ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಮೌಲ್ಯಮಾಪನ ಆರಂಭ

Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಲಾರ: ನಗರದ ಆರು ಕೇಂದ್ರ­ಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಭಾನುವಾರ ಆರಂಭವಾಯಿತು.

ಹಾರೋಹಳ್ಳಿಯ ಗೋಕುಲ ಸಂಸ್ಥೆಯಲ್ಲಿ ಕನ್ನಡ-, ಮಹಿಳಾ ಸಮಾಜ ಪ್ರೌಢಶಾಲೆಯಲ್ಲಿ ಇಂಗ್ಲಿಷ್-, -ಕಾರಂಜಿಕಟ್ಟೆಯ ಸುಭಾಷ್ ಪ್ರೌಢಶಾಲೆಯಲ್ಲಿ ಹಿಂದಿ, -ಮೆಥೋಡಿಸ್ಟ್ ಬಾಲಕಿಯರ ಪ್ರೌಢಶಾಲೆಯಲ್ಲಿ ಗಣಿತ,
-ಎಂ.ಬಿ.ರಸ್ತೆಯ ಸೆಂಟ್ಆನ್ಸ್ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ವಿಜ್ಞಾನ- ಉತ್ತರ ಪತ್ರಿಕೆಗಳ ಮೌಲ್ಯಮಾಪನ ಆರಂಭವಾಗಿದೆ,
235 ಉಪಮುಖ್ಯ ಮೌಲ್ಯ­ಮಾಪಕರು ಹಾಗೂ 1,399 ಸಹಾ­ಯಕ ಮೌಲ್ಯಮಾಪಕರು ಸೇರಿದಂತೆ 1,634 ಮಂದಿ ಮೌಲ್ಯಮಾಪನ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಪರೀಕ್ಷೆಯ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

ಕನ್ನಡ ಪ್ರಥಮ ಭಾಷೆಯಲ್ಲಿ 38 ಉಪಮುಖ್ಯ ಮೌಲ್ಯಮಾಪಕರು ಹಾಗೂ 128 ಸಹಾಯಕ ಮೌಲ್ಯ­ಮಾಪಕರು, ದ್ವಿತೀಯ ಭಾಷೆ ಇಂಗ್ಲಿಷ್ ಮೌಲ್ಯಮಾಪನದಲ್ಲಿ 29 ಉಪಮುಖ್ಯ ಮೌಲ್ಯಮಾಪಕರು ಹಾಗೂ 169 ಸಹಾಯಕ ಮೌಲ್ಯ­ಮಾಪಕರು ಕಾರ್ಯನಿರ್ವ­ಹಿಸುತ್ತಿದ್ದಾರೆ.

ಹಿಂದಿ ವಿಷಯದಲ್ಲಿ 216 ಸಹಾಯಕ ಮೌಲ್ಯಮಾಪಕರು, 36 ಮಂದಿ ಉಪಮುಖ್ಯ ಮೌಲ್ಯ­ಮಾಪಕರು ಹಾಗೂ ಗಣಿತ ವಿಷಯಕ್ಕೆ 295 ಮಂದಿ ಸಹಾಯಕ ಹಾಗೂ 49 ಮಂದಿ ಉಪಮುಖ್ಯ­ಮೌಲ್ಯಮಾಪಕರು ಕಾರ್ಯನಿರ್ವ­ಹಿಸುತ್ತಿದ್ದಾರೆ. ವಿಜ್ಞಾನ ವಿಷಯದಲ್ಲಿ 247 ಸಹಾಯಕ ಹಾಗೂ 42 ಉಪಮುಖ್ಯ ಮೌಲ್ಯಮಾಪಕರು, ಸಮಾಜ ವಿಜ್ಞಾನ ವಿಷಯದಲ್ಲಿ 244 ಸಹಾಯಕ ಹಾಗೂ 41 ಉಪಮುಖ್ಯ ಮೌಲ್ಯಮಾಪಕರು ಕಾರ್ಯ­ನಿರ್ವಹಿಸಲಿದ್ದಾರೆ. ಏಳೆಂಟು ದಿನದೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT