಟಿರಾ?

ನಿಜ! ಅಂಥ ಸ್ಥಿತಿಯನ್ನು ತಂದಿದ್ದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ. ಭಾರತಕ್ಕೆ ಬಂದಿದ್ದ ಅವ­ರನ್ನು ಭೇಟಿಯಾಗಲು (ಇನ್ನೂ ಸ್ಪಷ್ಟವಾಗಿ ಹೇಳ­ಬೇಕೆಂದರೆ ಬರೀ ಕೈ ಕುಲುಕಲು) ಸಾವಿರಾರು ಕೋಟಿ ರೂಪಾಯಿಗಳ ನಮ್ಮ ಒಡೆಯರು ಹೀಗೆ ಸಾಲಿನಲ್ಲಿ ನಿಂತಿರುವುದನ್ನು (ಪ್ರ.ವಾ. ಜ.27ರ ಪುಟ 9) ನೋಡಿದಾಗ, ‘ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾ­ನರು’ ಎಂಬ ವಾಕ್ಯಕ್ಕೆ ಹೊಸದೊಂದು ಅರ್ಥ ಹೊಳೆದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT