ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಗೆ ಮೈದಾನ ಸುತ್ತುವ ಶಿಕ್ಷೆ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕೋಲಾರ: ಪ್ರಕರಣವೊಂದರ ಸಂಬಂಧ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಜಿಲ್ಲೆಯ ಠಾಣೆಯೊಂದರ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರಿಗೆ ಕವಾಯತು ಮೈದಾನವನ್ನು ಮೂರು ದಿನ ಸುತ್ತು ಹಾಕುವ ಶಿಕ್ಷೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಜಯ್‌ ಹಿಲೋರಿ ವಿಧಿಸಿದ  ಘಟನೆ ಬೆಳಕಿಗೆ ಬಂದಿದೆ.

ಮಾಲೂರು ತಾಲ್ಲೂಕಿನ ಮಾಸ್ತಿ ಠಾಣೆಯ ಟಿ.ಆರ್‌.ರಂಗಪ್ಪ ಈ ಶಿಕ್ಷೆಗೆ ಒಳಗಾಗಿರುವ ಸಬ್ ಇನ್‌ಸ್ಪೆಕ್ಟರ್‌.

ಲೋಕಸಭೆ ಚುನಾವಣೆಯ ದಿನ­ವಾದ ಗುರುವಾರ ರಾತ್ರಿ ಅವರು ಮಾಲೂರು ತಾಲ್ಲೂಕಿನ ಹುಳದೇನ­ಹಳ್ಳಿಯಲ್ಲಿ ಜಮೀನು ವಿವಾದ ಸಂಬಂಧ ನಡೆದ ಹಲ್ಲೆ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯ ಮಾಡಿ­ದ್ದರು. ಪ್ರಕರಣದ ಮಾಹಿತಿ­ಯನ್ನು ತಮಗೆ ನೇರವಾಗಿ ನೀಡಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ ಶಿಕ್ಷೆ ವಿಧಿಸಿ­ದ್ದಾರೆ ಎಂದು ಮೂಲ­ಗಳು ತಿಳಿಸಿವೆ.

ಮೂರು ದಿನಕ್ಕೆ ಇಳಿಕೆ:  ಸೋಮವಾರ­ದಿಂದಲೇ ಮೈದಾನವನ್ನು ಸುತ್ತು­ಹಾಕಲು ಸೂಚನೆ ನೀಡಲಾಗಿತ್ತು. ಅದ­­­ರಂತೆ ಸಬ್‌ ಇನ್‌ಸ್ಪೆಕ್ಟರ್‌  ಸುತ್ತು ಹಾಕು­­­ತ್ತಿದ್ದರು. ಎರಡನೇ ದಿನವಾದ ಮಂಗ­­ಳ­­­ವಾರ ಸಂಜೆ ವೇಳೆಗೆ ಶಿಸ್ತು ಕ್ರಮ­­­ ಮೊಟಕುಗೊಳಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆ ಎಂಥದ್ದೇ ಇರಲಿ. ತಮಗೆ ನೇರವಾಗಿ ಮಾಹಿತಿ ನೀಡಲೇಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿಗಳು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಎಲ್ಲರಿಗೂ ಸೂಚನೆ ನೀಡಿದ್ದರು.

ಅದರಂತೆ ಸಬ್‌ ಇನ್‌ಸ್ಪೆಕ್ಟರ್‌ ಮಾಹಿತಿ ನೀಡದ್ದರಿಂದ ಶಿಸ್ತು ಕ್ರಮ ಕೈಗೊಳ್ಳ­ಲಾಗಿತ್ತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT