ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಉಗ್ರರಿಂದ ಇಬ್ಬರು ಸ್ತ್ರೀಯರ ಶಿರಚ್ಛೇದ

Last Updated 30 ಜೂನ್ 2015, 8:41 IST
ಅಕ್ಷರ ಗಾತ್ರ

ಬೈರೂತ್‌, ಲೆಬಿನಾನ್‌ (ಎಎಫ್‌ಪಿ): ವಾಮಾಚಾರದ ಆರೋಪದಡಿ ಇಬ್ಬರು ಮಹಿಳೆಯರನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರು ಸಿರಿಯಾದಲ್ಲಿ ಶಿರಚ್ಛೇದ ಮಾಡಿದ್ದಾರೆ. ಅಲ್ಲದೇ, ಸ್ತ್ರೀಯರನ್ನು ಶಿರಚ್ಛೇದ ಮಾಡಿದ್ದು ಇದೇ ಮೊದಲು ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಕರೊಬ್ಬರು ಮಂಗಳವಾರ ತಿಳಿಸಿದ್ದಾರೆ.

‘ದೇರ್‌ ಇಜೊರ್‌ ಪ್ರಾಂತ್ಯದಲ್ಲಲಿ ಇಬ್ಬರು ಮಹಿಳೆಯರನ್ನು ಇಸ್ಲಾಮಿಕ್ ಸ್ಟೇಟ್‌ ಉಗ್ರರ ಗುಂಪು ಶಿರಚ್ಛೇದ ಮಾಡಿದೆ. ಮಹಿಳೆಯರನ್ನು ಹೀಗೆ ಹೀನಾಯವಾಗಿ ಕೊಂದಿದ್ದು ಇದೇ ಮೊದಲು ಬಾರಿ’ ಎಂದು ವೀಕ್ಷಣಾ ಮುಖ್ಯಸ್ಥ ರಾಮಿ ಅಬ್ದೆಲ್ ರಹಮಾನ್ ತಿಳಿಸಿದ್ದಾರೆ.

ಭಾನುವಾರ ಹಾಗೂ ಸೋಮವಾರ ಈ ಘಟನೆಗಳು ನಡೆದಿದೆ. ‘ವಾಮಾಚಾರ ಹಾಗೂ ದುರ್ದೈವತೆಗಳ ಆರಾಧನೆ’ಯ ಆರೋಪದಡಿ ಅವರ ಪತಿಗಳೊಂದಿಗೆ ಅವರನ್ನು ಕೊಲ್ಲಲಾಗಿದೆ ಎಂದು ಬ್ರಿಟನ್‌ ಮೂಲಕ ರಹಮಾನ್ ತಿಳಿಸಿದ್ದಾರೆ.

ಭೀಕರವಾಗಿ ಕೊಲ್ಲವುದಕ್ಕೆ ಕುಖ್ಯಾತಿ ಪಡೆದಿರುವ ಐಎಸ್‌ ಉಗ್ರರ ಗುಂಪು, ಪರ ಪುರುಷರ ಸಂಗದ ಆರೋಪದಡಿ ಸ್ತ್ರೀಯರನ್ನು ಕಲ್ಲು ಹೊಡೆದು ಸಾಯಿಸುತ್ತದೆ ಎನ್ನಲಾಗಿದೆ.

ರೆಹಮಾನ್ ಅವರ ಪ್ರಕಾರ, ಸಿರಿಯಾ ಹಾಗು ಇರಾಕ್‌ನಲ್ಲಿ ಖಲಿಪ್‌ ಆಡಳಿತವನ್ನು ಘೋಷಿಸಿದಾಗಿನಿಂದ ಈವರೆಗೂ ಐಎಸ್‌ ಉಗ್ರರು ಸಿರಿಯಾದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ಆ ಪೈಕಿ 74 ಮಕ್ಕಳು ಸೇರಿದಂತೆ ಸುಮಾರು 1800 ನಾಗರಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT