ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಕೆಜಿ ವಿದ್ಯಾರ್ಥಿ ರೂ98,975 ಶುಲ್ಕ ಮರುಪಾವತಿ

Last Updated 27 ನವೆಂಬರ್ 2014, 19:40 IST
ಅಕ್ಷರ ಗಾತ್ರ

ಬೆಂಗಳೂರು:   ಎಲ್‌ಕೆಜಿ  ವಿದ್ಯಾರ್ಥಿನಿಯ  ಶುಲ್ಕ ಮರುಪಾವತಿ  ಮಾಡುವಂತೆ  ಇಂದಿರಾನಗರದ  ನ್ಯೂ ಹೊರೈಜಾನ್‌ ಪಬ್ಲಿಕ್‌ ಶಾಲೆಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.

ಈ ಸಂಬಂಧ ಇಂದಿರಾನಗರದ ನಿವಾಸಿ ಸೂರ್ಯನಾರಾಯಣನ್‌ ನಾಗ­ರಾಜನ್‌ ವೇದಿಕೆಗೆ ದೂರು ಸಲ್ಲಿಸಿದ್ದರು. ₨98,975 ಶುಲ್ಕ ಹಾಗೂ ₨2 ಸಾವಿರ ಕೋರ್ಟ್‌ ವೆಚ್ಚವನ್ನು ಒಂದು ತಿಂಗ­ಳೊಳಗೆ ಸೂರ್ಯನಾರಾಯಣನ್‌ ಅವ­ರಿಗೆ ಪಾವತಿಸಬೇಕು ಎಂದು ನವೆಂಬರ್‌ 20ರಂದು ಆದೇಶ ಹೊರಡಿಸಿದೆ.

ಸೂರ್ಯನಾರಾಯಣನ್‌ ಅವರು ಜನವರಿ ತಿಂಗಳಿನಲ್ಲಿ ಪುತ್ರಿ ಅದಿತಿಯನ್ನು ನ್ಯೂ ಹೊರೈಜಾನ್‌ ಶಾಲೆಯಲ್ಲಿ ಎಲ್‌ಕೆಜಿಗೆ ಸೇರಿಸಿದ್ದರು. ಜನವರಿ 10ರಂದು ₨98,975 ಶುಲ್ಕ ಕಟ್ಟಿದ್ದರು.  ಜೂನ್‌ ತಿಂಗಳಿನಲ್ಲಿ ತರಗತಿಗಳು ಆರಂಭ­ವಾಗಬೇಕಿತ್ತು. ಈ ನಡುವೆ, ಮಾರ್ಚ್‌ ತಿಂಗಳಿನಲ್ಲಿ ಸೂರ್ಯನಾರಾ­ಯಣನ್‌ ಪುತ್ರಿಗೆ ಎಚ್‌ಎಸ್‌ಆರ್‌ ಬಡಾವಣೆಯ ನ್ಯಾಷನಲ್‌ ಪಬ್ಲಿಕ್‌ ಶಾಲೆಯಲ್ಲಿ ಪ್ರವೇಶ ದೊರಕಿತ್ತು.

ಶುಲ್ಕ ಮರುಪಾವತಿ ಮಾಡುವಂತೆ ನ್ಯೂ ಹೊರೈಜಾನ್‌ ಶಾಲಾ ಆಡಳಿತ ಮಂಡಳಿ ಬಳಿ ಕೋರಿಕೊಂಡಿದ್ದರು. ಆದರೆ, ಆಡಳಿತ ಮಂಡಳಿ ಶುಲ್ಕ ಮರುಪಾವತಿ ಮಾಡಲು ನಿರಾಕರಿಸಿತ್ತು. ಈ ಕಾರಣದಿಂದ ಅವರು ವೇದಿಕೆಯ ಮೊರೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT