ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಡ್ಸ್ ನಿಯಂತ್ರಣಕ್ಕೆ ‘ಜೈವಿಕ ಸಂವೇದಕ’

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಚ್‌ಐವಿ ಸೋಂಕು­­ಪೀಡಿತ ಜೀವಕೋಶದೊಳಗಿನ ರಾಸಾ­ಯನಿಕ ವರ್ತನೆಗಳನ್ನು ಆ ಕ್ಷಣ­ದಲ್ಲೇ ಅಳೆಯಬಲ್ಲ ಹೊಸ ಜೈವಿಕ ಸಂವೇ­ದಕವನ್ನು (ಬಯೊಸೆನ್ಸರ್‌) ಅಭಿ­ವೃದ್ಧಿ­­ಪಡಿಸಲಾಗಿದೆ. ಜತೆಗೆ ಏಡ್ಸ್ ವೈರಸ್‌ ಹಾಗೂ ಕ್ಷಯ ವೈರಸ್‌ಗಳು ಜೀವ­­ಕೋಶದೊಳಗೆ ಪರಸ್ಪರ ಹೇಗೆ ವರ್ತಿ­­ಸುತ್ತವೆ ಎಂಬುದರ ಬಗೆಗೂ ಈ ಸಂವೇ­ದಕ ತಂತ್ರಜ್ಞಾನ ಹೊಸ ಬೆಳಕು ಚೆಲ್ಲುತ್ತದೆ ಎನ್ನಲಾಗಿದೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ), ನವದೆಹಲಿಯ ತಳಿ ತಂತ್ರಜ್ಞಾನ ಹಾಗೂ  ಜೈವಿಕ ತಂತ್ರ­ಜ್ಞಾನ ಸಂಸ್ಥೆ (ಐಸಿಜಿಇಬಿ) ಮತ್ತು ಜಾಮಿಯಾ ಮಿಲಿಯಾ ಇಸ್ಲಾ­ಮಿಯಾ ವಿ.ವಿ. ಸಂಶೋಧಕರು ಇದನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಸೆನ್ಸರ್‌ನ್ನು ದೇಹದೊಳಕ್ಕೆ ಸೇರಿ­ಸುವ ಅಗತ್ಯವಿಲ್ಲ. ಇದು ಹೊರಗಿನಿಂ­ದಲೇ ಎಚ್‌ಐವಿ ಸೋಂಕಿತ ಜೀವ­ಕೋಶ­­ದೊಳಗಿನ ವರ್ತನೆ ಬಗ್ಗೆ ಮಾಹಿತಿ ನೀಡುತ್ತದೆ. ಅಂತಿಮವಾಗಿ ಇದು ಏಡ್ಸ್ ನಿಯಂತ್ರಣದಲ್ಲಿ ನೆರವಾಗಬಹುದು ಎಂದು  ಗುಬ್ಬಿ ಲ್ಯಾಬ್‌್ಸ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT