ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ರಿಟರ್ನ್ಸ್‌ ಸಲ್ಲಿಸಲು ಕೊನೆಯ ದಿನ ಸೆ. 7ರವರೆಗೆ ವಿಸ್ತರಣೆ

Last Updated 2 ಸೆಪ್ಟೆಂಬರ್ 2015, 14:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇ-ಫೈಲಿಂಗ್‌ ಮೂಲಕ ಐ.ಟಿ ರಿಟರ್ನ್ಸ್‌ ಸಲ್ಲಿಸಲು ನಿಗದಿಪಡಿಸಿದ್ದ ಕೊನೆಯ ದಿನವನ್ನು ಆದಾಯ ತೆರಿಗೆ ಇಲಾಖೆ ಸೆಪ್ಟೆಂಬರ್‌ 7ರವರೆಗೆ ವಿಸ್ತರಿಸಿದೆ.

ಆನ್‌ಲೈನ್‌ ಮೂಲಕ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸಲು ಆಗಸ್ಟ್‌ 31 ಕೊನೆಯ ದಿನವಾಗಿತ್ತು. ಆದರೆ, ಸರ್ವರ್‌ ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ದೋಷಗಳು ಇದ್ದ ಕಾರಣ ಸಾವಿರಾರು ಜನರಿಗೆ ನಿಗದಿತ ಸಮಯದೊಳಗೆ ರಿಟರ್ನ್ಸ್‌ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಐ.ಟಿ ಇಲಾಖೆ ಈ  ಕಾಲಾವಕಾಶವನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ.

2015-16ನೇ ಸಾಲಿನ ಆದಾಯ ತೆರಿಗೆ ಲೆಕ್ಕಪತ್ರ ವಿವರವನ್ನು ತೆರಿಗೆದಾರರು ಸೆ.7ರವರೆಗೆ ಸಲ್ಲಿಸಬಹುದು ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ  ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT