ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ ‘ಪ್ರಚಾರ ಬಾಲಕಿ’ ಹತ್ಯೆ

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಪ್ರಚಾರಕ್ಕೆ  ಆಗಿ ಬಳಕೆಯಾಗಿದ್ದ ಆಸ್ಟ್ರಿಯಾ ಮೂಲದ ಬಾಲಕಿ ಸಮ್ರಾ ಕೆಸಿನೊವಿಕ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ.

ಐಎಸ್ ಪ್ರಾಬಲ್ಯವಿರುವ ರಖ್ಖಾ ನಗರದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಹೊಡೆದು ಕೊಲ್ಲಲಾ
ಗಿದೆ ಎಂದು ಮೂಲಗಳು ತಿಳಿಸಿವೆ.

17 ವರ್ಷದ ಸಮ್ರಾ ಮತ್ತು ಆಕೆಯ ಗೆಳತಿ ಸಬಿನಾ ಸೆಲಿಮೊವಿಕ್ 2014ರ ಏಪ್ರಿಲ್‌ನಲ್ಲಿ ಆಸ್ಟ್ರಿಯಾದಿಂದ ಸಿರಿಯಾಕ್ಕೆ ತೆರಳಿದ್ದರು. ಸಿರಿಯಾದಲ್ಲಿ ಅವರು ಜಿಹಾದಿಗಳನ್ನು ಮದುವೆಯಾಗಿದ್ದರು ಎಂದು ‘ದಿ ಇಂಡಿಪೆಂಡೆಂಟ್’ ವರದಿ ಮಾಡಿದೆ.

‘ಆಸ್ಟ್ರಿಯಾ ಮೂಲದ 15 ವರ್ಷದ ಇಬ್ಬರು ಬಾಲಕಿಯರು ಐಎಸ್‌ ಉಗ್ರರ ಜತೆ ಇದ್ದರು. ಅವರನ್ನು ಐಎಸ್ ನೇಮಿಸಿಕೊಂಡಿತ್ತು. ಅವರಲ್ಲಿ ಒಬ್ಬ ಬಾಲಕಿ ಹತ್ಯೆಯಾಗಿದ್ದರೆ, ಮತ್ತೊಬ್ಬಳು ತಪ್ಪಿಸಿಕೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ವಿಶ್ವ ಸಂಸ್ಥೆಯ ಭಯೋತ್ಪಾದನಾ ನಿಗ್ರಹ ತಜ್ಞ ಡೇವಿಡ್ ಷಾರಿಯಾ ಹೇಳಿದ್ದಾರೆ. 

ಈ ಇಬ್ಬರು ಬಾಲಕಿಯರನ್ನು ಐ.ಎಸ್. ಉಗ್ರರು ತಮ್ಮ ಪ್ರಚಾರಕ್ಕಾಗಿ ‘ಪೋಸ್ಟರ್‌ ಗರ್ಲ್‌’ಗಳಾಗಿ ಬಳಸಿಕೊಂಡಿತ್ತು. ಕಲಶ್ನಿಕೋವ್ ಸರಣಿಯ ರೈಫಲ್‌ಗಳನ್ನು ಹಿಡಿದು ನಿಂತಿರುವ ಈ ಬಾಲಕಿಯರ ಸುತ್ತ ಮತ್ತಷ್ಟು ಶಸ್ತ್ರಸಜ್ಜಿತ ಉಗ್ರರು ನಿಂತಿರುವ ಚಿತ್ರ ಆ ಪೋಸ್ಟರ್‌ಗಳಲ್ಲಿ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT