ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೊಳಗೊಬ್ಬ ಗಾಂಧಿ

ಪಿಕ್ಚರ್‌ ಪ್ಯಾಲೆಸ್‌
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಚಿನ್ನದ ಬಣ್ಣದ ಗೋಲ ಕನ್ನಡಕ ಮುಖಕ್ಕಿಟ್ಟ, ತಲೆಯ ಮೇಲೆ ತೆಳು ಹಳದಿ ಟೋಪಿ ತೊಟ್ಟ, ಶ್ವೇತವಸ್ತ್ರಧಾರಿ ಪುಟಾಣಿ ಗಾಂಧಿಗೂ ಗುರುತಿನ ಚೀಟಿಯ ಹಂಗಿದೆ...

ಮೊಮ್ಮಕ್ಕಳ ವಯಸ್ಸಿನ ಕಿರಿಯರ ಕಂಡು ಸ್ಮೃತಿವಶರಾದಂತಿರುವ ಹಿರಿಯ ಗಾಂಧಿಯ ಚಾಚಿದ ಕೈ ಬಯಸಿದ್ದು ಬರೀ ಹಸ್ತಲಾಘವವಾ ಅಥವಾ ಹೊಸ ಹುಡುಗರ ಭರವಸೆಯ ಆಸರೆಯಾ? ಸಾಲು ಹಿಡಿದು ಶಿಸ್ತಲ್ಲಿ ಹೊರಟ ಮಹಾತ್ಮನ ವೇಷದ ಸಾವಿರ ಸಾವಿರ ಮಕ್ಕಳ ಜಾತ್ರೆ ಎಲ್ಲರ ಒಳಗೂ ಬೆಳೆಯುತ್ತಲೇ ಇರುವ ಗಾಂಧಿಯೆಂಬ ಚಿಂತನಾಕ್ರಮಕ್ಕೊಂದು ರೂಪಕದಂತಿದೆ...

ಎಳೆಯ ಮಕ್ಕಳ ಮುದ್ದು ರೂಪದಲ್ಲಿ ಹಳೆಯ ಗಾಂಧಿಗೆ ಹೊಸ ಕಳೆ ಬಂದಿದೆ...

ಗಾಂಧಿ ಜಯಂತಿ ಪ್ರಯುಕ್ತ ವೆಂಕಟ್‌, ಸೇಂಟ್‌ ಆ್ಯನ್ಸ್‌ ಮತ್ತು ವೆನಸ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಶನ್ಸ್‌ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 4,605 ವಿದ್ಯಾರ್ಥಿಗಳು ಗಾಂಧಿವೇಷಧಾರಿಗಳಾಗಿ ಭಾಗವಹಿಸಿದ್ದರು. ಕಂಠೀರವ ಸ್ಟೇಡಿಯಂನಲ್ಲಿ ನಡೆದ ಈ ಗಾಂಧಿ ಉತ್ಸವದ ಚಿತ್ರಗಳನ್ನು ರಂಜು.ಪಿ ಸೆರೆಹಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT