ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದ ಮಾಜಿ ಎ.ಜಿ ಬಂಧನ

ಚಿಟ್‌ಫಂಡ್‌ ಹಗರಣ
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಐಎಎನ್‌ಎಸ್‌): ಬಹು­ಕೋಟಿ ಚಿಟ್‌­ಫಂಡ್‌ ಹಗ­ರ­­ಣಕ್ಕೆ ಸಂಬಂಧಿ­ಸಿ­ದಂತೆ ಕೇಂದ್ರ ತನಿಖಾ ದಳ (ಸಿಬಿಐ) ಒಡಿ­ಶಾದ ಮಾಜಿ  ಅಡ್ವೊ­ಕೇಟ್‌ ಜನರಲ್‌ ಅಶೋಕ್ ಮೊಹಾಂತಿ ಅವರನ್ನು ಸೋಮವಾರ ಬಂಧಿಸಿದೆ.

ನಕಲಿ  ಚಿಟ್‌ಫಂಡ್‌ ಕಂಪೆನಿ ಅರ್ಥ ಟಟ್ವಾ ಸಮೂಹ­ದೊಂದಿಗೆ ಅವರು ಸಂಬಂಧ ಹೊಂದಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ಹಲವಾರು ಸುತ್ತಿನ ವಿಚಾರಣೆಯ ನಂತರ ಸಿಬಿಐನ ವಿಶೇಷ ತನಿಖಾ ಘಟಕ ಮೊಹಾಂತಿ ಅವರನ್ನು ಬಂಧಿಸಿದೆ.
ಅಡ್ವೊಕೇಟ್‌ ಜನರಲ್‌ ಹುದ್ದೆಗೆ ಹತ್ತು ದಿನಗಳ ಹಿಂದಷ್ಟೇ ಅವರು ರಾಜೀನಾಮೆ ನೀಡಿದ್ದರು.  ಆರೋಗ್ಯ ತಪಾಸಣೆಯ ನಂತರ ಮೊಹಾಂತಿ ಅವ­ರನ್ನು ಸಿಬಿಐ ಕಚೇ­ರಿಗೆ ಕರೆತರ­ಲಾಯಿತು.

‘ನಾನು ಶುದ್ಧ ಮನಸ್ಸು ಹೊಂದಿ­ದ್ದೇನೆ. ಯಾವುದೇ ತಪ್ಪು ಕೆಲಸದಲ್ಲಿ ನಾನು ಭಾಗಿಯಾಗಿಲ್ಲ. ಸತ್ಯಕ್ಕೆ ಜಯ­ವಿದೆ’ ಎಂದು ಮೊಹಾಂತಿ ಸುದ್ದಿಗಾ­ರರಿಗೆ ತಿಳಿಸಿದ್ದಾರೆ.

ಅರ್ಥ ಟಟ್ವಾ ಸಮೂಹ ಮುಖ್ಯಸ್ಥ ಪ್ರದೀಪ್‌ ಸೇಥಿ ಅವರಿಂದ ಮನೆ ಪಡೆದು­ಕೊಂಡಿದ್ದಾರೆ ಎಂಬ ಆರೋಪ­ವನ್ನು ಮೊಹಂತಿ ತಳ್ಳಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT