ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಮೂರನೇ ಸ್ಥಾನಕ್ಕೇರಿದ ಗೋವಾ

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮಡಗಾಂವ್‌ (ಪಿಟಿಐ):  ಬದಲಿ ಆಟಗಾರ ಮಿರೊಸ್ಲಾವ್‌ ಸ್ಲೆಪಿಕಾ ಅವರ ಮಿಂಚಿನ ಆಟದಲ್ಲಿ  ಮಿನುಗಿದ  ಎಫ್‌ಸಿ ಗೋವಾ ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಬುಧವಾರದ  ಪಂದ್ಯದಲ್ಲಿ ಗೆದ್ದು  ಪಾಯಿಂಟ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಫ್‌ಸಿ ಗೋವಾ 3–0 ಗೋಲುಗಳಿಂದ  ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಗೋವಾ ತಂಡದ ಸ್ಲೆಪಿಕಾ 63 ಮತ್ತು 79ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ,  ಆ್ಯಂಡ್ರೆ ಸ್ಯಾಂಟೊಸ್‌ 69ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಕ್ಕೆ ಕಾರಣರಾದರು. ಈ ಜಯದೊಂದಿಗೆ ಗೋವಾ ತಾನಾಡಿರುವ 11 ಪಂದ್ಯಗಳಿಂದ 15 ಪಾಯಿಂಟ್ಸ್‌ ಕಲೆಹಾಕಿತು.  ಕೇರಳ ಬ್ಲಾಸ್ಟರ್ಸ್‌ ಕೂಡಾ ಇಷ್ಟೇ ಪಾಯಿಂಟ್ಸ್‌ ಗಳಿಸಿತ್ತಾದರೂ, ಉತ್ತಮ ಗೋಲುಗಳ ಸರಾಸರಿಯಲ್ಲಿ ಗೋವಾ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಿತು.

ಉಭಯ ತಂಡಗಳ ಆಟಗಾರರು  ಆರಂಭದಿಂದಲೇ ಆಕ್ರಮಣ­ಕಾರಿ ಆಟಕ್ಕೆ ಮನಸ್ಸು ಮಾಡಿ­ದ್ದರಿಂದ ಮೊದ­ಲರ್ಧದ ಆಟ ಗೋಲು ರಹಿತವಾಗಿ ಅಂತ್ಯ ಕಂಡಿತು. ವಿರಾ­ಮದ ಬಳಿಕ ಚುರುಕು­ತನಕ್ಕೆ ಒತ್ತು ನೀಡಿದ ಗೋವಾ ಕೇರಳ ತಂಡದ  ರಕ್ಷಣಾ ವಿಭಾಗದ ದೌರ್ಬಲ್ಯವನ್ನು ಗುರಿಯಾಗಿಸಿ­ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT