ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಟಿ ಪ್ರವೇಶ ನಿಯಮ ಸಡಿಲ

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ದೇಶದ ಪ್ರತಿಷ್ಠಿತ ಐಐಟಿಗಳಿಗೆ ಇಲ್ಲಿಯವರೆಗೆ ಜಾರಿಯಲ್ಲಿದ್ದ ಕಠಿಣ  ಪ್ರವೇಶ ಅವಕಾಶ ನಿಯಮಾವಳಿಗಳನ್ನು  ಸಡಿಲಗೊಳಿಸುವ ಮಹತ್ವದ ನಿರ್ಣಯವನ್ನು    ಭಾರತೀಯ ತಂತ್ರಜ್ಞಾನ ಸಂಸ್ಥೆಗಳ  (ಐಐಟಿ) ಮಂಡಳಿ  ಸೋಮವಾರ ಕೈಗೊಳ್ಳುವ ಮೂಲಕ ಆಕಾಂಕ್ಷಿ ವಿದ್ಯಾರ್ಥಿಗಳಿಗೆ  ಸಿಹಿ ಸುದ್ದಿ ನೀಡಿದೆ.

ಇಲ್ಲಿಯವರೆಗೆ   ಜೆಇಇ ಪಾಸು ಮಾಡಿದ 12ನೇ ತರಗತಿ   ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳಿಸುವ ಮೊದಲ ಶೇ 20ರಷ್ಟು ವಿದ್ಯಾರ್ಥಿ­ಗಳನ್ನು ಮಾತ್ರ ಐಐಟಿ ಪ್ರವೇಶಕ್ಕೆ ಪರಿಗಣಿಸಲಾಗುತಿತ್ತು. ಆದರೆ, ಹೊಸ ನಿಯಮಾಳಿ ಪ್ರಕಾರ 12ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಶೇ 20ರಲ್ಲಿ ಸ್ಥಾನ ಪಡೆಯದ ವಿದ್ಯಾರ್ಥಿಗಳನ್ನೂ  ಐಐಟಿ ಪ್ರವೇಶಕ್ಕೂ ಪರಿಗಣಿಸಲು ನಿರ್ಧರಿಸಲಾಗಿದೆ.

ಮಾನವ ಸಂಪನ್ಮೂಲ ಸಚಿವೆ ಸ್ಮೃತಿ  ಇರಾನಿ ಅಧ್ಯಕ್ಷತೆಯಲ್ಲಿ  ಮದ್ರಾಸ್‌ ಐಐಟಿಯಲ್ಲಿ  ನಡೆದ ಮಂಡಳಿಯ 48ನೇ ವಾರ್ಷಿಕ ಸಭೆಯಲ್ಲಿ ಈ ಮಹತ್ವ ನಿರ್ಧಾರ ತೆಗೆದುಕೊಳ್ಳ­ಲಾಗಿದ್ದು, ಆಕಾಂಕ್ಷಿ ವಿದ್ಯಾರ್ಥಿಗಳು ಐಐಟಿ ಪ್ರವೇಶ ದಾರಿಯನ್ನು ಇನ್ನಷ್ಟು ಸುಗಮಗೊಳಿಸಲಿದೆ.

12ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಶೇ 20 ಸ್ಥಾನಗಳಿಸಿದ ಹಾಗೂ ಜೆಇಇ ಪಾಸು ಮಾಡಿದ ವಿದ್ಯಾರ್ಥಿಗಳು  ದೇಶದ ಪ್ರತಿಷ್ಠಿತ 16 ಐಐಟಿಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.

ಜೆಇಇ ಪಾಸು ಮಾಡಿದರೂ 12ನೇ ತರಗತಿ ಪರೀಕ್ಷೆಯಲ್ಲಿ ಮೊದಲ ಶೇ 20 ರಲ್ಲಿ ಸ್ಥಾನಗಳಿಸಲು ವಿಫಲರಾದ  ವಿದ್ಯಾರ್ಥಿಗಳು  ಪ್ರವೇಶ ಅವಕಾಶ­ದಿಂದ ವಂಚಿತರಾಗುತ್ತಿದ್ದಾರೆ.

ಐಐಟಿ ಪ್ರವೇಶ ಪಡೆಯಲು ಜೆಇಇ ತೇರ್ಗಡೆಯೊಂದಿಗೆ  12ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ 75ರಷ್ಟು ಅಂಕ ಗಳಿಸುವ  ಸಾಮಾನ್ಯ ಹಾಗೂ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಅರ್ಹರಾಗುತ್ತಾರೆ.

ಪರಿಶಿಷ್ಟ ಜಾತಿ, ಪಂಗಡ ಹಾಗೂ ದೈಹಿಕ ಅಸಮರ್ಥ ವಿದ್ಯಾರ್ಥಿಗಳು ಶೇ 70 ಅಂಕ  ಗಳಿಸುವುದು ಕಡ್ಡಾಯ ಎಂದು ನಿಗದಿಗೊಳಿಸಲಾಗಿದೆ.
ಇದರ ಜೊತೆ 12ನೇ ತರಗತಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಮೊದಲ  ಶೇ 20ರಷ್ಟು ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶಾ­ವಕಾಶ ನಿಯಮಾವಳಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT