ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐವಿಎಫ್ ಚಿಕಿತ್ಸೆಗೆ ತಯಾರಿ ಹೇಗೆ?

Last Updated 22 ಮೇ 2015, 19:30 IST
ಅಕ್ಷರ ಗಾತ್ರ

ಬಂಜೆತನಕ್ಕೆ ಪ್ರಸ್ತುತ ಇರುವಂತಹ ಆಯ್ಕೆಗಳ ಪೈಕಿ ಐವಿಎಫ್ ಚಿಕಿತ್ಸೆ ಬಹುಪಾಲು ಜನರಿಗೆ ಇದು ಮೊದಲ ಚಿಕಿತ್ಸಾ ಆಯ್ಕೆಯಾಗಿಲ್ಲ. ಐವಿಎಫ್ ಚಿಕಿತ್ಸೆಯನ್ನು ಪಡೆಯಲು ಆರಂಭಿಸುವ ದಂಪತಿಗಳು ಸಾಮಾನ್ಯವಾಗಿ, ಬಂಜೆತನದಿಂದಾಗಿ ಅತ್ಯಂತ ನೋವು ಮತ್ತು ನಿರಾಶೆಯನ್ನು ಅನುಭವಿಸುತ್ತಿರುತ್ತಾರೆ ಹಾಗೂ ಇದರಿಂದಾಗಿ ಖಿನ್ನತೆ, ಕೋಪ, ಸುಸ್ತು ಹಾಗೂ ಆತಂಕಕ್ಕೊಳಗಾಗಿರುತ್ತಾರೆ.

ರೋಗಿಗಳಿಗೆ ಒತ್ತಡ ಉಂಟು ಮಾಡಬಹುದು ಎಂದು ಪರಿಗಣಿಸಲ್ಪಡಬಹುದಾದಂತಹ ಐವಿಎಫ್ ಅಂಶಗಳು ಬಹುಮುಖಿಯಾಗಿರುತ್ತವೆ ಹಾಗೂ ಅವರ ವೈವಾಹಿಕ, ಸಾಮಾಜಿಕ, ದೈಹಿಕ, ಭಾವನಾತ್ಮಕ ಹಾಗೂ ಆರ್ಥಿಕ ಸೇರಿದಂತೆ ಎಲ್ಲಾ ವಿಷಯಗಳ ಮೇಲೂ ಪರಿಣಾಮ ಬೀರಬಹುದಾಗಿರುತ್ತದೆ.

ಚಿಕಿತ್ಸೆಯ ಮೊದಲ ಹಂತ ರೋಗಿಗಳಿಗೆ ಅತ್ಯಂತ ಹೆಚ್ಚಿನ ಆತಂಕ ಹಾಗೂ ಗೊಂದಲಗಳ ಜೊತಗೆ ಬಹಳ ಒತ್ತಡ ಉಂಟು ಮಾಡುವುಂತದ್ದಾಗಿರುತ್ತದೆ. ಒಂದು ಚಿಕಿತ್ಸಾ ಪರಿಧಿಯೊಳಗೆ, ಚಿಕಿತ್ಸೆಯ ಮುಂದಿನ ಹಂತಕ್ಕೆ ಹೋಗಲು ಈ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ, ರೋಗಿಗಳು ಐವಿಎಫ್ ಚಿಕಿತ್ಸೆಯನ್ನು ಹಂತಗಳ ಸರಣಿಯಂತೆ ಕಾಣುತ್ತಾರೆ: ಅವುಗಳು, ನಿಗಾವಹಿಸುವಿಕೆ, ಊಸೈಟ್ ರಿಟ್ರೀವಲ್, ಫಲವತ್ತತೆ, ಭ್ರೂಣ ವರ್ಗಾವಣೆ, ಕಾಯುವ ಅವಧಿ, ಹಾಗೂ ಗರ್ಭಧಾರಣಾ ಪರೀಕ್ಷೆಯ ಹಂತಗಳು.
ಒತ್ತಡ, ಆತಂಕ ಹಾಗೂ ನಿರೀಕ್ಷೆಯ ಮಟ್ಟ ಪ್ರತಿ ಹಂತದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಇದು ಕಾಯುವ ಅವಧಿಯಲ್ಲಿ ತುಂಬಾ ಹೆಚ್ಚಾಗಿರುತ್ತದೆ.
ಐವಿಎಫ್ ಚಿಕಿತ್ಸೆಯ ಯಶಸ್ಸಿನ ಮೇಲೆ ನೇರ ಪರಿಣಾಮ ಬೀರುವಂತಹ ಎರಡು ಪ್ರಮುಖ ಅಂಶಗಳಿವೆ. ಅವುಗಳೆಂದರೆ ಅಂಡಾಣುವಿನ ಗುಣಮಟ್ಟ ಹಾಗೂ ದೇಹದೊಳಗೆ ಯಶಸ್ವಿಯಾಗಿ ಸೇರಿಸಬಹುದಾದಂತಹ ಭ್ರೂಣದ ಸಾಮರ್ಥ್ಯ. ಇವುಗಳು ಮಹಿಳೆಯ ಒಟ್ಟಾರೆ ಆರೋಗ್ಯವನ್ನು ಅವಲಂಬಿಸಿವೆ. ಉತ್ತಮ ಗುಣಮಟ್ಟದ ಫಾಲಿಕಲ್‌ಗಳು ಹಾಗೂ ಫಲವತ್ತಾದ, ದೇಹದೊಳಗೆ ಅಳವಡಿಸುವಂತಹ ಗರ್ಭಕೋಶದ ಒಳಪದರಗಳು (ಎಂಡೋಮೆಟ್ರಿಯಲ್ ಲೈನಿಂಗ್) ಯಶಸ್ವಿ ಚಿಕಿತ್ಸಾ ಹಂತವನ್ನು ಹೊಂದಲು ಪ್ರಮುಖ ಅಂಶಗಳಾಗಿವೆ. ಈ ಪೈಕಿ ಒಂದು ಅಂಶವಿಲ್ಲದಿದ್ದರೂ ಸಹ ಯಶಸ್ಸಿನ ಅವಕಾಶ ಕಡಿಮೆ. ಪ್ರತಿಯೊಬ್ಬ ರೋಗಿಗೂ, ತಮ್ಮದೇ ಆದ, ವೈಯಕ್ತಿಕ, ಪರಿಹರಿಸಬಹುದಾದಂತಹ ನಿರ್ದಿಷ್ಟವಾದ ಅಗತ್ಯಗಳಿದ್ದರೂ ಸಹ, ಐವಿಎಫ್ ಚಿಕಿತ್ಸೆಗೆ ಸಿದ್ಧರಾಗಲು ದಂಪತಿ ಪಾಲಿಸಬಹುದಾದಂತಹ ಕೆಲವು ಮುಖ್ಯವಾದ ಕ್ರಮಗಳಿವೆ.

ಪಥ್ಯ:ಗರ್ಭಧರಿಸಲು ಸಿದ್ಧರಾಗುತ್ತಿರುವಾಗ, ಆರೋಗ್ಯಪೂರ್ಣ ಹಾಗೂ ಸಮತೋಲಿತ ಆಹಾರ ಸೇವಿಸುವುದು ದಂಪತಿಗಳಿಗೆ ಬಹಳ ಮುಖ್ಯ. ಇಂತಹ ದಂಪತಿಗಳು ಪ್ರತಿ ದಿನ ಕನಿಷ್ಠ ಐದು ಬಾರಿ ಹಣ್ಣು ಹಾಗೂ ತರಕಾರಿಗಳ ಸೇವನೆ ಹಾಗೂ ಆದ್ಯತೆಯ ಮೇರೆಗೆ 8-10 ಬಾರಿ ವಿಟಮಿನ್‌ಗಳು, ಖನಿಜಾಂಶಗಳು, ಟ್ರೇಸ್ ಎಲಿಮೆಂಟ್‌ಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳ ಸೇವನೆಯನ್ನು ಅವರು ಖಾತ್ರಿಪಡಿಸಬೇಕು. ಈ ಕೆಳಕಂಡ ಐದು ಆಹಾರ ಗುಂಪುಗಳ ಪೈಕಿ ಒಂದು ಗುಂಪಿನ ಆಹಾರ ಸೇವನೆ ಸಹಾಯಕವಾಗಬಹುದು:
ಹಣ್ಣು, ತರಕಾರಿಗಳು, ಪ್ರೋಟೀನ್‌ಗಳು (ಚಿಕನ್, ಎಣ್ಣೆಯುಕ್ತ ಮೀನು,& ಒಣಗಿದ ಬೀನ್ಸ್), ಧಾನ್ಯಗಳು (ಬ್ರೆಡ್, ದವಸಗಳು, ಅಕ್ಕಿ, ಪಾಸ್ಟಾ, ಇತ್ಯಾದಿ)
ಕ್ಯಾಲ್ಷಿಯಂ ಹೊಂದಿರುವ ಡೈರಿ ಆಹಾರ (ಹಾಲು, ಚೀಸ್ & ಯೋಗರ್ಟ್), ಸೇವಿಸಿ. ನಿಮ್ಮ ದೇಹಕ್ಕೆ ಅತೀ ಹೆಚ್ಚಿನ ಕೊಬ್ಬಿನಾಂಶ ಹಾಗೂ ಸಕ್ಕರೆ ಅಂಶಗಳನ್ನು ಒದಗಿಸುವಂತಹ ಕೇಕ್‌ಗಳು ಹಾಗೂ ಬಿಸ್ಕಟ್‌ಗಳಂತಹ ತಿನಿಸುಗಳಿಂದ ದೂರವಿರಿ.
ವಿಟಮಿನ್‌ಗಳು ಮತ್ತು ಮಿನರಲ್‌ಗಳು
ಮಹಿಳೆಗೆ ವಿಟಮಿನ್‌ಗಳು ಹಾಗೂ ಮಿನರಲ್‌ಗಳ ಸೇವನೆ ಫಲವತ್ತತೆಯನ್ನು ಹೆಚ್ಚಿಸುತ್ತದೆ ಹಾಗೂ ನಿಮ್ಮ ಗರ್ಭಧಾರಣಾ ಆರೋಗ್ಯವನ್ನು ಸುಧಾರಿಸುತ್ತದೆ. ಈ ಕೆಳಕಂಡ ವಿಟಮಿನ್‌ಗಳು ನಿಮಗೆ ಲಾಭ ನೀಡಬಹುದು:
ವಿಟಮಿನ್ ಸಿ, ಡಿ, ಇ, ಕ್ಯಾಲ್ಷಿಯಂ, ಮ್ಯಾಗ್ನಿಸಿಯಂ, ಫೋಲಿಕ್ ಆಸಿಡ್  ಅವನಿಗೆವೀರ್ಯಾಣುಗಳ ಗುಣಮಟ್ಟದ ಮೇಲೆ ವಿಟಮಿನ್‌ಗಳು, ಮಿನರಲ್‌ಗಳು ಹಾಗೂ ಆಂಟಿಆಕ್ಸಿಡೆಂಟ್‌ಗಳ ಲಾಭಕಾರಿ ಪರಿಣಾಮಗಳ ಬಗ್ಗೆ ಹಲವು ಅಧ್ಯಯನಗಳು ತೋರಿಸಿವೆ. ಆದ್ದರಿಂದ, ಚಿಕಿತ್ಸೆ ಆರಂಭಿಸುವ ೩ ತಿಂಗಳ ಮುಂಚೆಯಿಂದಲೇ ಪುರುಷರು ಈ ಕೆಳಕಂಡ ಪೋಷಕಾಂಶಗಳನ್ನು ಸೇವಿಸುವುದನ್ನು ಆರಂಭಿಸುವಂತೆ ಶಿಫಾರಸ್ಸು ಮಾಡಿದೆ.
ವಿಟಮಿನ್ ಇ, ಸಿ, ಝಿಂಕ್ 25 ಎಂಜಿ, ಲೈಕೊಪೀನ್, ಫೋಲೇಟ್, ಬೆಳ್ಳುಳ್ಳಿ

ವ್ಯಾಯಾಮ ಮತ್ತು ತೂಕ: ಅತಿಯಾದ ತೂಕ ಅಥವಾ ಅತೀ ಕಡಿಮೆ ತೂಕದ ಅಂಶಗಳು ಗರ್ಭಧರಿಸುವ ಅವಕಾಶಗಳನ್ನು ಕಡಿಮೆಗೊಳಿಸುವ ಸಂಭವವಿದೆ. ಕಡಿಮೆ ತೂಕವಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಅಂಡೋತ್ಪತ್ತಿಯ ಸಮಸ್ಯೆಗಳಿರುತ್ತವೆ. ಹೆಚ್ಚು ತೂಕವಿರುವ ಅಥವಾ ಸ್ಥೂಲಕಾಯದ ಮಹಿಳೆಯರ ದೇಹದಲ್ಲಿ ಹೆಚ್ಚು ಕೊಬ್ಬಿನಾಂಶವಿರುತ್ತದೆ. ವಾಸ್ತವದಲ್ಲಿ, ಈ ಕೊಬ್ಬಿನಾಂಶ ದೇಹದಲ್ಲಿ ಈಸ್ಟ್ರೋಜೆನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಪುರುಷರಲ್ಲಿ ಬೊಜ್ಜಿನಾಂಶ ವೀರ್ಯಾಣು ಉತ್ಪತ್ತಿ ಹಾಗೂ ನಿಮಿರುವಿಕೆಯ ಮೇಲೆ ಪರಿಣಾಮ ಬೀರಬಹುದು. ವಾರದಲ್ಲಿ ಮೂರರಿಂದ ನಾಲ್ಕು ದಿನಗಳ ಕಾಲ, ಪ್ರತಿ ದಿನ ೩೦ ನಿಮಿಷಗಳ ವ್ಯಾಯಾಮ ಮಾಡುವುದು ಗರ್ಭಧಾರಣೆಗೆ ನೆರವಾಗಬಲ್ಲದು.

ಮದ್ಯಪಾನ:
ಮಹಿಳೆಯರಲ್ಲಿ ಮದ್ಯಪಾನದ ಅಭ್ಯಾಸ ಅವರ ಸಂತಾನೋತ್ಪತ್ತಿ ವ್ಯವಸ್ಥೆಯ ಹಾರ್ಮೋನುಗಳ ಸಮತೋಲನವನ್ನು ನಾಶಪಡಿಸುತ್ತದೆ ಮತ್ತು ಈ ಮೂಲಕ ಮಾಸಿಕ ಋತುಚಕ್ರದ ಮೇಲೆ ಪರಿಣಾಮಕ್ಕೆ ಕಾರಣವಾಗುತ್ತದೆ ಮಹಿಳೆಯ ಗರ್ಭಧರಿಸುವ ಅವಕಾಶವನ್ನು ಬಹಳಷ್ಟು ಕಡಿಮೆಗೊಳಿಸುತ್ತದೆ.

ಅತಿಯಾದ ಮದ್ಯಪಾನ ಸೇವನೆಯೂ ಸಹ ವೀರ್ಯಾಣುಗಳ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಂಗಾತಿಗಳಿಬ್ಬರೂ ಸಹ ಚಿಕಿತ್ಸೆ ಹಾಗೂ ಗರ್ಭಧಾರಣೆ ಸಮಯದಲ್ಲಿ ಮದ್ಯಪಾನ ಕಡಿಮೆಗೊಳಿಸುವಂತೆ ಅಥವಾ ಸಂಪೂರ್ಣವಾಗಿ ನಿಲ್ಲಿಸುವಂತೆ ಶಿಫಾರಸ್ಸು
ಮಾಡಿದೆ.

ಕೆಫೀನ್ ಅತಿಯಾದ ಕೆಫೀನ್ ಅಂಶ ಸೇವನೆ ಪುರುಷ ಹಾಗೂ ಮಹಿಳೆಯಿಬ್ಬರ ಫಲವತ್ತತೆಯ ಮೇಲೆ ಪರಿಣಾಮ ಬೀರಬಹುದೆಂದು ಸಂಶೋಧನೆಗಳು ತಿಳಿಸುತ್ತವೆ. ಆದ್ದರಿಂದ ದಂಪತಿ ಚಿಕಿತ್ಸಾ ಅವಧಿಯಲ್ಲಿ, ಪ್ರತಿ ದಿನ  ಸೇವಿಸುವ ಕಾಫಿ, ಟೀ, ಕೋಲಾ ಹಾಗೂ ಚಾಕೊಲೇಟ್ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಸಾಧಾರಣವಾಗಿ ಪುರುಷ ಹಾಗೂ ಮಹಿಳೆಯರಿಬ್ಬರೂ ಸಹ ದಿನವೊಂದರಲ್ಲಿ ಕಾಫಿ ಅಥವಾ ಟೀ ಸೇವನೆ ೨ ಕಪ್‌ಗಳಿಗೆ ಸೀಮಿತಗೊಳಿಸುವುದು ಸುರಕ್ಷಿತ.

ಧೂಮಪಾನ: ಸಿಗರೇಟ್ ಹೊಗೆ ಅನೇಕ ವಿಷಕಾರಿ ಅಂಶಗಳಿಂದ ಕೂಡಿದೆ. ಇದು ಪುರುಷ ಹಾಗೂ ಮಹಿಳೆ ಇಬ್ಬರಲ್ಲಿಯೂ ಬಂಜೆತನಕ್ಕೆ ಕಾರಣವಾಗಬಹುದು. ಧೂಮಪಾನ ಮಾಡುವಂತಹ ಪುರುಷರಲ್ಲಿ ವೀರ್ಯಾಣು ಉತ್ಪಾದನೆ ಅಸಹಜವಾಗುವುದನ್ನು ಪತ್ತೆ ಹಚ್ಚಲಾಗಿದೆ. ವೀರ್ಯಾಣುಗಳ ಗುಣಮಟ್ಟ ಹಾಗೂ ಪ್ರಮಾಣ ಎರಡರ ಮೇಲೂ ದುಷ್ಪರಿಣಾಮ ಉಂಟಾಗುತ್ತದೆ.

ಮಹಿಳೆಯರಲ್ಲಿ ಧೂಮಪಾನದ ಅಭ್ಯಾಸ, ಋತುಚಕ್ರದ ಮೇಲೆ ದುಷ್ಪರಿಣಾಮ ಬೀರುವಂತಹ ಹಾರ್ಮೋನಲ್ ಬದಲಾವಣೆಗಳಿಗೆ ಹಾಗೂ ಏನೊವ್ಯೂಲೇಷನ್‌ಗೆ (ಅಂಡೋತ್ಪತ್ತಿ ವಿಫಲವಾಗುವಂತಹ ಋತುಚಕ್ರ) ಕಾರಣವಾಗಬಹುದು.  

ಐವಿಎಫ್ ಚಿಕಿತ್ಸೆಯನ್ನು ಪಡೆಯುವಾಗ ಮಾನಸಿಕವಾಗಿ ಶಾಂತವಾಗಿರುವುದು ಮುಖ್ಯ ಹಾಗೂ ದೇಹದೊಳಗೆ ಅಳವಡಿಸಿದ ನಂತರ ಈ ಪ್ರಕ್ರಿಯೆ ಸ್ವಾಭಾವಿಕವಾಗಿ ಉಂಟಾಗುತ್ತದೆ. ಯಾವುದೇ ರೀತಿಯ ವ್ಯಾಯಾಮ, ಪಥ್ಯ ಅಥವಾ ಔಷಧಗಳಿಗಿಂತ ಇದು ಬಹಳ ಮುಖ್ಯ. 
ಜೊತೆಗೆ, ನೀವು ಹೆಚ್ಚು ತೂಕವಿದ್ದರೆ (ಅಥವಾ ಬಹಳ ತೆಳ್ಳಗಿದ್ದರೆ) ಐವಿಎಫ್‌ನ ಕಾರ್ಯಾಚರಣೆ ಯಶಸ್ವಿಯಾಗುವ ಅವಕಾಶಗಳು ಕಡಿಮೆ.

ಮಹಿಳೆಯರಲ್ಲಿ ಹೆಚ್ಚುತ್ತಿರುವ ಬೊಜ್ಜುತನದ ಪ್ರಕರಣಗಳು, ಮಹಿಳಾ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಬೊಜ್ಜುತನ (೩೦ಕ್ಕಿಂತ ಮೇಲ್ಪಟ್ಟ ಬಿಎಂಐ), ಮಹಿಳೆಯ ಫಲವತ್ತತೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ಗರ್ಭಪಾತದ ಅವಕಾಶ ಹೆಚ್ಚಾಗುತ್ತದೆ ಮತ್ತು ಬಹುಮುಖ್ಯವಾಗಿ, ಮಗುವಿಗೆ ಎಲ್ಲಾ ರೀತಿಯ ಅಪಾಯಗಳು ಎದುರಾಗಬಹುದಾದಂತಹ, ಅವಧಿಪೂರ್ವ (ಅಕಾಲಿಕ) ಹೆರಿಗೆ ಸಾಧ್ಯತೆ ಹೆಚ್ಚಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT