ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕವಚನ ಬೇಡ

ಅಕ್ಷರ ಗಾತ್ರ

ಶಿವಮೊಗ್ಗ ಜಲ್ಲೆ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪನವರು ಶಿವಮೊಗ್ಗ ನಗರದಲ್ಲಿ ನಡೆಸಿದ ‘ಜನಸಂಪರ್ಕ ಹಾಗೂ ಸಾರ್ವಜನಿಕ ಕುಂದುಕೊರತೆ ಸಭೆ’ಯಲ್ಲಿ  ಅಹವಾಲುದಾರರನ್ನು ಕುರಿತು ಏರಿದ ಧ್ವನಿಯಲ್ಲಿ ‘ಏಯ್ ಕೇಳಪ್ಪಾ ಇಲ್ಲಿ... ಏಯ್ ತಮ್ಮಾ...’ ಎಂದು ರೇಗಿದ್ದಾರೆ.

‘ಯಾರಪ್ಪಾ ಅಧಿಕಾರಿ... ಏಕೆ ಕೆಲಸ ಮಾಡ್ತಿಲ್ಲ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ (ಪ್ರ.ವಾ., ಜುಲೈ 23). ಸಚಿವರ ಕಳಕಳಿ ಶ್ಲಾಘನೀಯ. ಆದರೆ ಅಹವಾಲುದಾರರನ್ನು ಮತ್ತು  ಅಧಿಕಾರಿಗಳನ್ನು ಏಕವಚನದಲ್ಲಿ ಸಂಬೋಧಿಸಿದ್ದು ಸರಿಯಲ್ಲ.

ಅದರ ಬದಲು  ಬಹುವಚನ ಬಳಸಿದ್ದಿದ್ದರೆ  ಸಚಿವರ ವ್ಯಕ್ತಿತ್ವಕ್ಕೆ ಮೆರುಗು ಬರುತ್ತಿತ್ತು. ಅಹವಾಲುದಾರರು ಹಾಗೂ ಅಧಿಕಾರಿಗಳಿಗೆ ಸಚಿವರ ಕುರಿತು ಇರುವ ಗೌರವ ದುಪ್ಪಟ್ಟಾಗುತ್ತಿತ್ತು. ಏಕವಚನ ಸಂಬೋಧನೆ  ಕೇಳಲು ಹಿತಕರವಲ್ಲ. ಶೋಭೆಯೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT