ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತುವರಿದಾರರ ವಿರುದ್ಧ ಧರಣಿ

Last Updated 21 ಅಕ್ಟೋಬರ್ 2014, 8:21 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಘಂಟಂವಾರಿ­ಪಲ್ಲಿ ಗ್ರಾಮ ಪಂಚಾಯತಿಗೆ ಸೇರಿದ ಜಾಗದಲ್ಲಿ ಕಟ್ಟಡ ನಿರ್ಮಿಸ­ಲಾ­ಗುತ್ತಿದೆ.ಹಾಗೂ ರಾಜಕಾಲುವೆ ಒತ್ತು­ವರಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋ­ಪಿಸಿ ನ್ಯಾಷನಲ್‌ ಸ್ಟೂಡೆಂಟ್ಸ್ ಯೂನಿ­ಯನ್‌ ಆಫ್‌ ಇಂಡಿಯಾ (ಎನ್‌ಎಸ್‌­ಯುಐ) ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ಪಂಚಾ­ಯತಿ ವ್ಯಾಪ್ತಿಯ ಗ್ರಾಮಸ್ಥರು ಗ್ರಾ.ಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಎನ್‌ಎಸ್‌ಯುಐ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸೋಮಶೇಖರ್‌ ಮಾತನಾಡಿ, ಪಂಚಾಯತಿ ಅಧಿಕಾರಿ­ಗಳು, ಜನಪ್ರತಿನಿಧಿಗಳು ಪಂಚಾಯತಿಗೆ ಸೇರಿದ ಆಸ್ತಿಯನ್ನು ಸಂರಕ್ಷಿಸಲು ಪ್ರಯ­ತ್ನಿಸಬೇಕು. ಆಸ್ತಿ ಸಂರಕ್ಷಣೆಗೆ ಸಂಬಂಧಿ­ಸಿದಂತೆ ನಿರ್ಲಕ್ಷ್ಯ ತೋರುತ್ತಿರುವ ಕಾರಣ­ದಿಂದಲೇ ಒತ್ತುವರಿ ನಡೆ ತ್ತಿದೆ ಎಂದು ಆರೋಪಿಸಿದರು.

ರಿಯಲ್‌ಎಸ್ಟೇಟ್‌ನವರು ಮತ್ತು ಶ್ರೀಮಂತರ ಪ್ರಭಾವದಿಂದ ಗ್ರಾ.ಪಂ. ಅಧಿಕಾರಿಗಳು ಎಲ್ಲೆಂದರಲ್ಲಿ ಕಟ್ಟಡ ಕಟ್ಟಲು ಅವಕಾಶ ನೀಡುತ್ತಿದ್ದಾರೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಅವಕಾಶ ಇಲ್ಲ­ದಿದ್ದರೂ ಪರವಾನಗಿ ನೀಡಲಾಗುತ್ತಿದೆ. ಈ ಎಲ್ಲ ಅಂಶವನ್ನು ಗಂಭೀರವಾಗಿ ಪರಿ­ಶೀಲಿಸಿ, ಜಿಲ್ಲಾಧಿಕಾರಿ ಮತ್ತು ಉಪ­ವಿಭಾ­ಗಾಧಿಕಾರಿ ಒತ್ತುವರಿ ತೆರವು­ಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯತಿ ಅಧಿಕಾರಿ ಶಿವಪ್ಪ, ಮನವಿಪತ್ರ ಸ್ವೀಕರಿಸಿದರು. ಪರಿ­ಶೀಲನೆ ನಡೆಸಿ, ಸೂಕ್ತ ಕ್ರಮ ತೆಗೆದು­ಕೊಳ್ಳ­ಲಾಗುವುದು ಎಂದರು. ಎನ್‌­ಎಸ್‌­ಯುಐ ಸಂಘಟನೆ ಮುಖಂಡ­ರಾದ ಮಂಜುನಾಥ್, ಅಜಯ್, ಅಶ್ವ­ತ್ಥಪ್ಪ, ತಿಪ್ಪಣ್ಣ, ಇರ್ಫಾನ್‌, ಸೀನಪ್ಪ, ಶ್ರೀನಾಥ್, ನಾಗ­ರಾಜು, ಅಮೀರ್, ಪ್ರತಿಭಟನೆ­ಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT