ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಸೇರಲು ಯತ್ನ: ಟೆಕ್ಕಿ ವಶಕ್ಕೆ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಉಗ್ರಗಾಮಿ­ಗಳ ಪಡೆಗೆ ಸೇರಲು ಯತ್ನಿಸುತ್ತಿದ್ದ ಗೂಗಲ್‌ನ ಮಾಜಿ ಉದ್ಯೋಗಿಯನ್ನು ಮಂಗಳವಾರ ಇಲ್ಲಿನ ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದ್ದಾರೆ.

ತಮಿಳುನಾಡು ಮೂಲದ ಮುನಾವದ್ ಸಲ್ಮಾನ್ ಸಾಮಾಜಿಕ  ಜಾಲತಾಣಗಳ ಮೂಲಕ ಜಿಹಾದಿ ಗುಂಪುಗಳು ಮತ್ತು ಐಎಸ್‌ನ ಸಾಹಿತ್ಯದಿಂದ  ಆಕರ್ಷಿತನಾಗಿ, ಉಗ್ರರ ಗುಂಪನ್ನು ಸೇರಲು ಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಗೂಗಲ್‌ನ ಹೈದರಾ­ಬಾದ್ ಶಾಖೆಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಸಲ್ಮಾನ್, ಏಳು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ.

ಕಳೆದ ಆರು ತಿಂಗಳಿ­ನಿಂದ ಸಾಮಾಜಿಕ ಜಾಲ­ತಾಣ­­ಗಳಲ್ಲಿ  ಐಎಸ್‌ ಸಾಹಿತ್ಯ ಅಧ್ಯಯನ ಮಾಡಿದ್ದ.  ಸೌದಿ ಅರೇಬಿ­ಯಾಗೆ ತೆರಳಿ, ಅಲ್ಲಿಂದ ಇರಾಕ್‌ಗೆ ಪಲಾಯನ ಮಾಡಲು ಆತ ಯೋಜಿ­ಸಿದ್ದ. ಸೌದಿ ಅರೇಬಿಯಾದ ವೀಸಾ ಪಡೆಯಲು ಯತ್ನಿಸುತ್ತಿ­ದ್ದಾಗ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಅವರು ತಿಳಿಸಿದ್ದಾರೆ.

‘ಸಲ್ಮಾನ್ ಮೇಲೆ ಯಾವುದೇ ಪ್ರಕ­ರಣ ದಾಖಲಿಸಿಲ್ಲ. ಆತನ ಪೋಷಕರು, ಸೋದರರ ಮೂಲಕ ಮತ್ತೊಮ್ಮೆ ಈ ರೀತಿ ಮಾಡದಂತೆ ಮನವೊಲಿಸಿ ಬಿಡುಗಡೆ ಮಾಡಲಾಗಿದೆ. ಮುಂದೆ ಆತ  ಉಗ್ರರ ಗುಂಪು ಸೇರಲು ಯತ್ನಿಸಿ­ದರೆ ಅಗತ್ಯ ಕ್ರಮ ಕೈಗೊಳ್ಳಲಾ­ಗುತ್ತದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT