ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಎಸ್‌ಡಿ ನೇಮಕಕ್ಕೆ ಗುಪ್ತದಳ ಅನುಮತಿ ಕಡ್ಡಾಯ: ಸರ್ಕಾರ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಖಾಸಗಿ ವ್ಯಕ್ತಿ­ಗಳನ್ನು ಸಚಿವರ ವಿಶೇಷ ಕರ್ತವ್ಯಾ­ಧಿ­ಕಾರಿ­ಗಳನ್ನಾಗಿ (ಒಎಸ್‌ಡಿ) ನೇಮಿಸಿ­ಕೊಳ್ಳು­ವುದಕ್ಕೂ ಮುನ್ನ ಆ ಬಗ್ಗೆ ಗುಪ್ತ­ಚರ ದಳದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.

ಈ ಕುರಿತಂತೆ ಸಿಬ್ಬಂದಿ ಮತ್ತು ತರ­ಬೇತಿ ಇಲಾಖೆ (ಡಿಒಪಿಟಿ) ಸಚಿವಾಲಯ­ಗಳಿಗೆ ನಿರ್ದೇಶನ ನೀಡಿದೆ.

ಸರ್ಕಾರಿ ನೌಕರರನ್ನೇ ಈ ಹುದ್ದೆಗೆ ನೇಮಿಸಿ­ಕೊಳ್ಳುವುದಾದರೆ ಗುಪ್ತಚರ ದಳದ ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಿಂದಿನ ಯುಪಿಎ ಸರ್ಕಾರದಲ್ಲಿ ಆಯಕಟ್ಟಿನ ಹುದ್ದೆಯಲ್ಲಿದ್ದವರನ್ನು ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳದಂತೆಯೂ ಸರ್ಕಾರ ಸಚಿವರಿಗೆ ಹೇಳಿದೆ ಎನ್ನಲಾಗಿದೆ.

ಇತ್ತೀಚೆಗೆ ಮೂವರು ಸಚಿವರ ಆಪ್ತ ಕಾರ್ಯದರ್ಶಿಗಳ ನೇಮಕದಿಂದ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ಈ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT