ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಪ್ಪಂದ ಮೀರಿದ ಮಾಹಿತಿ ಇಲ್ಲ

ಭಾರತಕ್ಕೆ ಸ್ವಿಸ್‌ ಸರ್ಕಾರ ಸ್ಪಷ್ಟನೆ
Last Updated 8 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸ್ವಿಸ್‌ ಬ್ಯಾಂಕ್‌­ನಲ್ಲಿ ಬೇನಾಮಿ ಹಣ ಠೇವಣಿ ಮಾಡಿದ­ವರ ಕುರಿತು ಅಂಕಿಸಂಖ್ಯೆ ಮಾಹಿತಿ ನೀಡು­ವಂತೆ ಭಾರತ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅಲ್ಲಿನ ಸರ್ಕಾರ, ದ್ವಿಪಕ್ಷೀಯ ತೆರಿಗೆ ಒಪ್ಪಂದ­ವನ್ನು ಮೀರಿದ ಮಾಹಿತಿಯನ್ನು ನೀಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

‘ತೆರಿಗೆ ವಂಚನೆಯನ್ನು ತಡೆಗಟ್ಟಲು ನಿಮಗೆಷ್ಟು ಕಾಳಜಿ ಇದೆಯೋ ನಮಗೂ ಅಷ್ಟೇ ಇದೆ, ಆದರೆ ಇದೇ ಹೊತ್ತಿಗೆ ಉಭಯ ರಾಷ್ಟ್ರಗಳು ತಮ್ಮ ತಮ್ಮ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕಾನೂನು ನಿರ್ಬಂಧಗಳನ್ನೂ ಪಾಲಿಸ­ಬೇಕಾ­ಗುತ್ತದೆ’ ಎಂದು ಸ್ವಿಟ್ಜರ್‌ಲೆಂಡ್‌ ಸರ್ಕಾರ ಪುನರುಚ್ಚರಿಸಿದೆ.

ಭಾರತೀಯ ಮೂಲದವರು ಎಚ್‌ಎಸ್‌­­­­ಬಿಸಿ ಸ್ವಿಸ್‌ ಬ್ಯಾಂಕ್‌ ಶಾಖೆ­ಗ­ಳಲ್ಲಿ ಬೇನಾಮಿ ಮೊತ್ತವನ್ನು ಠೇವಣಿ ಮಾಡಿ­­ರುವ ಕುರಿತು ಪೂರ್ಣ ಮಾಹಿತಿ ನೀಡು­­ವಂತೆ ಕೋರಿ ಹಣಕಾಸು ಸಚಿವ ಪಿ. ಚಿದಂಬರಂ ಈಚೆಗೆ ಸ್ವಿಟ್ಜರ್‌ಲೆಂಡ್‌ ಹಣ­ಕಾಸು ಸಚಿವರಿಗೆ ಖಾರವಾಗಿ ಪತ್ರ ಬರೆದ ಹಿನ್ನೆಲೆಯಲ್ಲಿ ಸ್ವಿಸ್‌ ಫೆಡರಲ್‌ ಸರ್ಕಾ­ರದ ಹಣಕಾಸು ಇಲಾಖೆಯ ವಕ್ತಾ­ರ­­ರೊಬ್ಬರು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆ ದುಪ್ಪಟ್ಟು ತೆರಿಗೆ ಒಪ್ಪಂದ (ಡಬಲ್‌ ಟ್ಯಾಕ್ಸೇಶನ್‌ ಅಗ್ರೀ­ಮೆಂಟ್‌) ಅನ್ವಯ ಸಹಕಾರ ಏರ್ಪ­ಟ್ಟಿದೆ. ಅಂತಾರಾಷ್ಟ್ರೀಯ ಮಾನ­ದಂಡಕ್ಕೆ ಅನುಗುಣವಾಗಿ ಈ ಒಪ್ಪಂದ­ವನ್ನು 2010ರ ಆಗಸ್‌್ಟನಲ್ಲಿ ತಿದ್ದು­ಪಡಿಗೆ ಒಳಪಡಿಸಲಾಗಿದೆ. ಈ ಒಪ್ಪಂದದ ಅನ್ವಯ ಬ್ಯಾಂಕಿಂಗ್‌ ಮಾಹಿತಿ ಸೇರಿ­ದಂತೆ ಹಲವು ಮನವಿ­ಗಳನ್ನು ಸ್ವೀಕರಿಸ­ಲಾ­ಗಿದ್ದು ಇವುಗಳಿಗೆಲ್ಲ ಧನಾತ್ಮಕವಾ­ಗಿಯೇ ಉತ್ತರ ನೀಡಲಾ­ಗಿದೆ. ಆದರೆ ಒಪ್ಪಂದ ಮೀರಿದ ಮನವಿ­ಗಳಿಗೆ ಇದೇ ರೀತಿ ಉತ್ತರ ನೀಡಲು ಸಾಧ್ಯವಾ­ಗದು ಎಂದು ಈ ವಕ್ತಾರರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT