ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವರು ತಪ್ಪಿತಸ್ಥರು, 17ಕ್ಕೆ ಶಿಕ್ಷೆ ಪ್ರಕಟ

ಧೌಲಾ ಕುಂವಾ ಸಾಮೂಹಿಕ ಅತ್ಯಾಚಾರ ಪ್ರಕರಣ
Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಈಶಾನ್ಯ ದೆಹಲಿಯ ಧೌಲಾ ಕುಂವಾ ಪ್ರದೇಶದಲ್ಲಿ 2010ರಲ್ಲಿ ಕಾಲ್ ಸೆಂಟರ್ ಉದ್ಯೋಗಿ­ಯೊಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ ಐವರನ್ನು ಇಲ್ಲಿಯ ಸೆಷನ್‌್ಸ ನ್ಯಾಯಾಲಯವು ತಪ್ಪಿತಸ್ಥರು ಎಂದು ಘೋಷಿಸಿದೆ.
ಈ 17ರಂದು ಶುಕ್ರವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುತ್ತದೆ ಎಂದು ಹೆಚ್ಚುವರಿ ಸೆಷನ್‌್ಸ ನ್ಯಾಯಾಧೀಶ ವೀರೇಂದ್ರ ಭಟ್ ತಿಳಿಸಿದರು.

ಉಸ್ಮಾನ್ ಅಲಿಯಾಸ್‌ ಕಾಳೆ, ಶಂಶದ್ ಅಲಿ­ಯಾಸ್ ಖುಟಕನ್‌, ಇಕ್ಬಾಲ್ ಅಲಿಯಾಸ್ ಬಡಾ ಬಿಲ್ಲಿ, ಶಾಹಿದ್ ಅಲಿಯಾಸ್ ಛೋಟಾ

‘ಕಠಿಣ ಶಿಕ್ಷೆಯಾಗಲಿ’
ನವದೆಹಲಿ (ಪಿಟಿಐ): ಧೌಲಾ ಕುಂವಾ ಸಾಮೂಹಿಕ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವುದು ಖಚಿತವಾಗಿದೆ. ಆದರೆ 34 ವರ್ಷದ ಸಂತ್ರಸ್ತೆ ಕಳೆದ ನಾಲ್ಕು ವರ್ಷ­ಗಳಲ್ಲಿ ಅನುಭವಿಸಿದ ಮಾನಸಿಕ ಯಾತನೆ ಅಷ್ಟಿಷ್ಟಲ್ಲ. ಘಟನೆಯ ನಂತರ 2011ರಲ್ಲಿ ಕಾಲ್ ಸೆಂಟರ್ ನೌಕರಿ ಬಿಟ್ಟ ಸಂತ್ರಸ್ತೆ ಮಿಜೋರಾಂನ ಐಜ್ವಾಲ್‌­ದಲ್ಲಿಯ ತನ್ನ ಸ್ವಗ್ರಾಮಕ್ಕೆ ಹಿಂತಿರುಗಿ ಹೊಟ್ಟೆಪಾಡಿಗೆ ಸಣ್ಣ ಪ್ರಮಾಣದ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆಕೆಯ ಗೆಳತಿ ಕುಕಿ ಹೇಳಿದ್ದಾರೆ.

ಬಿಲ್ಲಿ ಮತ್ತು ಕಮರುದ್ದೀನ್ ಅಲಿಯಾಸ್ ಮೊಬೈಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಪಹರಣ (365), ಸಾಮೂಹಿಕ ಅತ್ಯಾಚಾರ (376, 2ಜಿ), ಕ್ರಿಮಿನಲ್‌ ಬೆದರಿಕೆ (506), ಸಮಾನ ಉದ್ದೇಶ (34) ಕಲಂ ಪ್ರಕಾರ ದಾಖಲಿಸಲಾಗಿದ್ದ ಪ್ರಕರಣಗಳು ಸಾಬೀತಾಗಿ­ರು­ವುದರಿಂದ ಅವರೆಲ್ಲರೂ ತಪ್ಪಿತಸ್ಥರು ಎಂದು ನ್ಯಾಯಾಧೀಶರು ತಿಳಿಸಿದರು.

ಅತ್ಯಾಚಾರ ನಡೆದಿದೆ ಎಂದು ಡಿಎನ್‌ಎ ವರದಿ­ಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಹಾಗೂ ಸಂತ್ರಸ್ತೆ ಆರಂಭ­ದಲ್ಲಿ ಗುರುತು ಪತ್ತೆ ಹಚ್ಚುವ ಪರೇಡ್‌ನಲ್ಲಿ ಇಬ್ಬರನ್ನು ಗುರುತಿಸಿದ್ದು, ಇವರ ಹೇಳಿಕೆಯ ಆಧಾರದ ಮೇಲೆ ಮತ್ತೆ ಮೂವರನ್ನು ಬಂಧಿಸಲಾಗಿದೆ. ಆದ್ದರಿಂದ ಐದು ಜನರೂ  ತಪ್ಪಿ­ತಸ್ಥರು ಎಂದು ಸಾಬೀತುಪ­ಡಿಸುವಲ್ಲಿ ಪ್ರಾಸಿಕ್ಯೂಷನ್ ಯಶಸ್ವಿ ಆಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಉಸ್ಮಾನ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖ­ಲಾ­ಗಿದ್ದ ಪ್ರಕರಣ ಸಾಬೀತಾಗದೆ ಇರುವುದರಿಂದ ಈ ಪ್ರಕರಣದಲ್ಲಿ ಆತನನ್ನು ಖುಲಾಸೆಗೊಳಿಸಲಾಗಿದೆ. 2010 ನವೆಂಬರ್ 24ರಂದು ಕೆಲಸ ಮುಗಿಸಿ­ಕೊಂಡು ಸ್ನೇಹಿತೆಯ ಜತೆ ನಡೆದು­ಕೊಂಡು ಹೋಗು­ತ್ತಿದ್ದ ಕಾಲ್ ಸೆಂಟರ್ ಉದ್ಯೋಗಿಯನ್ನು ಎಲ್ಲಾ ಐವರು ಅಪರಾಧಿಗಳು ಅಪಹರಿಸಿ  ಚಲಿಸುತ್ತಿದ್ದ ವಾಹ­ನ­­­­ದಲ್ಲಿ, ಮೊಂಗೋಲಪುರಿ ಪ್ರದೇಶದ ನಿರ್ಜನ ಪ್ರದೇಶದಲ್ಲಿ  ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ರಸ್ತೆಯಲ್ಲಿ ಅವರನ್ನು ಬಿಟ್ಟು ಪರಾರಿ­ಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT