ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಂ ಸಾಂಗ್‌ನಲ್ಲಿ ಶ್ರದ್ಧಾ

ಪಂಚರಂಗಿ
Last Updated 31 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಆಶಿಕಿ 2’ ಚಿತ್ರದ ಮೂಲಕ ಬಿ–ಟೌನ್‌ ಪ್ರವೇಶಿಸಿದ ನಟಿ ಶ್ರದ್ಧಾ ಕಪೂರ್‌ ಈಗ ಗ್ಲಾಮರಸ್‌ ಐಟಮ್‌ ಗರ್ಲ್ ಆಗಿ ‘ಉಂಗ್ಲಿ’ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ.

ಕರಣ್‌ ಜೋಹರ್‌ ಪ್ರೊಡಕ್ಷನ್‌ ಹೌಸ್‌ ನಿರ್ಮಿಸಿ, ರೆನ್ಸಿಲ್‌ ಡಿ ಸಿಲ್ವ ಅವರು ನಿರ್ದೇಶಿಸಿರುವ ‘ಉಂಗ್ಲಿ’ ಚಿತ್ರದಲ್ಲಿ ಇಮ್ರಾನ್‌ ಹಶ್ಮಿ ಹಾಗೂ ಕಂಗನಾ ರನೋಟ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ನಾನು, ಇಮ್ರಾನ್‌ ಅಭಿನಯಿಸುತ್ತಿರುವ ಹಾಡನ್ನು ಐಟಂ ಸಾಂಗ್‌ ಎನ್ನಬೇಕೆ ಅಥವಾ ಪ್ರಮೋಷನಲ್‌ ಸಾಂಗ್‌ ಎನ್ನಬೇಕೆ ಎಂದು ಅರ್ಥವಾಗುತ್ತಿಲ್ಲ. ಈ ಹಾಡಿನಲ್ಲಿ ನಾನು ಬಹಳ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದೇನೆ’ ಎಂದು ಐಎಎನ್‌ಎಸ್‌ಗೆ ನೀಡಿರುವ ಸಂದರ್ಶನದಲ್ಲಿ ಶ್ರದ್ಧಾ ಹೇಳಿದ್ದಾರೆ.

‘ಬೆಳ್ಳಿ ಪರದೆ ಮೇಲೆ ಹಿಂದೆಂದೂ ಕಾಣಿಸದಂತಹ ವಿಭಿನ್ನ ಅವಕಾಶ ಈ ಹಾಡಿನಲ್ಲಿದೆ ಎಂದು ಕರಣ್‌ ನನಗೆ ಈ ಹಾಡಿನಲ್ಲಿ ಹೆಜ್ಜೆ ಹಾಕಲು ಅವಕಾಶ ನೀಡುವಾಗ ಹೇಳಿದ್ದರು. ನಂತರ ಟೈಟಲ್‌ ಸಾಂಗ್‌ ‘ಡಾನ್ಸ್‌ ಬಸಂತಿ’ ಕೇಳಿದ ತಕ್ಷಣ ನಾನು ಓಕೆ ಹೇಳಿದೆ’ ಎಂದಿದ್ದಾರೆ ಅವರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT