ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ಪಂದ್ಯಗಳಿಗೆ ಮಳೆ ಅಡ್ಡಿ

ಕ್ರಿಕೆಟ್‌: ವಿಜಯ್‌ ಮರ್ಚಂಟ್‌ ಟ್ರೋಫಿ ಟೂರ್ನಿ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಮತ್ತು ಹೈದರಾ ಬಾದ್‌ ತಂಡಗಳ ನಡುವಿನ ವಿಜಯ್‌ ಮರ್ಚಂಟ್‌ ಟ್ರೋಫಿ 16 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್‌ ಟೂರ್ನಿಯ ಪಂದ್ಯದ ಮೊದಲ ದಿನ ದಾಟಕ್ಕೆ ಮಳೆ ಅಡ್ಡಿಪಡಿಸಿದೆ.

ಇಲ್ಲಿನ ಎಸ್‌ಎನ್‌ಡಬ್ಲ್ಯು ಮೈದಾನ ದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಾದ ಶನಿವಾರ ಹೈದರಾ ಬಾದ್‌ ತಂಡ 45 ಓವರ್‌
ಗಳಲ್ಲಿ ಒಂದು ವಿಕೆಟ್‌ಗೆ 103 ರನ್‌ ಗಳಿಸಿತ್ತು. ಈ ವೇಳೆ ಮಳೆ ಸುರಿದ ಕಾರಣ ದಿನದಾ ಟಕ್ಕೆ ತೆರೆ ಎಳೆಯಲಾಯಿತು.

ಟಾಸ್‌ ಗೆದ್ದ ಹೈದರಾಬಾದ್‌ ಮೊದಲು ಬ್ಯಾಟ್‌ ಮಾಡಲು ನಿರ್ಧರಿಸಿತು. ಬಿ. ರೇವಂತ್‌ 21 ರನ್‌ ಗಳಿಸಿ ಔಟಾದರು. ಆದರೆ ಎಂಎಸ್‌ ಆರ್ ಚರಣ್‌ (ಬ್ಯಾಟಿಂಗ್‌ 43) ಮತ್ತು ಮೊಹುಲ್‌ ಭೌಮಿಕ್‌ (ಬ್ಯಾಟಿಂಗ್‌ 38)  ಆತಿಥೇಯರ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು.

ಮಧ್ಯಾಹ್ನ 1.10 ರ ವೇಳೆಗೆ ಮಳೆ ಸುರಿದ ಕಾರಣ ಆಟ ಮೊಟಕು ಗೊಂಡಿತು. ಸಂಜೆ 3.45ರ ವೇಳೆಗೆ ಅಂಪೈರ್‌ಗಳು ದಿನದಾಟವನ್ನು ನಿಲ್ಲಿಸು ವ ನಿರ್ಧಾರ ಕೈಗೊಂಡರು. ಜಯಚಾಮರಾಜೇಂದ್ರ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕೇರಳ ಮತ್ತು ಆಂಧ್ರ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಯಾಯಿತು. ಮೊದಲು ಬ್ಯಾಟ್‌ ಮಾಡಿದ ಕೇರಳ 19 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 53 ರನ್‌ ಗಳಿಸಿದೆ.

ಸಂಕ್ಷಿಪ್ತ ಸ್ಕೋರ್‌: ಹೈದರಾಬಾದ್‌: 45 ಓವರ್‌ಗಳಲ್ಲಿ 1 ವಿಕೆಟ್‌ಗೆ 103 (ಎಂಎಸ್‌ಆರ್‌ ಚರಣ್‌ ಬ್ಯಾಟಿಂಗ್‌ 43, ಮೊಹುಲ್‌ ಭೌಮಿಕ್‌ ಬ್ಯಾಟಿಂಗ್‌ 38) ಕರ್ನಾಟಕ ವಿರುದ್ಧದ ಪಂದ್ಯ ಕೇರಳ: 19 ಓವರ್‌ಗಳಲ್ಲಿ 3 ವಿಕೆಟ್‌ಗೆ 53 (ಮೊಹಮ್ಮದ್‌ ರಫಿ 13ಕ್ಕೆ 2) ಆಂಧ್ರ ವಿರುದ್ದದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT